ಪೋಷಕರೇ ಹುಷಾರ್‌! ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ಈ 5 ವಿಚಾರ ಮಾತನಾಡಲೇಬೇಡಿ… Parents Tips

Parents Tips

Parents Tips : ಮಕ್ಕಳಿರುವ ಮನೆ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಆರು ವರ್ಷದವರೆಗೆ ಮಕ್ಕಳ ಮಾನಸಿಕ ಬೆಳವಣಿಗೆ ವೇಗವಾಗಿರುತ್ತದೆ. ಅವರ ಶುದ್ಧ ಮನಸ್ಸುಗಳು ಪಾಲಕರು ಮತ್ತು ಸಮಾಜವನ್ನು ನೋಡಿ ಕಲಿಯುತ್ತವೆ. ಅನೇಕ ಹೊಸ ವಿಷಯಗಳು, ಹೊಸ ಕಾರ್ಯಗಳು ಮತ್ತು ಪದಗಳನ್ನು ಕಲಿಯಲು ಸಿದ್ಧರಿರುತ್ತಾರೆ. ಅದಕ್ಕಾಗಿಯೇ ಪಾಲಕರು ತಮ್ಮ ಮಕ್ಕಳ ಪಾಲನೆಯ ಬಗ್ಗೆ ಬಹಳ ಜಾಗರೂಕರಾಗಿರಬೇಕು. ವಿಶೇಷವಾಗಿ, ಪಾಲಕರು ಮಾತನಾಡುವ ರೀತಿ ಮತ್ತು ಮನೆಯ ಪರಿಸರವು ಮಗುವಿಗೆ ಸೂಕ್ತವಾಗಿರಬೇಕು. 6 ರಿಂದ 7 ವರ್ಷದೊಳಗಿನ ಮಕ್ಕಳ ಮುಂದೆ ಪಾಲಕರು ಏನು ಮಾಡಬಾರದು ಮತ್ತು ಹೇಳಬಾರದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

* ಒಂದು ಕಾಲದಲ್ಲಿ ನಮ್ಮ ಕುಟುಂಬದಲ್ಲಿ 10 ಜನ ಸಹೋದರ ಹಾಗೂ ಸಹೋದರಿಯರು ಇರುತ್ತಿದ್ದರು. ಕುಟುಂಬವು ತುಂಬಾ ದೊಡ್ಡದಾಗಿದ್ದರಿಂದ ಅವಿಭಕ್ತ ಕುಟುಂಬ ಎಂದು ಕರೆಯುತ್ತಿದ್ದೆವು. ಆದರೆ, ಈಗ ಆರ್ಥಿಕ ತೊಂದರೆಗಳಿಂದಾಗಿ ಕೇವಲ ಒಂದು ಅಥವಾ ಎರಡು, ಕೆಲವೊಮ್ಮೆ ಮೂರು ಮಕ್ಕಳಿಗೆ ಮಾತ್ರ ಜನ್ಮ ನೀಡುತ್ತಾರೆ. ಆದರೆ, ನೀವು ತಿಳಿದುಕೊಳ್ಳಬೇಕಾದ ಮುಖ್ಯ ಸಂಗತಿ ಇಲ್ಲಿದೆ. ಅದೇನೆಂದರೆ, ನಿಮ್ಮ ಮಕ್ಕಳ ಮುಂದೆ ನಿಮ್ಮ ಆರ್ಥಿಕ ತೊಂದರೆಗಳ ಬಗ್ಗೆ ಎಂದಿಗೂ ಮಾತನಾಡಬೇಡಿ. ಮಕ್ಕಳು ಈ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಲಕರು ಅಂದುಕೊಳ್ಳುತ್ತಾರೆ. ಆದರೆ, ಮಗುವಿಗೆ ಇಡೀ ವಿಷಯ ಅರ್ಥವಾಗದಿದ್ದರೂ ಸಹ, ಹೆತ್ತವರು ತೊಂದರೆಯಲ್ಲಿದ್ದಾರೆ ಎಂದು ಅರ್ಥವಾಗುತ್ತದೆ. ಇದರಿಂದಾಗಿ, ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ, ಎಷ್ಟೇ ಕಷ್ಟವಾದರೂ ನಿಮ್ಮ ಮಕ್ಕಳ ಮುಂದೆ ಹಣದ ಬಗ್ಗೆ ಮಾತನಾಡಬೇಡಿ.

* ನಿಮ್ಮ ಮಕ್ಕಳ ಮುಂದೆ ನಿಮಗೆ ಆಗಿರುವ ಅವಮಾನಗಳು ಮತ್ತು ನಡೆದಿರುವ ಜಗಳಗಳ ಬಗ್ಗೆ ಹೇಳಬೇಡಿ. ಅಲ್ಲದೆ, ಗಂಡ ಮತ್ತು ಹೆಂಡತಿಯ ನಡುವಿನ ಯಾವುದೇ ಸಮಸ್ಯೆಗಳನ್ನು ಮಕ್ಕಳ ಮುಂದೆ ತರಬೇಡಿ. ಅದರಲ್ಲೂ ವಿಶೇಷವಾಗಿ ನೀವು ಜೋರಾಗಿ ಕೂಗಾಡಿ ಮಕ್ಕಳ ಮುಂದೆ ಜಗಳವಾಡಿದರೆ, ನಿಮ್ಮ ಮಕ್ಕಳು ಮಾನಸಿಕವಾಗಿ ತೊಂದರೆಗೆ ಒಳಗಾಗುತ್ತಾರೆ. ಏಕೆಂದರೆ ಮಕ್ಕಳಿಗೆ ತಮ್ಮ ತಂದೆ-ತಾಯಿಯೇ ಒಂದು ಭಾವನೆ. ಆ ಭಾವನೆಯನ್ನು ಕೊಂಚ ವ್ಯತ್ಯಾಸವಾದರು ಮನಸ್ಸಿಗೆ ಘಾಷಿಯಾಗುತ್ತದೆ. ಪಾಲಕರಲ್ಲಿ ಒಬ್ಬರ ಅನುಪಸ್ಥಿತಿಯು ಮಕ್ಕಳ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ, ನಿಮ್ಮ ನಡುವೆ ಎಷ್ಟೇ ಜಗಳಗಳಿದ್ದರೂ ನಿಮ್ಮ ಮಕ್ಕಳೊಂದಿಗೆ ಶಾಂತಿ ಕಾಪಾಡುವುದು ಉತ್ತಮ.

ಇದನ್ನೂ ಓದಿ: ಮಹಿಳೆಯರಲ್ಲಿನ ಕುಡಿತದ ಚಟದ ಹಿಂದಿನ ರಹಸ್ಯ ಕೊನೆಗೂ ಬಹಿರಂಗ! ಎಲ್ಲದಕ್ಕೂ ಆ ಹಾರ್ಮೋನ್ ಕಾರಣ ​​| Alcohol

* ಸಾಮಾನ್ಯವಾಗಿ ಕೆಲವು ಮಕ್ಕಳು ತಮ್ಮ ತಾಯಿ ಎತ್ತಿಕೊಳ್ಳದ ಹೊರತು, ಪಕ್ಕದಲ್ಲಿ ಮಲಗಿಸದ ಹೊರತು ಅಥವಾ ಕತೆಗಳು ಮತ್ತು ಹಾಡುಗಳನ್ನು ಹಾಡದ ಹೊರತು ನಿದ್ರಿಸುವುದಿಲ್ಲ. ಮಕ್ಕಳಿಗೆ ಊಟ ತಿನ್ನಿಸುವುದು ಮತ್ತು ಮಲಗಿಸುವುದು ಸ್ವಲ್ಪ ಕಷ್ಟ. ಆದರೆ, ಕೆಲವು ತಾಯಂದಿರು ಮಕ್ಕಳನ್ನು ಹೆದರಿಸಿ ಊಟ ಮಾಡಿಸಲು ಮತ್ತು ಮಲಗಿಸಲು ಪ್ರಯತ್ನಿಸುತ್ತಾರೆ. ಆದರೆ, ಅದು ಮಗುವಿಗೆ ಒಳ್ಳೆಯದಲ್ಲ. ಇವೆಲ್ಲವೂ ಮಗುವಿನ ಮನಸ್ಸಿನಲ್ಲಿ ಭಯವನ್ನು ಉಂಟುಮಾಡುತ್ತವೆ ಮತ್ತು ಅವರ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ.

* ಕೆಲ ಪೋಷಕರು ತಮ್ಮ ಮಕ್ಕಳ ಶಾಲಾ ಶಿಕ್ಷಕರ ಬಗ್ಗೆ ತಮಾಷೆಯ ರೀತಿಯಲ್ಲಿ ಮಾತನಾಡುತ್ತಾರೆ. ಆದರೆ, ಅದು ತಪ್ಪು. ಮಕ್ಕಳ ಮುಂದೆ ಶಿಕ್ಷಕರು ಮತ್ತು ಶಿಕ್ಷಣದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ಏಕೆಂದರೆ, ಅದು ಮಗುವಿನ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ತರುತ್ತದೆ. ಇದು ಅವರ ಅಧ್ಯಯನದ ಬಗ್ಗೆ ಅಸಡ್ಡೆ ಮೂಡಿಸುತ್ತದೆ. ಆದ್ದರಿಂದ, ನಿಮ್ಮ ಮಕ್ಕಳ ಅಧ್ಯಯನ ಮತ್ತು ಶಿಕ್ಷಕರಿಗೆ ಸಂಪೂರ್ಣ ಗೌರವ ನೀಡಿ. ಅಲ್ಲದೆ, ನಿಮ್ಮ ಮಕ್ಕಳು ಅಧ್ಯಯನದಲ್ಲಿ ಹಿಂದುಳಿದಿದ್ದರೆ, ಅವರನ್ನು ಪ್ರೋತ್ಸಾಹಿಸಿ. ಆದರೆ, ಅವರನ್ನು ಇತರ ಮಕ್ಕಳ ಮುಂದೆ ಬೈಯ್ಯಬೇಡಿ ಅಥವಾ ಹೊಡೆಯಬೇಡಿ. ನೀವು ಹೀಗೆ ಮಾಡಿದರೆ, ಮಕ್ಕಳು ಇನ್ನಷ್ಟು ಮಂಕಾಗುತ್ತಾರೆ.

* ಮಕ್ಕಳು ಮನೆಯಲ್ಲಿ ಅಜ್ಜಿ, ಅಜ್ಜ ಮುಂತಾದ ಹಿರಿಯರಿಗೆ ಬೇಗನೆ ಹತ್ತಿರವಾಗುತ್ತಾರೆ. ಏಕೆಂದರೆ ಹಿರಿಯರು ಬಹಳಷ್ಟು ಜೀವನವನ್ನು ಕಂಡಿರುತ್ತಾರೆ. ಅವರು ಹೇಳುವ ಮಾತುಗಳಿಗೆ ಮಕ್ಕಳು ಬೇಗನೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ನೀವು ಮನೆಯಲ್ಲಿ ಮಕ್ಕಳ ಮುಂದೆ ಹಿರಿಯರಿಗೆ ಗೌರವದಿಂದ ವರ್ತಿಸಬೇಕು. ಪೋಷಕರನ್ನು ಗೌರವಿಸುವ ಮಕ್ಕಳು ಬಹಳಷ್ಟು ಕಲಿಯುತ್ತಾರೆ. ಆದ್ದರಿಂದ ನೀವು ಎಲ್ಲರನ್ನೂ ಪ್ರೀತಿಸುತ್ತಿದ್ದರೆ, ನಿಮ್ಮ ಮಕ್ಕಳು ಸಹ ಅವರನ್ನು ಅನುಸರಿಸುತ್ತಾರೆ.

ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಜಿಂಕೆಗಳಿಗೆ ಹೊಂಚು ಹಾಕಿರುವ ಚೀತಾವನ್ನು ಪತ್ತೆಹಚ್ಚಬಲ್ಲರು! Optical Illusion

ನೀವು ಈ ದಿನಾಂಕಗಳಲ್ಲಿ ಜನಿಸಿದ್ದೀರಾ? ಹಾಗಾದರೆ ಇದೇ ನೋಡಿ ನಿಮ್ಮ ವರ ಮತ್ತು ಶಾಪ! Numerology

Share This Article

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…

ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips

ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…

ಅಳದಿದ್ದರು ಕಣ್ಣೀರು ಬರುತ್ತಿದೆಯೇ; ತಜ್ಞರು ಸೂಚಿಸಿರುವ ಸಿಂಪಲ್ ಪರಿಹಾರ ಹೀಗಿದೆ.. Health Tips

ಸೌಂದರ್ಯವನ್ನು ಅಳೆಯಲು ಕಣ್ಣುಗಳು ಒಂದು ಪ್ರಮುಖ ಮಾನದಂಡವಾಗಿದೆ. ಇದು ಪ್ರಮುಖ ಇಂದ್ರಿಯಗಳಲ್ಲಿ ಒಂದಾಗಿದೆ. ಅದಿಲ್ಲದೆ ಜೀವನವನ್ನು…