ಭಾರತೀಯ ಚಿತ್ರರಂಗದ ಮೊದಲ ಲಿಪ್​ಲಾಕ್ ಸೀನ್​! ಯಾವ ಸಿನಿಮಾ? ನಟಿ ಯಾರು? ಇಲ್ಲಿದೆ ಉತ್ತರ... First Lip Lock Scene ​

First Lip Lock Scene
Published on

First Lip Lock Scene : ಸಿನಿಮಾ ರಂಗದಲ್ಲಿ ಇಂದು ಲಿಪ್​ಲಾಕ್​ ಸೀನ್​ಗಳು ಸಾಮಾನ್ಯವಾಗಿಬಿಟ್ಟಿವೆ. ಪ್ರೇಮಕತೆ ಆಧಾರಿತ ಸಿನಿಮಾಗಳಲ್ಲಂತೂ ಈ ಚುಂಬನದ ದೃಶ್ಯ ಇರಲೇಬೇಕು. ಈ ಹಿಂದೆ ಹಾಲಿವುಡ್​ ಸಿನಿಮಾಗಳಲ್ಲಿ ಮಾತ್ರ ಇಂತಹ ದೃಶ್ಯಗಳು ಕಂಡುಬರುತ್ತಿದ್ದವು. ಆದರೆ, ದಿನಗಳು ಕಳೆದ ಸಿನಿಮಾದ ಪ್ರಭಾವ ಹೆಚ್ಚಾಗುತ್ತಿದ್ದಂತೆ ರೊಮ್ಯಾಂಟಿಕ್​ ದೃಶ್ಯಗಳು ಎಲ್ಲ ಸಿನಿ ರಂಗವನ್ನು ಆವರಿಸಿಕೊಂಡಿತು.

ಭಾರತದಲ್ಲಿ ರೊಮ್ಯಾಂಟಿಕ್​ ಸೀನ್​ಗಳಿಂದರೆ ಸಾಕು ಮೊದಲು ನೆನಪಾಗುವುದು ಬಾಲಿವುಡ್​ ಅಥವಾ ಹಿಂದಿ ಚಿತ್ರರಂಗ. ಆದರೆ, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲೂ ಲಿಪ್​ಲಾಕ್​ ದೃಶ್ಯಗಳು ಕಾಮಾನ್​ ಆಗಿವೆ. ಅಷ್ಟಕ್ಕೂ ಈ ಲಿಪ್​ಲಾಕ್​ ಸೀನ್​ ಭಾರತದಲ್ಲಿ ಯಾವಾಗ ಆರಂಭವಾಯಿತು? ಯಾವ ಸಿನಿಮಾ? ಯಾವ ನಟಿ ಮೊದಲ ಲಿಪ್​ಲಾಕ್​ ಸೀನ್​ನಲ್ಲಿ ನಟಿಸಿದರು ಎಂಬ ಪ್ರಶ್ನೆಗೆ ಬಹುತೇಕರಿಗೆ ಉತ್ತರವೇ ತಿಳಿದಿಲ್ಲ. ಆದರೆ, ನಾವಿಂದು ಈ ಕುರಿತು ತಿಳಿಸುತ್ತೇವೆ.

ಭಾರತದ ಸಿನಿಮಾ ರಂಗದಲ್ಲಿ ಮೊದಲ ಚುಂಬನ ದೃಶ್ಯವನ್ನು ಬಾಲಿವುಡ್‌ನಲ್ಲಿ ಚಿತ್ರೀಕರಿಸಲಾಯಿತು. ಪರದೆಯ ಮೇಲೆ ಕಂಪ್ಲೀಟ್​ ಲಿಪ್​ಲಾಕ್​ ದೃಶ್ಯದಲ್ಲಿ ನಟಿಸಿದ ಮೊದಲ ನಟಿ ದೇವಿಕಾ ರಾಣಿ. ಈ ದೃಶ್ಯವನ್ನು 92 ವರ್ಷಗಳ ಹಿಂದೆಯೇ ಚಿತ್ರೀಕರಿಸಲಾಗಿದೆ.

1933ರಲ್ಲಿ ಬಿಡುಗಡೆಯಾದ ಕರ್ಮ ಚಿತ್ರದಲ್ಲಿ ಮೊದಲ ಲಿಪ್​ಲಾಕ್​ ದೃಶ್ಯವನ್ನು ಚಿತ್ರೀಕರಿಸಲಾಯಿತು. ಇದರಲ್ಲಿ ನಟಿ ದೇವಿಕಾ ರಾಣಿ ಅವರು ನಟ ಹಾಗೂ ನಿರ್ದೇಶಕ ಹಿಮಾಂಶು ರಾಯ್ ಎದುರು ನಟಿಸಿದ್ದರು. ಆ ಸಮಯದಲ್ಲಿ ಇಬ್ಬರೂ ಮದುವೆಯಾಗಿದ್ದರು. ಅಲ್ಲದೆ, ಈ ಸಿನಿಮಾ ಸಹ ನಿರ್ಮಾಪಕರು ಕೂಡ ಆಗಿದ್ದರು. ಈ ಲಿಪ್​ಲಾಕ್​ ದೃಶ್ಯವು ಸುಮಾರು ನಾಲ್ಕು ನಿಮಿಷಗಳ ಕಾಲ ನಡೆಯಿತು. ಆದಾಗ್ಯೂ, ಹಲವಾರು ವಿವಾದಗಳಿಂದಾಗಿ ಚಿತ್ರವನ್ನು ನಿಷೇಧಿಸಲಾಯಿತು. ಇದಾದ ನಂತರ ಅನೇಕ ಸಿನಿಮಾಗಳಲ್ಲಿ ಇಂಟಿಮೇಟ್​ ದೃಶ್ಯಗಳು ಕ್ರಮೇಣ ಕಾಮನ್​ ಆದವು.

ಅಂದಹಾಗೆ ಈ ಕರ್ಮ ಸಿನಿಮಾವನ್ನು ಬಾಂಬೆ ಟಾಕೀಸ್​ ಸಂಸ್ಥೆ ನಿರ್ಮಾಣ ಮಾಡಿತ್ತು. ಆದರೆ, ವಿವಾದಗಳಿಂದ ಬಿಡುಗಡೆಯಾಗಲಿಲ್ಲ. 1929ರಲ್ಲೇ ಹಿಮಾಂಶು ರಾಯ್​ ಅವರು ದೇವಿಕಾ ರಾಣಿ ಅವರನ್ನು ಮದುವೆಯಾದರು. ಇದಕ್ಕೂ ಮುನ್ನ ಅಂದರೆ 1924ರಲ್ಲಿ ಮೇರಿ ಹೈನ್ಲಿನ್ ಎಂಬುವರನ್ನು ಮದುವೆಯಾಗಿದ್ದರು. ಆದರೆ, ಎರಡೇ ವರ್ಷದಲ್ಲಿ ಅವರಿಂದ ದೂರವಾಗಿ 1929ರಲ್ಲಿ ದೇವಿಕಾ ರಾಣಿಯನ್ನು ವರಿಸಿದರು. 1940ರಲ್ಲಿ ಹಿಮಾಂಶು ರಾಯ್​ ಇಹಲೋಕ ತ್ಯಜಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net