More

    ವಿಪಕ್ಷದಲ್ಲಿ ಕೂತಿರುವುದೇ ಸರ್ಕಾರದ ವಿರುದ್ಧ ಯುದ್ಧ ಮಾಡುವುದಕ್ಕಾಗಿ: ಮಾಜಿ ಸಿಎಂ ಎಚ್​ಡಿಕೆ

    ಬೆಂಗಳೂರು: ಜೆಡಿಎಸ್​ ಪ್ರತಿಕಪಕ್ಷದಲ್ಲಿ ಕೂತಿರುವುದೇ ಆಡಳಿತ ಪಕ್ಷದ ತಪ್ಪುಗಳ ವಿರುದ್ಧ ಯುದ್ಧ ಮಾಡುವುದಕ್ಕೆ. ಕಾಂಗ್ರೆಸ್​ ಪಕ್ಷ ಕೊಟ್ಟ ಮಾತನ್ನು ತಪ್ಪಿದ್ದರೆ ನಾವು ಕೈ ಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಪಕ್ಷದ ಮುಖ್ಯ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್​ಡಿಕೆ ವಿರೋಧ ಪಕ್ಷಗಳ ಜೊತೆ ಸ್ನೇಹಕ್ಕೂ ಸಿದ್ದ, ಸಮರಕ್ಕೂ ಬದ್ದ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ. ನಾವು ಇರುವುದು ಸರ್ಕಾರದ ತಪ್ಪುಗಳನ್ನು ಕಂಡು ಸುಮ್ಮನೆ ಕೂರುವುದಕ್ಕೆ ಅಲ್ಲ. ಜನರ ಪರ ಧ್ವನಿ ಎತ್ತಿ ಹೋರಾಟ ಮಾಡುವುದಕ್ಕೆ ಎಂದು ಹೇಳಿದ್ದಾರೆ.

    ಮಾತು ತಪ್ಪಿದ್ದಾರೆ

    ವಿಧಾನಸಭೆ ಚುನಾವಣೆಗೂ ಮೊದಲು ಇವರು ಜನರಿಗೆ ಗ್ಯಾರಂಟಿಗಳ ಹೆಸರಿನಲ್ಲಿ ಭರವಸೆ ಕೊಡುವ ವೇಳೆ ಸವಾಲುಗಳ ಬಗ್ಗೆ ತಿಳಿದಿರಲಿಲ್ಲವಾ. ಈಗಿನ ಸಿಎಂ ಹಾಗೂ ಡಿಸಿಎಂ ಇಬ್ಬರು ಗ್ಯಾರಂಟಿ ಕಾರ್ಡ್​ಗಳಿಗೆ ಸಹಿ ಹಾಕಿ ಕೊಟ್ಟಿದ್ದರು. ಆಗ ಯಾವ ಷರತ್ತಿನ ಬಗ್ಗೆ ಹೇಳದ ಇವರು ಈಗ ನಿಯಮ ಅನ್ವಯ ಎಂದು ಹೇಳುತ್ತಿದ್ದಾರೆ.

    HDK

    ಜನರನ್ನು ವಂಚಿಸಿದ ಇವರು ವಿರೋಧ ಪಕ್ಷಗಳ ಮೇಲೆ ಆರೋಪ ಮಾಡುತ್ತಿದ್ದಾರೆ. ಭರವಸೆ ಕೊಡುವ ವೇಳೆ ಇದರ ಪರಿಜ್ಞಾನ ನಿಮಗೆ ಇರಲಿಲ್ಲವೇ. ನಾವು ಎಷ್ಟು ಸ್ಥಾನ ಗಳಿಸಿದ್ದೇವೆ ಎಂಬುದು ಮುಖ್ಯವಲ್ಲ. ವಿರೋಧ ಪಕ್ಷದಲ್ಲಿ ಇದ್ದು ಸರ್ಕಾರದ ವಿರುದ್ಧ ಹೋರಾಡುತ್ತೇವೆ. ಒಂದಿಷ್ಟು ದಿನ ಕೆಲಸ ಮಾಡಲು ಬಿಡುತ್ತೇವೆ. ಆ ನಂತರ ತಪ್ಪುಗಳಮನ್ನು ನೋಡಿಕೊಂಡು ಹೋರಾಟವನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ಧಾರೆ.

    ಇದನ್ನೂ ಓದಿ: VIDEO| ಚಾಕುವಿನಿಂದ ಇರಿದು ಯುವಕನ ಹತ್ಯೆ; ಕಾರಣ ನಿಗೂಢ

    ಹೇಗೆ ಈಡೇರಿಸುತ್ತಾರೆ ನೋಡೋಣ

    ಬದವರಿಗೆ ಉಚಿತ ಸೌಲಭ್ಯಗಳನ್ನು ನೀಡುವುದನ್ನು ನಾವು ವಿರೋಧಿಸುವುದಿಲ್ಲ. ಅವರು ಕೂಡ ತೆರಿಗೆ ಕಟ್ಟುತ್ತಾರೆ ಸರ್ಕಾರದ ಸೌಲಭ್ಯ ಪಡೆಯಲು ಬಡವರಿಗೆ ಹಕ್ಕಿದೆ. ಚುನಾವಣೆಯಲ್ಲಿ ಮತ ಪಡೆಲು ಹೀಗೆ ಆಶ್ವಾಸನೆಗಳ್ನನು ನೀಡಿ ಬಡವರಿಗೆ ಮೋಸ ಮಾಡುವುದು ಸರಿಯಲ್ಲ. ಮೋಸ ಮಾಡಿದರ ವಿರುದ್ಧ ನಮ್ಮ ಹೋರಾಟ.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ದೊಡ್ಡ ಆರ್ಥಿಕ ಪಂಡಿತರಿದ್ದಾರೆ. 14ನೇ ಬಜೆಟ್​ ಮಂಡಿಸಲು ತಯಾರಿ ನಡೆಸುತ್ತಿದ್ದಾರೆ. ಆಯವ್ಯದಲ್ಲಿ ಯಾವ ಭರವಸೆಯನ್ನು ಹೇಗೆ ಈಡೇರಿಸುತ್ತಾರೆ ನೋಡೋಣ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts