More

    ಆನ್​ಲೈನ್​ ಗೇಮಿಂಗ್​ ಮೂಲಕ ಅಪ್ರಾಪ್ತ ವಯಸ್ಕರ ಮತಾಂತರ!

    ಲಖನೌ: ಆನ್​ಲೈನ್​ ಗೇಮಿಂಗ್​ ಮೂಲಕ ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿಕೊಂಡು ಮತಾಂತರ ಮಾಡುತ್ತಿದ್ದ ದಂಧೆಯನ್ನು ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ಪೊಲೀಸರು ಬಯಲಿಗೆಳೆದಿದ್ದಾರೆ.

    ಪೋರ್ಟ್​ನೈಟ್​ ಎಂಬ ಅಪ್ಲಿಕೇಶನ್​ ಮೂಲಕ ಅಪ್ರಾಪ್ತ ವಯಸ್ಕರನ್ನು ಗುರಿಯಾಗಿಸಿ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಶಹನವಾಜ್​ ಎಂಬುವವನಿಗಾಗಿ ಪೊಲೀಸರು ತಲಾಶ್​ ನಡೆಸಿದ್ದಾರೆ. ತಲೆಮಾರಿಸಿಕೊಂಡಿರುವ ಆರೋಪಿಯನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ಧಾರೆ.

    ಆ್ಯಪ್​​ ಮೂಲಕ ಮತಾಂತರ

    ಈ ಕುರಿತು ಪ್ರತಿಕ್ರಿಯಿಸಿರುವ ಘಾಜಿಯಾಬಾದ್​ ಡಿಸಿಪಿ ನಿಪುನ್​ ಅಗರ್ವಾಲ್​ ಪೋರ್ಟ್​ನೈಟ್​ ಎಂಬ ಅಪ್ಲಿಕೇಶನ್ನಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು​ ಆರೋಪಿ ಶಹನವಾಜ್​ ಅಲಿಯಾಸ್​ ಬಡ್ಡು ಪರಿಚಯಿಸಿಕೊಳ್ಳುತ್ತಿದ್ದ. ಇದಾದ ಬಳಿಕ ಅವರ ಜೊತೆ ಆಪ್ತವಾಗಿ ಮಾತನಾಡುತ್ತಿದ್ದ ಈತ ಅವರ ನಂಬಿಕೆಯನ್ನು ಗಳಿಸುತ್ತಿದ್ದ.

    Religion

    ಆಟದಲ್ಲಿ ಅಪ್ರಾಪ್ತ ವಯಸ್ಕರನ್ನು ಸೋಲಿಸಿ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕೆಂದರೆ ನಾನು ಹೇಳುವ ಕೆಲಸ ಮಾಡಬೇಕೆಂದು ಹೇಳಿ ಅವರಿಗೆ ಟಾಸ್ಕ್​ ಒಂದನ್ನು ಕೊಡುತ್ತಿದ್ದ. ಕುರಾನ್​ನ ಓದಲು ಹೇಳುತ್ತಿದ್ದ. ಬಳಿಕ ಆಟದಲ್ಲಿ ಮಕ್ಕಳು ಗೆದ್ದಾಗ ಅವರಿಗೆ ಇಸ್ಲಾಂ ಧರ್ಮದ ಮಹತ್ವವನ್ನು ಹೇಳಿ ಮತಾಂತರ ಮಾಡುತ್ತಿದ್ದ.

    ಇದನ್ನೂ ಓದಿ: ಹಿಂದೂ ಯುವತಿಯನ್ನು ಮತಾಂತರ ಮಾಡಲು ಗುರುತು ಮರೆಮಾಚಿದ ಯುವಕ; ಆರೋಪಿ ಅರೆಸ್ಟ್​

    ಆರೋಪಿ ಅಪ್ರಾಪ್ತ ವಯಸ್ಕರೊಂದಿಗೆ ಡಿಸ್ಕಾರ್ಡ್​ ಚಾಟಿಂಗ್​ ಪ್ಲಾಟ್​ಫರ್ಮ್​ ಮೂಲಕ ನಿರಂತರ ಸಂಪರ್ಕ ಹೊಂದಿದ್ದ. ಅವರಿಗೆ ಇಸ್ಲಾಂ ​ಧರ್ಮಪ್ರಚಾರಕರಾದ ಜಾಕಿರ್​ ನಾಯ್ಕ್​, ತಾರಿಖ್​ ಜಮೀಲ್​ ಅವರ ವಿಡಿಯೋಗಳನ್ನು ಕಳುಹಿಸುತ್ತಿದ್ದ. ಭಾರತ ಅಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಇವರು ಕಾರ್ಯಾಚರಣೆ ನಡೆಸುತ್ತಿದ್ದರು ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

    ಪ್ರಚೋದನಕಾರಿ ವಿಡಿಯೋ ನೋಡಿ ಮತಾಂತರ

    ಮತಾಂತರ ಸಂಬಂಧ ಮೇ 30ರಂದು ಕವಿನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಂಜಯ್​ನಗರದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಕ್ಲರ್ಕ್​ ಆಗಿ ಕಾರತ್ಯ ನಿರ್ವಹಿಸುತ್ತಿರುವ ಅಬ್ದುಲ್​ ರೆಹಮಾನ್​ ಅಲಿಯಾಸ್​ ನನ್ನಿ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಜೈನ ಹಾಗೂ ಹಿಂದೂ ಸಮುದಾಯದ ಬಾಲಕರನ್ನು ಮತಂತಾರ ಮಾಡಿರುವುದು ವಿಚಾರಣೆಗೆ ವೇಳೆ ಬೆಳಕಿಗೆ ಬಂದಿದೆ.

    ಗಾಜಿಯಾಬಾದ್​ನಲ್ಲಿ ಅಪ್ರಾಪ್ತ ವಯಸ್ಕ ಹಿಂದೂ ಬಾಲಕನೋರ್ವ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಾಕಿಸ್ತಾನ ಮೂಲದ ಯೂಟ್ಯೂಬ್​ ಚಾನೆಲ್​ ದಿ ಯೂತ್​ ಕ್ಲಬ್​ ಹಾಗೂ ತಾರಿಕ್​ ಜಮೀಲ್​ ಧರ್ಮ ಬೋಧನೆಯ ವಿಡಿಯೋಗಳನ್ನು ನೋಡಿ ಮತಾಂತರಗೊಂಡಿದ್ದಾಗಿ ತಿಳಿಸಿದ್ದಾನೆ.

    ಪ್ರಕರಣ ಸಂಬಂಧ ಘಾಜಿಯಾಬಾದ್​, ಫರೀದಾಬಾದ್​, ಚಂಢೀಘರ್​ನಲ್ಲಿ ಹಲವರು ಮತಾಂತರಗೊಂಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಶಹನವಾಜ್​ ಮಹಾರಾಷ್ಟ್ರದಲ್ಲಿ ಅಡಗಿರುವ ಬಗ್ಗೆ ಸುಳಿವು ದೊರೆಕಿದ್ದು ಆತನನ್ನು ಬಂಧಿಸಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಘಾಜಿಯಾಬಾದ್​ ಡಿಸಿಪಿ ನಿಪುನ್​ ಅಗರ್ವಾಲ್ ತಿಳಿಸಿದ್ಧಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts