ಮುಂಬೈ: 2023ರ ಆರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕನ್ನಡಿಗ ಕೆ.ಎಲ್. ರಾಹುಲ್ (KL Rahul) ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ (Athiya Shetty) ಮನೆಗೆ ಹೊಸ ಅತಿಥಿಯ ಆಗಮನವಾಗಲಿದ್ದು, ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ದಂಪತಿಗಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿ ಆಥಿಯಾ ಶೆಟ್ಟಿ ಹಾಗೂ ಕೆ.ಎಲ್. ರಾಹುಲ್ ಅವರು ಈ ಸಂತಸದ ವಿಚಾರವನ್ನು ಶುಕ್ರವಾರ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದು, ನಮ್ಮ ಸುಂದರ ಆಶೀರ್ವಾದ ಶೀಘ್ರದಲ್ಲೇ ಬರಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
2 ವರ್ಷಗಳಿಂದ ಪ್ರೀತಿಯಲ್ಲಿದ್ದ ಅಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ 2023ರ ಜನವರಿ 23ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಅಥಿಯಾ ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದಿದ್ದಾರೆ. ಇದೀಗ ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ನಮ್ಮ ಸುಂದರ ಆಶೀರ್ವಾದ 2025ಕ್ಕೆ ಆಗಮಿಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ.
ಪಾಕ್ಗೆ ತೆರಳಲು ಅನುಮತಿ ನೀಡದ ಕೇಂದ್ರ ಸರ್ಕಾರ; ಹೈಬ್ರಿಡ್ ಮಾದರಿಯಲ್ಲಿ Champions Trophy?
ವಕ್ಫ್ ನೆಪದಲ್ಲಿ ವಿಜಯಪುರವನ್ನು ಹಿಂದುತ್ವದ ಪ್ರಯೋಗಶಾಲೆ ಮಾಡುವ ಸಂಚು: MB Patil ಕಿಡಿ