ಆರತಿ ಬೆಳಗಿ ತಮ್ಮ ಮನೆ ನಾಯಿಯ ಬರ್ತ್‌ಡೇ ಆಚರಿಸಿದ ಸುಧಾ ಮೂರ್ತಿ; ವಿಡಿಯೋ ವೈರಲ್..

sudha murthy f
Published on

ಬೆಂಗಳೂರು: ಇನ್‌ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಹಾಗೂ ಅವರ ತಾಯಿ ತಮ್ಮ ಮನೆಯ ನಾಯಿ ‘ಗೋಪಿ’ಯ ಹುಟ್ಟುಹಬ್ಬವನ್ನು ಆಚರಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.

ಕೈಯಲ್ಲಿ ಆರತಿ ಹಿಡಿದು ಬೆಳಗುತ್ತ, ‘ಆರತಿ ಬೆಳಗಿರೆ ಪಾರ್ವತಿಗೆ’ ಎಂದು ಹಾಡಿದ ತಮ್ಮ ತಾಯಿಗೆ ಸುಧಾ ಮೂರ್ತಿ ಅವರು ‘ಅದು ಪಾರ್ವತಿ ಅಲ್ಲ, ಗೋಪಿ..’ ಎನ್ನುತ್ತಾರೆ. ‘ಗೋಪಣ್ಣ, ಹ್ಯಾಪಿ ಬರ್ತ್‌ಡೇ’ ಎಂದು ಹಾರೈಸುತ್ತಾರೆ. ಅದರ ಹಣೆಗೆ ಕುಂಕುಮ ಹಚ್ಚುತ್ತಾರೆ. ‘ಅಂದವಂತನಾಗು, ಚಂದವಂತನಾಗು, ಆನೆಯ ಮೇಲೆ ಇರುವ ಅರಸ ನೀನಾಗು...’ ಎಂದು ಹಾಡಿನಲ್ಲೇ ಹಾರೈಸುತ್ತಾರೆ.

ಆ ನಾಯಿ ಸ್ಥಳದಿಂದ ಕದಲತೊಡಗಿದಾಗ, ಅಲ್ಲೇ ಇದ್ದವರೊಬ್ಬರು, ‘ಗೋಪಿ, ನಿಲ್ಲಿ, ನಿಲ್ಲಿ’ ಎಂದು ಹೇಳುತ್ತಾರೆ. ನಾಯಿ ಇದಕ್ಕೆಲ್ಲ ಸ್ಪಂದಿಸುತ್ತದೆ. ಆಗ ‘ಹಾಂ, ಖುಷ್ ಹೋಗಯಾ’ ಎನ್ನುತ್ತಾರೆ ಸುಧಾ ಮೂರ್ತಿ. ಅದಲ್ಲದೆ ಮೈದಡವಿ ಮುದ್ದಿಸುತ್ತಾರೆ. ‘ಶುಭಾಶಯ... ಶುಭಾಶಯ.. ಜನುಮದಿನದ ಶುಭಾಶಯ..’ ಎಂದೂ ಹಾಡುತ್ತಾರೆ. ನಂತರ ಅದಕ್ಕೆ ಬಿಸ್ಕಿಟ್, ರೊಟ್ಟಿ ತಿನ್ನಿಸುತ್ತಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net