More

    VIDEO| ಕಾಂಗ್ರೆಸ್​ ಶಾಸಕ ನರೇಂದ್ರ ಸ್ವಾಮಿಗೆ ಟೋಲ್​ ಸಿಬ್ಬಂದಿ ಅವಾಜ್​!

    ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಟೋಲ್​ ಸಿಬ್ಬಂದಿ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್​ ಶಾಸಕ ನರೇಂದ್ರ ಸ್ವಾಮಿ ಅವರಿಗೆ ಏಕವಚನದಲ್ಲೇ ವಾಗ್ವಾದ​ ನಡೆಸಿರುವ ಘಟನೆ ನಡೆದಿದೆ.

    ಘಟನೆಯೂ ಕುಂಬಳಗೋಡು ಬಳಿ ಇರುವ ಕಣಮಿಣಿಕೆ ಟೋಲ್​ ಪ್ಲಾಜಾದಲ್ಲಿ ನಡೆದಿದ್ದು ಸಿಬ್ಬಂದಿ ಶಾಸಕನೊಂದಿಗೆ ವಾಗ್ವಾದದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?

    ಭಾನುವಾರ(ಜೂನ್​ 04)ದಂದು ಬೆಂಗಳೂರಿನಿಂದ ಮಳವಳ್ಳಿಯತ್ತ ಹೊರಟಿದ್ದ ಶಾಸಕ ನರೇಂದ್ರ ಸ್ವಾಮಿ ಅವರ ಕಾರನ್ನು ಕಣಮಿಣಿಕೆ ಟೋಲ್​ ಬಳಿ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಕಾರಿನ ಚಾಲಕ ತಮ್ಮ ಬಳಿ ಪಾಸ್​ ಇದೆ ಎಂದು ಹೇಳಿದ್ದರು ಸಹ ಮುಂದಕ್ಕೆ ಬಿಡುವುದಿಲ್ಲ.

    Narendra Swamy

    ಟೋಲ್​ ಸಿಬ್ಬಂದಿ ದುರ್ವತನೆಯನ್ನು ಪ್ರಶ್ನಿಸಿದ ಶಾಸಕ ಹಾಗೂ ಅವರ ಕಾರಿನ ಚಾಲಕನೊಂದಿಗೆ ಏಕವಚನದಲ್ಲೇ ಮಾತನಾಡಲು ಪ್ರಾರಂಭಿಸಿದ್ದಾರೆ. ಘಟನೆಯ ವಿಡಿಯೋ ವೈರಲ್​ ಆಗಿದ್ದು ಶಾಸಕರಿಗೆ ಈ ರೀತಿ ಆದರೆ, ಸಾರ್ವಜನಿಕರ ಕಥೆಯೇನು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

    ಇದನ್ನೂ ಓದಿ: ಮಣಿಪುರ ಗಲಭೆ; ಬಂಡುಕೋರರ ದಾಳಿಗೆ ಬಿಎಸ್​ಎಫ್​ ಯೋಧ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

    ಊಹಿಸಿಕೊಳ್ಳಲು ಸಾಧ್ಯವಿಲ್ಲ

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ನರೇಂದ್ರ ಸ್ವಾಮಿ ಕಾರನ್ನು ತಡೆದು ಟೋಲ್​ ಸಿಬ್ಬಂದಿ ನಮ್ಮೊಂದಿಗೆ ಅನಗತ್ಯವಾಗಿ ವಾಗ್ವಾದ ನಡೆಸಿದ್ದಾರೆ. ಏಕವಚನದಲ್ಲೇ ಮಾತನಾಡಿದ್ದಾರೆ ಈ ಬಗ್ಗೆ ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.

    ಜನಪ್ರತಿನಿಧಿಗಳ ಜೊತೆ ಗೌರವದಿಂದ ವರ್ತಿಸದ ಟೋಲ್​ ಸಿಬ್ಬಂದಿ ಸಾರ್ವಜನಿಕರ ಜೊತೆ ಹೇಗೆ ನಡೆದುಕೊಳ್ಳುತ್ತಾರೋ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಟೋಲ್​ನಲ್ಲಿ ಗಣ್ಯರು ತೆರಳಲು ಪ್ರತ್ಯೇಕ ಲೇನ್​ ಇಲ್ಲ ಈ ಕುರಿತು ಸ್ಪೀಕರ್​ಗೆ ಪತ್ರ ಬರೆಯಲಾಗುವುದು ಎಂದು ಘಟನೆಯ ಕುರಿತು ಶಾಸಕ ನರೇಂದ್ರ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts