

Prabhas : ತೆಲುಗು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದರೆ ಅದು ಪ್ರಭಾಸ್. ವಯಸ್ಸು 45 ವರ್ಷವಾದರೂ ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಕೊನೆಯದಾಗಿ ಅವರ ನಟನೆಯ ಕಲ್ಕಿ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿತು. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದು, ಸಿನಿಮಾಗಳಲ್ಲೇ ಮುಳುಗಿ ಹೋಗಿರುವ ಪ್ರಭಾಸ್ ಮದುವೆಯನ್ನೇ ಮರೆತುಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅಭಿಮಾನಿಗಳು ಮಾತ್ರ ಪ್ರಭಾಸ್ ಮದುವೆ ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಇದೀಗ ಪ್ರಭಾಸ್ ಅಭಿಮಾನಿಗಳು ಖುಷಿಯಾಗುವಂತಹ ವಿಚಾರವೊಂದು ಹೊರಬಿದ್ದಿದೆ. ಅದು ಕೂಡ ಟಾಲಿವುಡ್ ಸೂಪರ್ಸ್ಟಾರ್ ರಾಮ್ಚರಣ್ ಅವರ ಮಾತುಗಳಿಂದಲೇ ಅನ್ನೋದು ಖುಷಿಯ ವಿಚಾರ.
ಪ್ರಭಾಸ್ ಮತ್ತು ರಾಮ್ಚರಣ್ ಒಳ್ಳೆಯ ಸ್ನೇಹಿತರು ಎಂಬುದು ಎಲ್ಲರಿಗೂ ತಿಳಿದಿದೆ. ಇದೀಗ ರಾಮ್ಚರಣ್ ಪ್ರಭಾಸ್ ಮದುವೆಯ ಬಗ್ಗೆ ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಟಾಲಿವುಡ್ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ಅನ್ಸ್ಟಾಪಬಲ್ ಕಾರ್ಯಕ್ರಮದಲ್ಲಿ ಪ್ರಭಾಸ್ ಯಾರನ್ನು ಮದುವೆಯಾಗುತ್ತಾರೆ ಎಂಬುದನ್ನು ರಾಮ್ಚರಣ್ ಪರೋಕ್ಷವಾಗಿ ಬಹಿರಂಗಪಡಿಸಿದ್ದಾರೆ.
ಬಾಲಕೃಷ್ಣ ಅವರು ಪ್ರಭಾಸ್ ಮದುವೆಯ ಕುರಿತು ಪ್ರಶ್ನೆ ಮಾಡಿದಾಗ, ಬಹುಶಃ ವಧು, ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ಗಣಪವರಂ ಎಂಬ ಸಣ್ಣ ಪಟ್ಟಣದಿಂದ ಬರಬಹುದು ಎಂದಿದ್ದಾರೆ. ಪರೋಕ್ಷವಾಗಿ ವಧುವಿನ ಬಗ್ಗೆ ರಾಮ್ಚರಣ್ ಸುಳಿವು ನೀಡಿದ್ದು, ಶೀಘ್ರದಲ್ಲೇ ಪ್ರಭಾಸ್ ಮದುವೆ ಆಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಅಭಿಮಾನಿಗಳಿಗೂ ಕೂಡ ಇದು ಖುಷಿಯ ವಿಚಾರವಾಗಿದೆ.
ಅಂದಹಾಗೆ ಒಟಿಟಿ ವೇದಿಕೆ ಆಹಾದಲ್ಲಿ ಅನ್ಸ್ಟಾಪಬಲ್ ಸೀಸನ್ 4 ಯಶಸ್ವಿಯಾಗಿ ನಡೆಯುತ್ತಿದೆ. ಗೇಮ್ ಚೇಂಜರ್ ಪ್ರಚಾರದ ಭಾಗವಾಗಿ ರಾಮ್ ಚರಣ್ ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಭಾಗವಹಿಸಿದರು. ರಾಮ್ಚರಣ್ಗೆ ಸಂಬಂಧಿಸಿದ ಸಂಚಿಕೆಯ ಮೊದಲ ಭಾಗವು ಜನವರಿ 8ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಇದರಲ್ಲಿ, ರಾಮ್ಚರಣ್ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳು ಕ್ಲೀನ್ಕ್ಲಾರಾ ಬಗ್ಗೆಯೂ ಮಾತನಾಡಿದರು.
ಇನ್ನು ಸಂಚಿಕೆಯ ಎರಡನೇ ಭಾಗದಲ್ಲಿ, ರಾಮ್ಚರಣ್ ಅವರು ಪ್ರಭಾಸ್ ಅವರ ಮದುವೆಗೆ ಸಂಬಂಧಿಸಿದ ವಿಷಯಗಳ ಜೊತೆಗೆ ಕೆಲವು ಇತರ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂಚಿಕೆಯು ಜನವರಿ 17 ರಂದು ಆಹಾದಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ರಾಮ್ಚರಣ್ ಅವರ ಗೇಮ್ ಚೇಂಜರ್ ಚಿತ್ರ ಜನವರಿ 10ರಂದು ಬಿಡುಗಡೆಯಾಯಿತು. ಮೊದಲ ದಿನದಿಂದಲೇ ಈ ಚಿತ್ರ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡಿದೆ. ಮೊದಲ ದಿನವೇ ವಿಶ್ವಾದ್ಯಂತ 186 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. (ಏಜೆನ್ಸೀಸ್)