More

  ವರ್ಷಪೂರ್ತಿ ಎಸ್​.ಆರ್. ಬೊಮ್ಮಾಯಿ ಜಯಂತಿ: ಮಾಜಿ ಸಿಎಂ ಬಸವರಾಜ

  ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಶತಮಾನೋತ್ಸವ ಕಾರ್ಯಕ್ರಮವನ್ನು ಮುಂದಿನ ಒಂದು ವರ್ಷಗಳ ಕಾಲ ಅವರ ಹುಟ್ಟೂರಿನಿಂದ ದೆಹಲಿ ವರೆಗೆ ಆಚರಿಸಲಾಗುವುದು ಎಂದು ಅವರ ಪುತ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ಧಾರೆ.

  ಮಂಗಳವಾರ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಆಯೋಜಿಸಿದ ದಿ. ಎಸ್.ಆರ್. ಬೊಮ್ಮಾಯಿ ಅವರ ಜನ್ಮ ಶತಮಾನೋತ್ಸವ ಸಮಾರಂಭ ಹಾಗೂ ಅವರನ್ನು ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿರುವ ‘ರ್‍ಯಾಡಿಕಲ್ ಹ್ಯುಮಾನಿಸ್ಟ್’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ಸಮಾರಂಭವನ್ನು ಅವರ ಹುಟ್ಟೂರು ಧಾರವಾಡದ ಕರಡಗಿ, ವಕೀಲಿಕೆ ಆರಂಭಿಸಿದ ಹುಬ್ಬಳ್ಳಿ ಮತ್ತು ರಾಜಕೀಯ ಕರ್ಮಭೂಯಿಯಾದ ಬೆಂಗಳೂರು ಮತ್ತು ದೆಹಲಿಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ನಡೆಸಲಾಗುವುದು ಎಂದು ತಿಳಿಸಿದ್ಧಾರೆ.

  SR Bommai

  ಮೂವರಲ್ಲಿ ಸಾಮ್ಯತೆ ಇದೆ

  ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ, ಎಸ್.ಎಂ. ಕೃಷ್ಣ ಮತ್ತು ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಸಾಮ್ಯತೆ ಇದೆ. ಈ ಮೂರೂ ಜನರಿಗೆ ಯಾರೊಬ್ಬರು ಗಾಡ್​ಫದರ್​ಗಳಿಲ್ಲದೆ ಹೋರಾಟದ ಮೂಲಕವೇ ರಾಜಕೀಯ ನಡೆಸಿದವರು.

  ಅವರವರ ಕಾಲ ಘಟ್ಟಕ್ಕೆ ಸ್ಪಂದಿಸಿ ಹೊಸ ವಿಚಾರ ಮತ್ತು ಮನ್ವಂತರವನ್ನು ಹಾಕಿಕೊಟ್ಟಿದ್ದಾರೆ. ಆದ್ದರಿಂದ ಎಲ್ಲ ನಾಯಕರನ್ನು ಒಂದೇ ಅಳತೆಯಲ್ಲಿ ನೋಡಲು ಸಾಧ್ಯವಿಲ್ಲ. ಅಂದಿನ ಕಾಲಘಟ್ಟ, ಸವಾಲುಗಳು, ದೇಶ ಮತ್ತು ರಾಜ್ಯದ ಪರಿಸ್ಥಿತಿಯನ್ನು ಕಂಡು ಆಡಳಿತ ನಡೆಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಹೇಳಿದ್ದಾರೆ.

  ವಿಸ್ಮಯ ಎನಿಸುತ್ತದೆ

  ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಾತನಾಡಿ, ಎಸ್. ಆರ್. ಬೊಮ್ಮಾಯಿ ಅವರ ರಾಜಕೀಯವನ್ನು ಹಿಂದಿರುಗಿ ನೋಡಿದಾಗ ವಿಸ್ಮಯ ಎನಿಸುತ್ತದೆ. ರಾಜ್ಯಪಾಲರ ಆಟಕ್ಕೆ ಇತಿಶ್ರೀ ಹಾಡಿದ ದೊಡ್ಡ ಗೌರವ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದ್ಧಾರೆ.

  Sm Krishna

  ಅಲ್ಲಿಯವರೆಗೂ ರಾಜ್ಯಪಾಲರು ಎಲ್ಲ ವಿಧವಾದ ಆಟವಾಡುತ್ತಿದ್ದರು. ನಾನು ಅನೇಕ ಉದಾಹರಣೆಗಳನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಬೂಟಾ ಸಿಂಗ್ ಅವರು ಶಾಸಕರನ್ನು ರಾಜಭವನದಲ್ಲಿ ಕರೆದುಕೊಂಡು ಮಲಗಿದ ಉದಾಹರಣೆ ನೋಡಿದ್ದೇನೆ. ಆದರೂ ಬೊಮ್ಮಾಯಿ ಅವರು ದೃತಿಗೆಡದೇ ಸುಪ್ರೀಂಕೋರ್ಟ್‌ವರೆಗೆ ಹೋಗಿ ಜಯ ಗಳಿಸಿದ್ದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ್ಧಾರೆ.

  ಇದನ್ನೂ ಓದಿ: ವಿಪಕ್ಷದಲ್ಲಿ ಕೂತಿರುವುದೇ ಸರ್ಕಾರದ ವಿರುದ್ಧ ಯುದ್ಧ ಮಾಡುವುದಕ್ಕಾಗಿ: ಮಾಜಿ ಸಿಎಂ ಎಚ್​ಡಿಕೆ

  ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ

  ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಣ ಎಷ್ಟು ಮಹತ್ವದ ಪಾತ್ರ ವಹಿಸಿದೆ ಎನ್ನುವುದನ್ನು ನೋಡಿದರೆ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎನ್ನುವ ಆತಂಕ ಮೂಡಿದೆ. ಹಣದ ಹೊಳೆ ತಡೆಯದಿದ್ದರೆ ಪ್ರಜಾಪ್ರಭುತ್ವ ಗಂಡಾಂತರಕ್ಕೆ ಸಿಲುಕುತ್ತದೆ ಎಂಬ ಆತಂಕ ಇದೆ. ಇದರ ಬಗ್ಗೆ ನಾಡಿನ ಹಿತ ಚಿಂತಕರು ಗಂಭೀರವಾಗಿ ಆಲೋಚಿಸಬೇಕಿದೆ. ದೇಶದಲ್ಲಿ ಚುನಾವಣಾ ಆಯೋಗ ಇದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಟಿ.ಎನ್. ಶೇಷನ್ ಅವರು ಇದ್ದಾಗ ಮಾತ್ರ ಚುನಾವಣಾ ಆಯೋಗ ಸೂಕ್ತವಾಗಿ ಕಾರ್ಯ ನಿರ್ವಹಿಸಿತ್ತು. ಆ ನಂತರ ಚುನಾವಣಾ ಆಯೋಗ ತನ್ನ ಪಾತ್ರ ನಿರ್ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ಧಾರೆ.

  ಸಮಾರಂಭದಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಸಚಿವ ಪಿಜಿಆರ್ ಸಿಂಧ್ಯಾ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಆರ್.ವಿ. ದೇಶಪಾಂಡೆ, ಮಹೇಶ್​ ಬೊಮ್ಮಾಯಿ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ್, ಬಿ.ಎಲ್. ಶಂಕರ್ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts