ಪಾಕ್​ಗೆ ತೆರಳಲು ಅನುಮತಿ ನೀಡದ ಕೇಂದ್ರ ಸರ್ಕಾರ; ಹೈಬ್ರಿಡ್​ ಮಾದರಿಯಲ್ಲಿ Champions Trophy?

Champions Trophy
Published on

ನವದೆಹಲಿ: 2025ರ ಫೆಬ್ರವರಿ-ಮಾರ್ಚ್​ ತಿಂಗಳಲ್ಲಿ ಪಾಕಿಸ್ತಾನದ (Pakistan) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಯೂ (Champions Trophy) ಶುರುವಾಗುವುದಕ್ಕೂ ಮುಂಚಿನಿಂದಲೇ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಮುಖ್ಯವಾಗಿ ಭಾರತ (Team India) ಭಾಗಿಯಾಗುವ ವಿಚಾರವಾಗಿ ಹೆಚ್ಚು ಸುದ್ದಿಯಾಗುತ್ತಿದೆ. ಭದ್ರತೆಯ ಕಾರಣದಿಂದಾಗಿ ಪಾಕಿಸ್ತಾನಕ್ಕೆ ಭಾರತದ (Team India) ಆಟಗಾರರನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐ (BCCI) ಈಗಾಗಲೇ ಕಡ್ಡಿ ಮುರಿದಂತೆ ಹೇಳಿದ್ದು, ಹೈಬ್ರಿಡ್​ ಮಾದರಿಯಲ್ಲಿ ನಡೆಸಿದರೆ ಮಾತ್ರ ಭಾಗಿಯಾಗುವುದಾಗಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಇತ್ತ ಭಾರತದ (Team India) ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು (PCB) ಯಾವುದೇ ಕಾರಣಕ್ಕೂ ಟೂರ್ನಿಯನ್ನು (Champions Trophy) ಹೈಬ್ರಿಡ್​ ಮಾದರಿಯಲ್ಲಿ ನಡೆಸುವುದಿಲ್ಲ ಎಂದು ಹೇಳಿ ಐಸಿಸಿ ತೆಗೆದುಕೊಳ್ಳುವ ನಿಲುವಿಗೆ ಬದ್ದವಾಗಿರುವುದಾಗಿ ಹೇಳಿತ್ತು. ಇದೀಗ ಪಾಕಿಸ್ತಾನ ತನ್ನ ಹೇಳಿಕೆಯಿಮದ ಯೂ ಟರ್ನ್​ ಹೊಡೆದಿದ್ದು, ಭಾರತದ ಮನವಿಗೆ ಬೆಂಡಾದಂತೆ ಕಾಣುತ್ತಿದೆ.

ಈ ಕುರಿತು ಮಾತನಾಡಿರುವ ಪಿಸಿಬಿಯ (PCB) ಅಧಿಕಾರಿಯೊಬ್ಬರು, ಚಾಂಪಿಯನ್ಸ್​ ಟ್ರೋಫಿ (Champions Trophy) ಆಡಲು ಭಾರತ ಪಾಕಿಸ್ತಾನಕ್ಕೆ ಬರದೆ ಇದ್ದರೆ ನಾವು ವೇಳಾಪಟ್ಟಯಲ್ಲಿ (TimeTable) ಅನಿವಾರ್ಯವಾಗಿ ಬದಲಾವಣೆ ಮಾಡಬೇಕಾಗುತ್ತದೆ. ಏಷ್ಯಾಕಪ್ (AsiaCup)​ ಮಾದರಿಯಂತೆ ಚಾಂಪಿಯನ್ಸ್​ ಟ್ರೋಫಿಯನ್ನು ಹೈಬ್ರಿಡ್​ ಮಾಡೆಲ್​ನಲ್ಲಿ (Champions Trophy Hybrid Model) ನಡೆಸಲು ನಾವು ಯೋಜನೆ ರೂಪಿಸಿದ್ದು, ಅದರಂತೆ ಭಾರತ ತನ್ನ ಪಂದ್ಯಗಳನ್ನು ದುಬೈ ಅಥವಾ ಶಾರ್ಜಾದಲ್ಲಿ ಆಡಲಿದೆ. ಈ ವಿಚಾರವನ್ನು ಐಸಿಸಿಯ (ICC) ಗಮನಕ್ಕೆ ತರುತ್ತೇವೆ.

Champions Trophy

ಭಾರತ (Team India) ಚಾಂಪಿಯನ್ಸ್​ ಟ್ರೋಫಿಯಲ್ಲಿ (Champions Trophy) ಆಡುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿದೆಯಾ ಎಂಬುದು ನಮಗೆ ತಿಳಿದಿಲ್ಲ. ಅವರು ನಿರ್ಧಾರ ಪ್ರಕಟಿಸುವ ವೇಳೆಗೆ ಜಯ್​ ಷಾ (Jay Shah) ಐಸಿಸಿಯ ಅಧ್ಯಕ್ಷರಾಗಿ (ICC President) ಅಧಿಕಾರ ವಹಿಸಿಕೊಂಡಿರುತ್ತಾರೆ. ಮುಂದಿನ ವಾರದ ವೇಳೆಗೆ ವೇಳಾಪಟ್ಟಯನ್ನು ಐಸಿಸಿ ಪ್ರಕಟಿಸಲಿದ್ದು, ಈ ಸಂಬಂಧ ಐಸಿಸಿಯೊಂದಿಗೆ ಚರ್ಚೆ ನಡೆದಿದೆ ಎಂದು ಪಿಸಿಬಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪರಿಷ್ಕೃತ ಬಜೆಟ್‌ನೊಂದಿಗೆ ಬ್ಯಾಕ್-ಅಪ್ ಯೋಜನೆ ಈಗಾಗಲೇ ಸಿದ್ದವಾಗಿದ್ದು, ಪಿಸಿಬಿ ನವೆಂಬರ್​ 11ರಂದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಅಂತಿಮವಾಗಿ ವೇಳಾಪಟ್ಟಿ ಬಿಡುಗಡೆ ಮಾಡಿದ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net