More

    VIDEO| ಅತ್ಯಾಚಾರ, ಲೂಟಿ, ಡಕಾಯಿತಿಯಲ್ಲಿ ಮುಸ್ಲಿಮರೇ ನಂಬರ್ 1; ವಿವಾದದ ಕಿಡಿ ಹೊತ್ತಿಸಿದ ಮುಸ್ಲಿಂ ಮುಖಂಡನ ಹೇಳಿಕೆ

    ಗುವಾಹಟಿ: ದರೋಡೆ, ಡಕಾಯಿತಿ, ಅತ್ಯಾಚಾರ, ಲೂಟಿಯಂತಹ ಅಪರಾಧಗಳನ್ನು ಮಾಡಿ ಜೈಲಿಗೆ ಹೋಗುವುದರಲ್ಲಿ ಮುಸ್ಲಿಮರು ಮೊದಲ ಸ್ಥಾನದಲ್ಲಿದ್ದಾರೆ ಎಂದು ಹೇಳುವ ಮೂಲಕ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೊಸ ವಿವಾದ ಒಂದನ್ನು ಹುಟ್ಟು ಹಾಕಿದ್ದಾರೆ.

    ಇದೀಗ ಒವರ ಹೇಳಿಕೆಗೆ ಮುಸ್ಲಿಂ ಸಮುದಾಯದ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ಅಜ್ಮಲ್ ಹೇಳಿದ್ದಾರೆ. ಅಸ್ಸಾಂನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

    ಮುಸ್ಲಿಮರು ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಶಿಕ್ಷಣದ ಕೊರತೆಯೇ ಕಾರಣ ಎಂದು ಹೇಳಿದ್ದಾರೆ. ದೇಶಾದ್ಯಂತ ಮುಸ್ಲಿಮರಲ್ಲಿ ಶಿಕ್ಷಣದ ಕೊರತೆ ಇದೆ ಎಂದ ಅವರು, ಸಮುದಾಯದಲ್ಲಿ ಅದರ ಬಗ್ಗೆ ಅರಿವು ಇಲ್ಲದಿರುವುದಕ್ಕೆ ಈಓ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಯುವಕರಿಗೆ ಶಿಕ್ಷಣ ಬಹಳ ಮುಖ್ಯ ಆದರೆ ನಮ್ಮ ಮಕ್ಕಳು ಶಿಕ್ಷಣ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ವಾರಕ್ಕೆ 70 ಘಂಟೆ ಕೆಲಸ; ಯುವಕರ ಮೈಗಳ್ಳತನವೇ ಭಾರತದ ಬೆಳವಣಿಗೆಗೆ ತಡೆಯಾಗಿದೆ ಎಂದ ಉದ್ಯಮಿ ಅಶ್ನೀರ್ ಗ್ರೋವರ್

    ನಮ್ಮ ಹುಡುಗರು ಮತ್ತು ಪುರುಷರು ಹುಡುಗಿಯರನ್ನು ನೋಡುವಾಗ ಅಥವಾ ಅವರೊಂದಿಗೆ ಸಂವಹನ ನಡೆಸುವಾಗ ದುರುದ್ದೇಶಪೂರಿತ ಉದ್ದೇಶಗಳನ್ನು ಹೊಂದಿರಬಾರದು ಇಸ್ಲಾಂ ಧರ್ಮದಲ್ಲಿ ಸಾರ್ವಜನಿಕ ಸ್ಥಳಕ್ಕೆ ನಾವು ಹೋದಾಗ ಮಹಿಳೆಯರನ್ನು ಹಾಗೂ ಯುವತಿಯರನ್ನು ನೋಡಿದಾಗ ಸರಿಯಾದ ನಡವಳಿಕೆಯನ್ನು ಹೊಂದಿರಬೇಕು. ನಮ್ಮ ವರ್ತನೆ ಉತ್ತಮವಾಗಿರಬೇಕು. ನಿಮ್ಮ ಕುಟುಂಬದಲ್ಲಿಯೂ ಹೆಣ್ಣು ಮಕ್ಕಳಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ನಿಮ್ಮ ತಾಯಿ ಹಾಗೂ ತಂಗಿಯರು ಇದ್ದಾರೆ ಎಂದು ನೆನಪಾದಾಗ ನಿಮಗೆ ಯಾವುದೇ ಕೆಟ್ಟ ಯೋಚನೆಗಳು ಬರಲು ಸಾಧ್ಯವಿಲ್ಲ.

    ಸಾಕ್ಷರತೆಯ ನಮಗೆ ದೊಡ್ಡ ಸಮಸ್ಯೆ ಆಗಿದೆ. ನಾವು ವಿದ್ಯಾವಂತರಲ್ಲ, ಶಿಕ್ಷಣದ ವಿಷಯದಲ್ಲಿ ನಾವು ಸರ್ಕಾರವನ್ನು ದೂಷಿಸುತ್ತೇವೆ, ಆದರೆ ಅವರು ನಮ್ಮ ಅಲ್ಪಸಂಖ್ಯಾತ ಪ್ರದೇಶದ ವೈದ್ಯರು ಮತ್ತು ಎಂಜಿನಿಯರ್‌ಗಳನ್ನು ಕೇಳಿದರೆ ನಾವು ಅವರಿಗೆ ನೀಡದಿರುವುದು ಅತ್ಯಂತ ವಿಷಾದನೀಯ, ನಮ್ಮಲ್ಲಿ ಶಿಕ್ಷಣ ಹೊಂದುವವರ ಸಂಖ್ಯೆ ಹೆಚ್ಚಾಗಬಬೇಕು. ನಮ್ಮ ಯುವಕರು ಶಿಕ್ಷಣ ಪಡೆಯಲು ಪ್ರೋತ್ಸಾಹಿಸದೆ ಬೇರೆ ದಾರಿಯಿಲ್ಲ. ಶಿಕ್ಷಣದ ಕೊರತೆಯಿಂದ ಮಾತ್ರ ಎಲ್ಲಾ ಅನಿಷ್ಟಗಳು ಮೇಲುಗೈ ಸಾಧಿಸುತ್ತವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts