More

    ಪ್ರಧಾನಿ ಮೋದಿ ಪ್ರತಿ ಬ್ಯಾಂಕ್​ ಖಾತೆಗೆ 15 ಲಕ್ಷ ರೂ. ಹಾಕುವ ಭರವಸೆ ನೀಡಿದ್ರೂ ಆದ್ರೆ ನಾನು…: ರಾಹುಲ್​ ಗಾಂಧಿ

    ರಾಯಪುರ್​: ಛತ್ತೀಸ್​ಗಢ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರೈತರಿಗೆ ಬಹುದೊಡ್ಡ ಭರವಸೆ ನೀಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸುಳ್ಳ ಭರವಸೆಗಳಿಗಾಗಿ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ಛತ್ತೀಸ್​ಗಢದ ಕೆಂಕೆರ್​ ಜಿಲ್ಲೆಯ ಭಾನುಪ್ರತಾಪ್ಪುರ್​ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ರಾಹುಲ್​ ಗಾಂಧಿ ಮಾತನಾಡಿದರು.

    ಅವರು (ಬಿಜೆಪಿ) ರೈತರ ಸಾಲಮನ್ನಾ ಮಾಡುವುದಿಲ್ಲ. ಬದಲಾಗಿ ಕೇವಲ ಅದಾನಿ ಸಾಲವನ್ನು ಮಾತ್ರ ಮನ್ನಾ ಮಾಡುತ್ತಾರೆ. ನಾವು ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದೆವು ಮತ್ತು ಅದನ್ನು ಮಾಡಿದ್ದೇವೆ. ಮತ್ತೆ ರೈತರ ಸಾಲ ಮನ್ನಾ ಮಾಡುವುದಾಗಿ ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ ಎಂದು ರಾಹುಲ್​ ಗಾಂಧಿ ಹೇಳಿದರು.

    ಪ್ರತಿ ಬ್ಯಾಂಕ್​ ಖಾತೆಗಳಿಗೆ 15 ಲಕ್ಷ ರೂಪಾಯಿ ಹಣ ಹಾಕುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದರು. ಆದರೆ, ಅದು ಇಂದಿಗೂ ನೇರವೇರಿಲ್ಲ. ನಾನು ನಿಮಗೆ ಯಾವುದೇ ಕಾರಣಕ್ಕೂ ತಪ್ಪು ಭರವಸೆಗಳನ್ನು ನೀಡುವುದಿಲ್ಲ. ನಾನು ಏನು ಹೇಳುತ್ತೇನೋ ಅದನ್ನು ಮಾಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​, ಬಿಜೆಪಿಯು ರೈತರ ಹಣವನ್ನು ಅದಾನಿ ಗ್ರೂಪ್​ಗೆ ನೀಡುತ್ತಿದೆ ಮತ್ತು ಎರಡ್ಮೂರು ಉದ್ಯಮಿಗಳ ಲಾಭಕ್ಕಾಗಿ ಮಾತ್ರ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದರು.

    ನೀವು ಯಾವುದೇ ಸರ್ಕಾರವನ್ನು ನೋಡಿದರೆ, ರಾಜ್ಯದ ಅಥವಾ ದೇಶದ ಶ್ರೀಮಂತರಿಗೆ ಲಾಭ ಅಥವಾ ದೇಶದ ಅಥವಾ ರಾಜ್ಯದ ಬಡ ಜನರಿಗೆ ಸಹಾಯ ಮಾಡುವ ಮಾರ್ಗಗಳಿವೆ. ಅದರಲ್ಲಿ ನಮ್ಮ ಸರ್ಕಾರ ರೈತರು, ಕಾರ್ಮಿಕರು ಮತ್ತು ಬಡವರಿಗೆ ಸಹಾಯ ಮಾಡಿದರೆ, ಬಿಜೆಪಿ ಸರ್ಕಾರ ಮಾತ್ರ ಬಡವರ ಪರವಾಗಿ ದೊಡ್ಡದಾಗಿ ಮಾತನಾಡುತ್ತದೆ. ಆದರೆ, ಕೊನೆಯಲ್ಲಿ ಅದಾನಿಗೆ ಸಹಾಯ ಮಾಡುತ್ತದೆ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದರು.

    ರೈತರ ಸಾಲಮನ್ನಾ ಮಾತ್ರವಲ್ಲದೆ, ಶಾಲಾ-ಕಾಲೇಜುಗಳಲ್ಲಿ ಉಚಿತ ಶಿಕ್ಷಣದ ಭರವಸೆಯನ್ನು ನೀಡಿದರು. ಕಿಂಡರ್​ ಗಾರ್ಡನ್​ನಿಂದ ಪದವಿ ಶಿಕ್ಷಣವರೆಗೂ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡುತ್ತೇವೆ. ಯಾರೊಬ್ಬರು ಕೂಡ ಒಂದೇ ಒಂದು ರೂಪಾಯಿ ಕೊಡಬೇಕಾಗಿಲ್ಲ ಎಂದು ಭರವಸೆಯನ್ನು ನೀಡಿದರು.

    ಯಾವಾಗ ಚುನಾವಣೆ?
    ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಛತ್ತೀಸ್‌ಗಢ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ. ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ವೋಟಿಂಗ್ ನಡೆಯಲಿದೆ. ನವೆಂಬರ್ 17ರಂದು ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ನವೆಂಬರ್ 30ಕ್ಕೆ ಮತದಾನ ನಡೆಯಲಿದೆ. ಡಿಸೆಂಬರ್ 3ಕ್ಕೆ ಚುನಾವಣಾ ಫಲಿತಾಂಶ ಘೋಷಣೆ ಆಗಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. (ಏಜೆನ್ಸೀಸ್​)

    ಬೇಲದ ಹಣ್ಣಿನ ಜ್ಯೂಸ್​ ಸೇವನೆಯಿಂದ ಇಷ್ಟೆಲ್ಲಾ ಲಾಭಗಳಿವೆಯಾ? ತಯಾರಿಸುವ ವಿಧಾನ ಹೀಗಿದೆ…

    ಲವ್​ ಬ್ರೇಕ್​ ಒಳ್ಳೇದಾಯ್ತು ಎಂದಿದ್ದೇಕೆ ಕಂಗನಾ? 5ವರ್ಷದೊಳಗೆ ಮದುವೆಯಂತೆ!

    ಕಾಂಗ್ರೆಸ್​​ ಶಾಸಕನ ಕೊರಳಲ್ಲಿ ಹುಲಿ ಉಗುರು ಮಾದರಿ ಪೆಂಡೆಂಟ್; ಬಳ್ಳಾರಿ ಶಾಸಕ ಭರತ್ ರೆಡ್ಡಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts