Pistachio shell : ಪಿಸ್ತಾ ಸಿಪ್ಪೆ ಗಂಟಲಿನಲ್ಲಿ ಸಿಲುಕಿ ಎರಡು ವರ್ಷದ ಮಗು ದಾರುಣವಾಗಿ ಮೃತಪಟ್ಟಿರುವ ಮನಕಲಕುವ ಘಟನೆ ಕಾಸರಗೋಡಿನ ಕುಂಬ್ಳ ನಗರದದಲ್ಲಿ ನಿನ್ನೆ (ಜ.12) ನಡೆದಿದೆ.
ಮೃತ ಬಾಲಕನನ್ನು ಅನಸ್ ಎಂದು ಗುರುತಿಸಲಾಗಿದೆ. ಈತ ಅನ್ವರ್ ಮತ್ತು ಮೆಹರೂಫಾ ದಂಪತಿಯ ಪುತ್ರ. ಶನಿವಾರ (ಜ.11) ಮಧ್ಯಾಹ್ನ ಮನೆಯಲ್ಲಿ ಪಿಸ್ತಾ ಸಿಪ್ಪೆಯನ್ನು ತಿಂದಿದ್ದ. ಮನೆಯವರು ತಕ್ಷಣ ಆತನ ಬಾಯಿಯಲ್ಲಿ ಕೈ ಹಾಕಿ ಸಿಪ್ಪೆಯನ್ನ ಹೊರತೆಗೆದರು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಕಂಡರೆ ಅಂಬಾಟಿ ರಾಯುಡುಗೇಕೆ ಕೋಪ? ಕೊನೆಗೂ ಸಿಕ್ತು ಅಚ್ಚರಿಯ ಉತ್ತರ! Virat Kohli
ಗಂಟಲಿನಲ್ಲಿ ಇನ್ನೂ ಸಿಪ್ಪೆ ಇದೆಯೇ ಎಂದು ಪರೀಕ್ಷಿಸಲು ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದರು. ಪರೀಕ್ಷೆ ಮಾಡಿದ ವೈದ್ಯರು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು. ಹೀಗಾಗಿ ಕುಟುಂಬವು ನಿಟ್ಟುಸಿರುವ ಬಿಟ್ಟು ಮನೆಗೆ ಮರಳಿತು. ಆದರೆ, ವಿಧಿಯಾಟವೇ ಬೇರೆ ಇತ್ತು. ಭಾನುವಾರ ಬೆಳಗ್ಗೆ, ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮಗು ಮೃತಪಟ್ಟಿದೆ.
ವಿದೇಶದಿಂದ ಬಂದಿದ್ದ ಮಗುವಿನ ತಂದೆ ಅನ್ವರ್ ಒಂದು ವಾರದ ಹಿಂದಷ್ಟೇ ಗಲ್ಫ್‌ಗೆ ಮರಳಿದ್ದರು. ಇದೀಗ 2 ವರ್ಷದ ಮುದ್ದಾದ ಮಗನನ್ನು ಕಳೆದುಕೊಂಡ ಇಡೀ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ.
ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಪ್ರಕರಣ: ಓರ್ವನ ಬಂಧನ | Cow udder
ಬಿಬಿಎಲ್ನಲ್ಲಿ ಸಿಕ್ಸರ್ ಸುನಾಮಿ ಎಬ್ಬಿಸಿದ ಮ್ಯಾಕ್ಸಿ! ತಂಡದಿಂದ ಕೈಬಿಟ್ಟು ತಪ್ಪು ಮಾಡಿತಾ RCB? Glenn Maxwell