ಮಂಡ್ಯ: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ಇದೀಗ ಮಧ್ಯಂತರ ಜಾಮೀನಿನ ಮೇಲೆ ಹೊರಬಂದು ಬೆನ್ನು ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್‌ಗೆ (Darshan) ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಗಣ್ಯರು ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಇತ್ತ ದರ್ಶನ್ (Darshan) ಜೈಲಿನಿಂದ ಹೊರಬಂದ ಬಳಿಕ ಇದೇ ಮೊದಲ ಬಾರಿಗೆ ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಈ ಬಗ್ಗೆ ಮಾತನಾಡಿದ್ದು, ನನ್ನ ಉಸಿರಿರುವವರೆಗೂ ದರ್ಶನ್ (Darshan) ನನ್ನ ಮಗ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ಈ ಬಗ್ಗೆ ಮಾತನಾಡಿದ ಸಮಲತಾ ಅಂಬರೀಷ್ (Sumalatha Ambareesh), ದರ್ಶನ್ ಅವರು ಸದ್ಯ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಪತ್ನಿ ವಿಜಯಲಕ್ಷ್ಮೀ ಜೊತೆ ನಾನು ಟಚ್ನಲ್ಲಿದ್ದೇನೆ. ದರ್ಶನ್ (Darshan) ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ದರ್ಶನ್ ಮುಂದೆ ಹಲವು ಸವಾಲುಗಳಿವೆ. ಇನ್ನೂ ಅವರಿಗೆ ಟ್ರೀಟ್‌ಮೆಂಟ್ ಬೇಕು, ಆರೋಗ್ಯ ಸರಿಪಡಿಸಿಕೊಳ್ಳಬೇಕು. ದರ್ಶನ್‌ಗೆ ಬೇಲ್ ಬಗ್ಗೆ ಲೀಗಲ್ ಚಾಲೆಂಜ್ಸ್ ಇದೆ. ಅದನ್ನೆಲ್ಲಾ ಸರಿಪಡಿಸಿಕೊಂಡು ಹೊರಗಡೆ ಬರುತ್ತಾರೆ ಎಂಬ ಆಸೆ ಇಟ್ಟುಕೊಂಡಿದ್ದೇವೆ.
ನಾನು ಈಗಾಗಲೇ ನನ್ನ ನಿಲುವನ್ನು ತಿಳಿಸಿದ್ದೇನೆ. ನಮ್ಮ ಸಂಬಂಧ ಏನಿದೆ ಅದು ಇನ್ಮುಂದೆಯೂ ಹಾಗೆ ಇರುತ್ತದೆ. ನನ್ನ ಉಸಿರಿರುವವರೆಗೂ ದರ್ಶನ್ (Darshan) ನನ್ನ ಮಗ ಅದು ಎಂದಿಗೂ ಬದಲಾಗಲ್ಲ. ಕೇಸ್ ಕುರಿತು ನಿಜಾಂಶ ಏನಿದೆ ಅದು ಹೊರಗೆ ಬರಬೇಕು. ನಿರಾಪರಾಧಿ ಅಂತಾ ಸಾಬೀತು ಆಗಲಿ ಎಂಬುದು ನನ್ನ ಆಸೆ. ದರ್ಶನ್ ಪರ ವಕೀಲರು ನಿಜಾಂಶವನ್ನು ಪ್ರೂವ್ ಮಾಡುತ್ತಾರೆ ಎಂಬ ನಂಬಿಕೆಯಿದೆ. ಇದೆಲ್ಲಾ ಸರಿಯಾಗಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಈ ಕೇಸ್ ಬಗ್ಗೆ ಲೀಗಲ್ ವಿಚಾರಗಳು ನಮಗೆ ಗೊತ್ತಾಗಲ್ಲ. ಆದರೆ ವಿಜಯಲಕ್ಷ್ಮಿ (Vijayalakshmi) ಎಲ್ಲಾ ರೀತಿಯ ಎಫರ್ಟ್ ಹಾಕುತ್ತಿದ್ದಾರೆ ಎಂದು ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಷ್ (Sumalath Ambareesh) ಹೇಳಿದ್ದಾರೆ.
ಬೆನ್ನು ನೋವಿನ ಕಾರಣ ನಟ ದರ್ಶನ್ (Darshan) ಮಧ್ಯಂತರ ಜಾಮೀನಿನ ಮೇಲೆ ಹೊರಬಂದು ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು ಅವರನ್ನು ವಿಐಪಿ ಸೂಟ್ನಲ್ಲಿ (VIP Suit) ಇರಿಸಿ ಚಿಕಿತ್ಸೆ ಕೊಡುತ್ತಿದ್ದಾರೆ. ಕುಟುಂಬಸ್ಥರು ಸೇರಿದಂತೆ ದರ್ಶನ್ ಭೇಟಿಗೆ ಏಳು ಮಂದಿಗೆ ಮಾತ್ರ ಅವಕಾಶವಿದ್ದು, ಪೊಲೀಸರು ಹಾಗೂ ಆಸ್ಪತ್ರೆಯ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ. ಈಗಾಗಲೇ ಮೊದಲನೇ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಬರುವ ಸೋಮವಾರ ಎರಡನೇ ವರದಿ ಸಲ್ಲಿಸುವ ನಿರೀಕ್ಷೆ ಇದೆ.
Lucky ಕಾರನ್ನು ಸಮಾಧಿ ಮಾಡುವ ಮೂಲಕ ವಿಭಿನ್ನವಾಗಿ ವಿದಾಯ ಹೇಳಿದ ಕುಟುಂಬ; ನೀಡಿದ ಕಾರಣ ಮನಕಲಕುತ್ತೆ
ನವಗ್ರಹದ ಜಗ್ಗು ಪಾತ್ರಕ್ಕೆ ನನ್ನ ಮೊದಲ ಆಯ್ಕೆ Darshan ಬದಲು ಈ ನಟನಾಗಿದ್ದ; ದಿನಕರ್ ಹೀಗೇಳಿದ್ದೇಕೆ