More

    ಲಿಪ್​ಲಾಕ್​ ಬಗ್ಗೆ ಸುಳ್ಳು ಹೇಳಿ ಸಿಕ್ಕಿಬಿದ್ದ ನಟಿ ಶ್ರೀಲೀಲಾ! ವೈರಲ್​ ಆಗ್ತಿದೆ ಸೌತ್​ ಬ್ಯೂಟಿಯ ಹಳೇ ವಿಡಿಯೋ

    ಹೈದರಾಬಾದ್​: ಕನ್ನಡದಲ್ಲಿ ಸಿನಿ ವೃತ್ತಿ ಬದುಕನ್ನು ಆರಂಭಿಸಿ, ಇಂದು ತೆಲುಗು ಚಿತ್ರರಂಗದಲ್ಲಿ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿರುವ ಶ್ರೀಲೀಲಾ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಭಗವಂತ ಕೇಸರಿ ಚಿತ್ರದಲ್ಲಿ ಸೂಪರ್​ಸ್ಟಾರ್​ ಬಾಲಕೃಷ್ಣ ಅವರ ಮಗಳ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಸದ್ಯ ಆದಿಕೇಶವ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

    ತಮ್ಮ ಪಾತ್ರ ಡಿಮ್ಯಾಂಡ್​ ಮಾಡಿದರೆ ಲಿಪ್​ಲಾಕ್​ ದೃಶ್ಯಗಳಲ್ಲಿ ನಟಿಸುವಿರಾ? ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಶ್ರೀಲೀಲಾ ಅವರಿಗೆ ವರದಿಗಾರರೊಬ್ಬರಿಂದ ಪ್ರಶ್ನೆ ಎದುರಾಗಿತ್ತು. ಈ ವೇಳೆ ಉತ್ತರ ನೀಡಿದ್ದ ಶ್ರೀಲೀಲಾ, ನಾನು ಲಿಪ್​ಲಾಕ್​ ದೃಶ್ಯಗಳಲ್ಲಿ ನಟಿಸುವುದಿಲ್ಲ ಮತ್ತು ಯಾವುದೇ ನಟರ ಜತೆ ಲಿಪ್​ಲಾಕ್​ ಮಾಡುವುದಿಲ್ಲ ಎಂದಿದ್ದರು. ಒಂದು ವೇಳೆ ನಾನು ಮೊದಲ ಬಾರಿಗೆ ಲಿಪ್​ಕಿಸ್​ ನೀಡಿದರೆ ಅವರು ನನ್ನ ಪತಿಯಾಗಿರುತ್ತಾರೆ ಎಂದು ಹೇಳಿದ್ದರು.

    ಲಿಪ್​ಕಿಸ್​ ಬಗ್ಗೆ ಶ್ರೀಲೀಲಾ ನೀಡಿರುವ ಹೇಳಿಕೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಕಾಮೆಂಟ್​ಗಳ ಮೂಲಕ ನಾಯಕಿಯ ಸಹಹ ಗುಣವನ್ನು ಬಹಿರಂಗಪಡಿಸಿದ್ದಾರೆ. ಮೊದಲ ಮೊದಲು ಹೀಗೇ ಹೇಳುತ್ತಾರೆ. ದಿನಗಳ ಕಳೆಯುತ್ತಾ ಹೋದಂತೆ ಸ್ಕ್ರಿಪ್ಟ್ ಬೇಡಿಕೆಯಿದೆ, ದೃಶ್ಯಕ್ಕೆ ಬೇಡಿಕೆಯಿದೆ ಮತ್ತು ಸಂಭಾವನೆ ಹೆಚ್ಚು ಎಂದೆಲ್ಲಾ ಹೇಳುತ್ತಾರೆ. ಈ ಹಿಂದೆ ಅನೇಕ ಜನರು ಇದನ್ನೇ ಹೇಳಿದ್ದಾರೆ. ಆ ಬಳಿಕ ಲಿಪ್​ಲಾಕ್​ ದೃಶ್ಯಗಳು ಮಾತ್ರವಲ್ಲದೆ, ಅಶ್ಲೀಲ ದೃಶ್ಯಗಳಲ್ಲೂ ನಟಿಸಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.

    ಇದರ ನಡುವೆ ಶ್ರೀಲೀಲಾ, ಲಿಪ್​ಲಾಕ್​ ಮಾಡಿರುವ ವಿಡಿಯೋವೊಂದನ್ನು ನೆಟ್ಟಿಗರು ಇದೀಗ ವೈರಲ್​ ಮಾಡುತ್ತಿದ್ದಾರೆ. ಕಿಸ್​ ಹೆಸರಿನ ಚಿತ್ರದ ಮೂಲಕವೇ ಶ್ರೀಲೀಲಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಲ್ಲದೆ, ಸಿನಿ ವೃತ್ತಿಬದುಕನ್ನು ಆರಂಭಿಸಿದರು. ಇದೇ ಕಿಸ್​ ಚಿತ್ರ ತೆಲುಗಿನಲ್ಲಿ ಐ ಲವ್​ ಯು ಈಡಿಯಟ್​ ಹೆಸರಿನಲ್ಲಿ ಬಿಡುಗಡೆ ಆಯಿತು. ಈ ಚಿತ್ರದ ಹಾಡೊಂದರಲ್ಲಿ ಶ್ರೀಲೀಲಾ ನಾಯಕನ ಜತೆ ಲಿಪ್​ಲಾಕ್​ ಮಾಡುತ್ತಾರೆ.

    ಇದೀಗ ಇದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿ, ನಾನು ಯಾರಿಗೂ ಸಿನಿಮಾದಲ್ಲಿ ಲಿಪ್​ ಕಿಸ್​ ಮಾಡುವುದಿಲ್ಲ ಎಂದು ಹೇಳಿಬಿಟ್ಟು ತಮ್ಮ ಮೊದಲ ಸಿನಿಮಾದಲ್ಲೇ ಶ್ರೀಲೀಲಾ ಲಿಪ್ ಕಿಸ್ ಕೊಟ್ಟಿದ್ದಾರೆ ಎಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಪ್ರಧಾನಿ ಮೋದಿ ಪ್ರತಿ ಬ್ಯಾಂಕ್​ ಖಾತೆಗೆ 15 ಲಕ್ಷ ರೂ. ಹಾಕುವ ಭರವಸೆ ನೀಡಿದ್ರೂ ಆದ್ರೆ ನಾನು…: ರಾಹುಲ್​ ಗಾಂಧಿ

    VIDEO| ಅತ್ಯಾಚಾರ, ಲೂಟಿ, ಡಕಾಯಿತಿಯಲ್ಲಿ ಮುಸ್ಲಿಮರೇ ನಂಬರ್ 1; ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಮುಖಂಡನ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts