More

    ಬೇಲದ ಹಣ್ಣಿನ ಜ್ಯೂಸ್​ ಸೇವನೆಯಿಂದ ಇಷ್ಟೆಲ್ಲಾ ಲಾಭಗಳಿವೆಯಾ? ತಯಾರಿಸುವ ವಿಧಾನ ಹೀಗಿದೆ…

    ಪ್ರಾಚೀನ ಕಾಲದಿಂದಲೂ ಬೇಲದ ಹಣ್ಣನ್ನು ಆಯುರ್ವೇದದಲ್ಲಿ ಬಳಸುತ್ತಾ ಬರುತ್ತಿದ್ದಾರೆ. ಅನೇಕ ಸಮಸ್ಯೆಗಳಿಗೆ ಪರಿಹಾರವಾಗಿ ಇದನ್ನು ಬಳಸಲಾಗುತ್ತದೆ. ತನ್ನೊಳಗೆ ನೂರಾರು ಆರೋಗ್ಯಕರ ಲಾಭಗಳನ್ನು ಹೊಂದಿರುವ ಬೇಲದ ಹಣ್ಣನ್ನು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಬಳಸುತ್ತಾರೆ. ಆದರೆ ಇದನ್ನು ಆಯುರ್ವೇದ ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

    ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಬೇಲದ ಹಣ್ಣು ಮತ್ತು ಅದರ ಜ್ಯೂಸ್​ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇಂದು ನಾವು ಬೇಲದ ಜ್ಯೂಸ್ ಕುಡಿಯುವುದರಿಂದ ಏನೆಲ್ಲ ಪ್ರಯೋಜನಗಳು ಇವೆ? ಮತ್ತು ಅದನ್ನು ಹೇಗೆ ಸೇವಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

    * ಹೊಟ್ಟೆಯ ಸಮಸ್ಯೆ ಇರುವವರಿಗೆ ಬೇಲದ ಹಣ್ಣಿನ ಜ್ಯೂಸ್ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಮಲಬದ್ಧತೆಗೆ ರಾಮಬಾಣವಾಗಿದೆ ಮತ್ತು ಹೊಟ್ಟೆಯಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

    * ಅಧಿಕ ಬಿಪಿ ಸಮಸ್ಯೆಯಿಂದ ತೊಂದರೆಗೆ ಒಳಗಾದವರು ಅಂದರೆ, ಅಧಿಕ ರಕ್ತದೊತ್ತಡ ಹೊಂದಿರುವವರು ಪ್ರತಿದಿನ ಬೇಲದ ಜ್ಯೂಸ್​ ಅನ್ನು ಸೇವಿಸಬಹುದು. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ ಮತ್ತು ಇದು ಹೈ ಬಿಪಿಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದಲ್ಲದೆ ಇದು ನರಗಳನ್ನು ಶಾಂತಗೊಳಿಸಲು ಕೆಲಸ ಮಾಡುತ್ತದೆ.

    * ದೇಹದಲ್ಲಿ ಹಿಮೋಗ್ಲೋಬಿನ್​ ಕೊರತೆ ಇರುವವರಿಗೂ ಬೇಲದ ಜ್ಯೂಸ್​ ಉತ್ತಮ ಪರಿಹಾರವಾಗಿದೆ. ಬೇಲದ ಹಣ್ಣಿನಲ್ಲಿ ಸಾಕಷ್ಟು ಕಬ್ಬಿಣಾಂಶವಿದ್ದು, ಇದು ರಕ್ತ ಮತ್ತು ರಕ್ತದ ಶುದ್ಧೀಕರಣವನ್ನು ಮಾಡುತ್ತದೆ.

    * ವಿಟಮಿನ್ ಎ, ಬಿ ಮತ್ತು ಸಿ ಸೇರಿದಂತೆ ದೇಹವನ್ನು ಆರೋಗ್ಯವಾಗಿಡಲು ಕೆಲಸ ಮಾಡುವವಂತ ವಿಟಮಿನ್​ಗಳು ಬೇಲದ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ.

    ಬೇಲದ ಹಣ್ಣಿನ ಜ್ಯೂಸ್​ ಮಾಡುವುದು ಹೇಗೆ?
    * ಬೇಲದ ಹಣ್ಣಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ಎರಡು ಭಾಗ ಮಾಡಿ, ಒಳಗೆ ಕಂದು ಬಣ್ಣದಲ್ಲಿರುವ ಮೃದುವಾದ ತಿರುಳನ್ನು ತೆಗೆದುಕೊಳ್ಳಿ.

    * ತಿರುಳನ್ನು ತೆಗೆದುಕೊಳ್ಳುವಾಗ ಆದಷ್ಟು ಚಮಚವನ್ನು ಬಳಸಿ. ತಿರುಳನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ.

    * ಬಳಿಕ 1 ಕಪ್ ನೀರಿನಲ್ಲಿ ತಿರುಳನ್ನು ಮಿಶ್ರಣ ಮಾಡಿ ಮತ್ತು 15-20 ನಿಮಿಷಗಳ ಕಾಲ ನೆನೆಸಲು ಬಿಡಿ.

    * ಸಮಯ ಮುಗಿದ ಬಳಿಕ ತಿರುಳನ್ನು ಹ್ಯಾಂಡಲ್ಡ್​ ಮ್ಯಾಶರ್​ ಮೂಲಕ ಪೇಸ್ಟ್​ನಂತೆ ಮಾಡಿಕೊಳ್ಳಿ.

    * ಪೇಸ್ಟ್​ನಂತೆ ಮಾಡಿದ ಮಿಶ್ರಣವನ್ನು ಜರಡಿ ಬಳಸಿ, ಫಿಲ್ಟರ್ ಮಾಡಿ. ಬಳಿಕ ಸುಮಾರು 1/2 ರಿಂದ 3/4 ಕಪ್ ನೀರನ್ನು ಸೇರಿಸಿ, ಚಮಚದಿಂದ ಮಿಕ್ಸ್​ ಮಾಡಿ ಮತ್ತು ಯಾವುದೇ ಬೀಜಗಳು ಅಥವಾ ಪದಾರ್ಥಗಳು ಇರದಿರುವುದನ್ನು ಖಚಿತಪಡಿಸಿಕೊಳ್ಳಿ.

    * ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಡೇಟ್​ (ಖರ್ಜೂರ) ಸಿರಪ್ ಅನ್ನು ಸೇರಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಡೇಟ್​ ಸಿರಪ್​ ಮತ್ತು ನೀರನ್ನು ಹೊಂದಿಸಿಕೊಳ್ಳಿ. ಇದಾದ ಬಳಿಕ ರುಚಿಗೆ ತಕ್ಕ ಉಪ್ಪು, ಜೀರಿಗೆ ಪುಡಿ, ಮೆಣಸಿನ ಪುಡಿ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.

    * ಇಲ್ಲಿಗೆ ಬೇಲದ ಜ್ಯೂಸ್​ ರೆಡಿ. ಬೇಕಾದರೆ ನೀರನ್ನು ನಿಮಗೆ ಬೇಕಾದಷ್ಟು ಸೇರಿಸಿಕೊಂಡು ಬೇಲದ ಜ್ಯೂಸ್​ ಅನ್ನು ಸೇವನೆ ಮಾಡಬಹುದು.

    ಚಾಕೋಲೇಟ್​ಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಸೀಸ​, ಕ್ಯಾಡ್ಮಿಯಂ ಪತ್ತೆ: ಗಂಭೀರ ಆರೋಗ್ಯ ಸಮಸ್ಯೆಗಳ ಎಚ್ಚರಿಕೆ

    ಹುಲಿ ಉಗುರು ಅಷ್ಟು ಪವರ್​​ಫುಲ್ಲಾ?; ಯಾಕೆ ಧರಿಸುತ್ತಾರೆ ಗೊತ್ತಾ?

    ಚಾಟ್, ಗೋಲ್ ಗಪ್ಪಾದಂತಹ ತಿನಿಸು ನೋಡಿದ ನಂತರ ಹೊಟ್ಟೆ ತುಂಬಿದ್ದರೂ ಹಸಿವಾದ ಹಾಗೆ ಏಕನಿಸುತ್ತದೆ?, ಇಲ್ಲಿದೆ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts