ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿ ಇದೀಗ ಮಧ್ಯಂತರ ಜಾಮೀನಿನ ಮೇಲೆ ಹೊರಬಂದದಿರುವ ನಟ ದರ್ಶನ್ ಸದ್ಯ ಬೆನ್ನು ನೋವಿನ ಕಾರಣ ಜಾಮೀನು ಪಡೆದು ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೂ ದರ್ಶನ್ (Darshan) ಅವರು ನಟಿಸಿ, ನಿರ್ಮಿಸಿದ್ದ ನವಗ್ರಹ ಚಿತ್ರವು ಇಂದು (ನವೆಂಬರ್ 08) ರೀ ರಿಲಿಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ನವೆಂಬರ್ 08ರಂದು ಸಿನಿಮಾ ಮರುಬಿಡುಗಡೆಯಾಗಿದ್ದು, ಇದಕ್ಕೂ ಮುನ್ನ ಚಿತ್ರತಂಡ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದೆ. ಈ ವೇಳೆ ಚಿತ್ರತಂಡ ಹಲವು ಸ್ವಾರಸ್ಯಕರ ಮಾಹಿತಿಯನ್ನು ಹಂಚಿಕೊಂಡಿದ್ದು, ನಿರ್ದೇಶಕ ದಿನಕರ್ (Dinakar Thoogudeepa) ಪಾತ್ರವರ್ಗ ಆಯ್ಕೆ ಮಾಡಿದರ ಬಗ್ಗೆ ಮಾತನಾಡಿದ್ದಾರೆ. ಮುಖ್ಯವಾಗಿ ಜಗ್ಗು ಪಾತ್ರಕ್ಕೆ ಆಯ್ಕೆ ಮಾಡಿದರ ಕುರಿತು ನಿರ್ದೇಶಕ ದಿನಕರ್ ಮಾತನಾಡಿದ್ದು, ತಮ್ಮ ಮೊದಲ ಆಯ್ಕೆ ದರ್ಶನ್ (Darshan) ಆಗಿರಲಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಿನಕರ್ (Dinakar Thoogudeepa) ನವಗ್ರಹ ಚಿತ್ರದ ಜಗ್ಗು ಪಾತ್ರಕ್ಕೆ ದರ್ಶನ್ (Darshan) ನನ್ನ ಮೊದಲ ಆಯ್ಕೆಯಾಗಿರಲಿಲ್ಲ. ಆ ಪಾತ್ರವನ್ನು ವಿನೋದ್ ಪ್ರಭಾಕರ್ (Vinnod Prabhakar) ಅವರಿಂದ ಮಾಡಿಸಬೇಕೆಂದು ನಾನು ಬಯಸಿದ್ದೆ. ಆದರೆ, ನಾನು ವಿನೋದ್‌ಗೆ ಕಥೆಯನ್ನು ಹೇಳಿದಾಗ, ಅವರು ಅತಿಥಿ ಪಾತ್ರ ಅಥವಾ ಪೊಲೀಸ್ ಅಧಿಕಾರಿಗಿಂತ ನೆಗೆಟಿವ್ ಪಾತ್ರವನ್ನು ಮಾಡಲು ಬಯಸಿದ್ದರು. ಅವರ ಉತ್ಸಾಹ ಎಲ್ಲವನ್ನೂ ಬದಲಾಯಿಸಿತು, ಮತ್ತು ದರ್ಶನ್ (Darshan) ಜಗ್ಗು ಆದರು, ಮತ್ತು ವಿನೋದ್ ಟೋನಿಯಾಗಿ ಬಂದರು ಎಂದು ದಿನಕರ್ (Dinakar Thoogudeepa) ಹೇಳಿದ್ದಾರೆ. ಸಿನಿಮಾದಲ್ಲಿ ಪೊಲೀಸ್ ಪಾತ್ರಕ್ಕಾಗಿ ನಾವು ಅರ್ಜುನ್ ಸರ್ಜಾ (Arjun Sarja) ಅವರನ್ನು ಅಪ್ರೋಚ್ ಮಾಡಿದ್ದೆವು. ಆದರೆ, ಮನವೊಲಿಸಲು ಸಾಧ್ಯವಾಗಲಿಲ್ಲ, ಅಂತಿಮವಾಗಿ ಸೌರವ್ ಆ ಪಾತ್ರವನ್ನು ನಿರ್ವಹಿಸಿದರು ಎಂದು ನಿರ್ದೇಶಕ ದಿನಕರ್ ತೂಗುದೀಪ ಹೇಳಿದ್ದಾರೆ.
ನವೆಂಬರ್ 08ರಂದು ಚಿತ್ರ ಮರುವಿಡುಗಡೆಯಾಗಿದ್ದು, ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಬಹುತೇಕ ನಟ-ನಟಿಯರು ಚಿತ್ರಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಬೆನ್ನು ನೋವಿನ ಕಾರಣ ನಟ ದರ್ಶನ್ (Darshan) ಮಧ್ಯಂತರ ಜಾಮೀನಿನ ಮೇಲೆ ಹೊರಬಂದು ಕೆಂಗೇರಿ ಬಳಿ ಇರುವ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ವೈದ್ಯರು ಅವರನ್ನು ವಿಐಪಿ ಸೂಟ್ನಲ್ಲಿ (VIP Suit) ಇರಿಸಿ ಚಿಕಿತ್ಸೆ ಕೊಡುತ್ತಿದ್ದಾರೆ. ಕುಟುಂಬಸ್ಥರು ಸೇರಿದಂತೆ ದರ್ಶನ್ ಭೇಟಿಗೆ ಏಳು ಮಂದಿಗೆ ಮಾತ್ರ ಅವಕಾಶವಿದ್ದು, ಪೊಲೀಸರು ಹಾಗೂ ಆಸ್ಪತ್ರೆಯ ಸಿಬ್ಬಂದಿ ತೀವ್ರ ನಿಗಾ ವಹಿಸಿದ್ದಾರೆ.
Mobile ಬಳಸಬೇಡ ಎಂದು ಬುದ್ದಿವಾದ ಹೇಳಿದ ಶಿಕ್ಷಕ; ಬೆಟ್ಟದಿಂದ ಜಿಗಿದ ವಿದ್ಯಾರ್ಥಿ