ಮಹಿಳೆಯರಲ್ಲಿನ ಕುಡಿತದ ಚಟದ ಹಿಂದಿನ ರಹಸ್ಯ ಕೊನೆಗೂ ಬಹಿರಂಗ! ಎಲ್ಲದಕ್ಕೂ ಆ ಹಾರ್ಮೋನ್ ಕಾರಣ ​​| Alcohol

Alcohol

Alcohol : ಈಸ್ಟ್ರೊಜೆನ್ ಹಾರ್ಮೋನ್ ಮಟ್ಟ ಹೆಚ್ಚಾದಾಗ ಮಹಿಳೆಯರು ಅತಿಯಾಗಿ ಮದ್ಯಪಾನ ಮಾಡುವ ಸಾಧ್ಯತೆ ಹೆಚ್ಚು ಎಂದು ಅಮೆರಿಕದಲ್ಲಿ ನಡೆಸಿದ ಅಧ್ಯಯನವು ಕಂಡುಹಿಡಿದಿದೆ. ಅಂದಹಾಗೆ ಈಸ್ಟ್ರೊಜೆನ್ ಎಂಬುದು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆ ಮತ್ತು ಲೈಂಗಿಕ ಗುಣಲಕ್ಷಣಗಳನ್ನು ನಿಯಂತ್ರಿಸುವ ಹಾರ್ಮೋನುಗಳ ಗುಂಪಾಗಿದೆ.

ಅಮೆರಿಕದ ವೀಲ್ ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನದ ವಿವರಗಳನ್ನು ಇತ್ತೀಚೆಗೆ ‘ನೇಚರ್ ಕಮ್ಯುನಿಕೇಷನ್ಸ್’ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಮಹಿಳೆಯರಲ್ಲಿನ ಈಸ್ಟ್ರೊಜೆನ್ ಮಟ್ಟಗಳು ಮತ್ತು ಅತಿಯಾದ ಕುಡಿಯುವ ಅಭ್ಯಾಸಗಳ ನಡುವೆ ನಿಕಟ ಸಂಬಂಧವಿದೆ ಎಂದು ಸಂಶೋಧಕರು ಮೊದಲ ಬಾರಿಗೆ ಕಂಡುಕೊಂಡಿದ್ದಾರೆ. ಒಬ್ಬ ಮಹಿಳೆ ಒಂದೇ ಬಾರಿಗೆ ನಾಲ್ಕು ಪಾನೀಯಗಳಿಗಿಂತ ಹೆಚ್ಚು ಪಾನೀಯಗಳನ್ನು ಸೇವಿಸಿದರೆ, ಆ ಅಭ್ಯಾಸವನ್ನು ಅತಿಯಾದ ಕುಡಿಯುವ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ.

ಈ ಪ್ರಯೋಗವನ್ನು ಇಲಿಗಳ ಮೇಲೆ ನಡೆಸಿ, ದೃಢಪಡಿಸಲಾಗಿದೆ. ಗಂಡು ಇಲಿಗಳಿಗೆ ಹೋಲಿಸಿದರೆ, ಹೆಣ್ಣು ಇಲಿಗಳ ಮೆದುಳಿನಲ್ಲಿರುವ ‘ಸ್ಟ್ರಿಯಾ ಟರ್ಮಿನಲಿಸ್‌ ಬೆಡ್ ನ್ಯೂಕ್ಲಿಯಸ್’ ನರಕೋಶಗಳು ಈಸ್ಟ್ರೊಜೆನ್ ಹಾರ್ಮೋನ್​ ಅಧಿಕವಾಗಿದ್ದಾಗ ಮದ್ಯಪಾನ ಮಾಡಲು ಹೆಚ್ಚು ಪ್ರೇರಿಪಿಸುತ್ತವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಜಸ್​ಪ್ರೀತ್​ ಬುಮ್ರಾಗೆ ಟೀಮ್​ ಇಂಡಿಯಾದ ಕಾಯಂ ನಾಯಕತ್ವ ಅನುಮಾನ! ಹೀಗಿದೆ ಕಾರಣ…

ಮಹಿಳೆಯರು ಅತಿಯಾಗಿ ಕುಡಿಯಲು ಕಾರಣವೇನು ಎಂಬುದನ್ನು ಅರ್ಥಮಾಡಿಕೊಳ್ಳುವುದು ಈವರೆಗೂ ಕಷ್ಟಕರವಾಗಿತ್ತು. ಏಕೆಂದರೆ ಹಿಂದಿನ ಅಧ್ಯಯನಗಳನ್ನು ಪುರುಷರ ಮೇಲೆ ಮಾತ್ರ ನಡೆಸಲಾಗಿದೆ. ಆದರೆ, ಪ್ರಸ್ತುತ ಸಂಶೋಧನೆಗಳು ಮಹಿಳೆಯರ ಕುಡಿಯುವ ಅಭ್ಯಾಸದ ಅಧ್ಯಯನದಲ್ಲಿ ಮಹತ್ವದ ಅಂಶಗಳನ್ನು ನೀಡಿದೆ ಎಂದು ವೀಲ್ ಕಾರ್ನೆಲ್ ವಿಶ್ವವಿದ್ಯಾಲಯದ ಔಷಧಶಾಸ್ತ್ರದ ಅಸೋಸಿಯೇಟ್ ಪ್ರೊಫೆಸರ್ ಮತ್ತು ಈ ವರದಿಯ ಪ್ರಮುಖ ಲೇಖಕಿ ಕ್ರಿಸ್ಟೀನ್ ಪೀಲ್ ಹೇಳಿದರು.

ಮಹಿಳೆಯರಲ್ಲಿನ ಋತುಚಕ್ರದಂತೆಯೇ ಇಲಿಗಳ ಈಸ್ಟ್ರೊಜೆನ್ ಚಕ್ರದ ಸಮಯದಲ್ಲಿ ಈ ಅಧ್ಯಯನವನ್ನು ನಡೆಸಲಾಯಿತು. ಈಸ್ಟ್ರೊಜೆನ್ ಮಟ್ಟಗಳು ಹೆಚ್ಚಿರುವ ದಿನಗಳಲ್ಲಿ ಹೆಣ್ಣು ಇಲಿಗಳು ಹೆಚ್ಚು ಮದ್ಯಪಾನ ಮಾಡುವುದನ್ನು ಗಮನಿಸಲಾಯಿತು. ಈ ಹೊಸ ಸಂಶೋಧನೆಯು ಮಹಿಳಾ ಮದ್ಯ ವ್ಯಸನಿಗಳಿಗೆ ಚಿಕಿತ್ಸಾ ವಿಧಾನಗಳನ್ನು ಬದಲಾಯಿಸುವಲ್ಲಿ ಹೆಚ್ಚಿನ ಸಹಾಯ ಮಾಡುತ್ತದೆ ಎಂದು ಸಂಶೋಧಕರು ನಂಬಿದ್ದಾರೆ. (ಏಜೆನ್ಸೀಸ್​)

ಭಾರತೀಯ ಚಿತ್ರರಂಗದ ಮೊದಲ ಲಿಪ್​ಲಾಕ್ ಸೀನ್​! ಯಾವ ಸಿನಿಮಾ? ನಟಿ ಯಾರು? ಇಲ್ಲಿದೆ ಉತ್ತರ… First Lip Lock Scene ​

ಕೊನೆಗೂ ಫಿಕ್ಸ್​ ಆಯ್ತು ಪ್ರಭಾಸ್​ ಮದುವೆ! ವಧು ಯಾರೆಂಬುದನ್ನು ಬಹಿರಂಗಪಡಿಸಿದ ನಟ ರಾಮ್​ಚರಣ್​ | Prabhas

Share This Article

ಬಿಸಿಲಿನ ವಾತಾವರಣದಲ್ಲಿ ನಿಮ್ಮ ಕಾರಿನೊಳಗೆ ತಂಪಾಗಿರಲು ಬಯಸುವಿರಾ? ಈ ಟ್ರಿಕ್ ಟ್ರೈ ಮಾಡಿ.. Summer Car Tips

ಬೆಂಗಳೂರು: (Summer Car Tips ) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿಇಂದ ರಕ್ಷಣೆ ಪಡೆಯಲು…

ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್​ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol

Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್​ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…

ಮೊಬೈಲ್​​ ಪಕ್ಕದಲ್ಲಿಟ್ಟು ಮಲಗಿದ್ರೆ ಏನಾಗುತ್ತೆ? ಇಷ್ಟು ದಿನ ಅಂದುಕೊಂಡಿದ್ದೆಲ್ಲ ಸುಳ್ಳಾ? ಇಲ್ಲಿದೆ ಅಸಲಿ ಸಂಗತಿ! Mobile Addiction

Mobile Addiction : ಪ್ರಸ್ತುತ ಜೀವನಶೈಲಿಯಲ್ಲಿ ಮೊಬೈಲ್ ಫೋನ್‌ಗಳು ಹಲವರಿಗೆ ಅವಿಭಾಜ್ಯ ಅಂಗವಾಗಿದೆ. ಕೂತರು, ನಿಂತರು…