More

  ಮಣಿಪುರ ಗಲಭೆ; ಬಂಡುಕೋರರ ದಾಳಿಗೆ ಬಿಎಸ್​ಎಫ್​ ಯೋಧ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

  ಇಂಫಾಲ್​: ಗಲಭೆ ಪೀಡಿತ ಮಣಿಪುರದಲ್ಲಿ ಶಂಕಿತ ಕೂಕಿ ಬಂಡುಕೋರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಡಿ ಭದ್ರತಾ ಪಡೆ(BSF)ಯ ಯೋಧರೊಬ್ಬರು ಹುತಾತ್ಮರಾಗಿದ್ದು, ಅಸ್ಸಾಂ ರೈಫಲ್​ನ ಇಬ್ಬರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ಧಾರೆ.

  ಮೃತ ಸೈನಿಕನನ್ನು ರಂಜಿತ್ ಯಾದವ್​ ಎಂದು ಗುರುತಿಸಲಾಗಿದೆ. ಕಾಕ್​ಜಿಂಗ್​ ಜಿಲ್ಲೆಯ ಸುಗನು ಪ್ರದೇಶದಲ್ಲಿರುವ ಸೆರೌ ಶಾಲೆಯಲ್ಲಿ ಬಿಎಸ್​ಎಫ್​ ಯೋಧರು ಹಾಗೂ ಶಂಕಿತ ಬಂಡುಕೋರರ ನಡುವೆ ಗುಂಡಿನ ಕಾಳಗ ನಡೆದಿದೆ.

  ಇದನ್ನೂ ಓದಿ: ಖಾಸಗಿ ಶಾಲೆಯಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ; ವ್ಯಾಪಕ ಖಂಡನೆ

  ಸೆರೌ ಫ್ರೌಢಶಾಲೆಗೆ ಬಿಎಸ್​ಎಫ್​ ಯೋಧರನ್ನು ನಿಯೋಜಿಸಲಾಗಿತ್ತು. ಜೂನ್​ 6ರಂದು ನಸುಕಿನ 4:15ರ ಸುಮಾರಿಗೆ ಬಂಡುಕೋರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ಧಾರೆ. ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಧ ರಂಜಿತ್​ ಯಾದವ್​ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಮೃತಪಟ್ಟಿದ್ದರು ಎಂದು ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.

  ಗಂಭೀರವಾಗಿ ಗಾಯಗೊಂಡಿರುವ ಅಸ್ಸಾಂ ರೈಫಲ್​ನ ಇಬ್ಬರು ಯೋಧರನ್ನು ಏರ್​ ಆ್ಯಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಮಂತ್ರಿಪುಖ್ರಿಗೆ ಕಳುಹಿಸಿಕೊಡಲಾಗಿದೆ ಎಂದು ಬಿಎಸ್​ಎಫ್​ನ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts