More

    ಮಕ್ಕಳು ಪಾಠ ಕೇಳುತ್ತಿದ್ದಾಗಲೇ ಶಾಲಾ ಕಟ್ಟಡದಲ್ಲಿ ಬೆಂಕಿ; ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

    ಬಳ್ಳಾರಿ : ಶಾಲೆಯಲ್ಲಿ ಮಕ್ಕಳು ಪಾಠ ಕೇಳುವಾಗಲೇ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಸಿರುಗುಪ್ಪ ಪಟ್ಟಣದಲ್ಲಿ ನಡೆದಿದೆ.

    ಸಿರುಗುಪ್ಪ ಪಟ್ಟಣದ ಸುದೀಕ್ಷಾ ಇಂಟರ್ನ್ಯಾಷನಲ್ ಶಾಲೆಯಲ್ಲಿ, ವಿದ್ಯುತ್ ಪೂರೈಕೆ ಸ್ಥಗಿತವಾದ್ದರಿಂದ ಶಾಲೆಯ ಜನರೇಟರ್ ಆನ್ ಮಾಡಲಾಗಿತ್ತು. ಜನರೇಟರ್ ಕೊಠಡಿಯಲ್ಲಿನ ವಿದ್ಯುತ್ ವೈರ್​ಗಳಲ್ಲಿ ಮೊದಲು ಬೆಂಕಿ ಹತ್ತಿಕೊಂಡಿದೆ. ಜನರೇಟರ್ ಕೊಠಡಿ ಹೊತ್ತಿ ಉರಿಯುತ್ತಲೇ ಅಲರ್ಟ್ ಆದ ಶಾಲಾ ಸಿಬ್ಬಂದಿ ಶಾಲೆಯ ಒಳಗಿದ್ದ 150 ಮಕ್ಕಳನ್ನ ಹಿಂಬಾಗಿಲಿನಿಂದ ಹೊರಗಡೆ ಕಳಿಸಿ ರಕ್ಷಣೆ‌ ಮಾಡಿದ್ದಾರೆ. ಶಾಲಾ ಸಿಬ್ಬಂದಿ ಮುನ್ನೆಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ.

    ಇದನ್ನೂ ಓದಿ: ತನ್ನ ಮದುವೆಯನ್ನು ತಾನೇ ನಿಲ್ಲಿಸಿದ ಅಪ್ರಾಪ್ತೆ: ಜೂನ್​ 8ರಂದು ನಡೆಯಬೇಕಿದ್ದ ವಿವಾಹ

    ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ‌ ನಂದಿಸುವ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ಯಾವುದೇ ಗಾಯಗಳಿಲ್ಲದೇ ರಕ್ಷಿಸಲಾಗಿದೆ. ಕೂಡಲೇ ಬೆಂಕಿ ಹತೋಟಿಗೆ ಬಂದ ಹಿನ್ನೆಲೆ ಶಾಲಾ ಕಟ್ಟಡ ಹಾಗೂ ಪಕ್ಕದಲ್ಲಿಯೇ ಇದ್ದ ವಿಎಎಂ ಫುಡ್ ಬಜಾರ್ ಸೇಫ್ ಆಗಿದೆ.

    ಮಕ್ಕಳು ಪಾಠ ಕೇಳುತ್ತಿದ್ದಾಗಲೇ ಶಾಲಾ ಕಟ್ಟಡದಲ್ಲಿ ಬೆಂಕಿ; ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿಗಳು

    ವಿಎಎಂ ಫುಡ್ ಬಜಾರ್ ನಲ್ಲಿ ಸುಮಾರು ಎರಡು ಕೋಟಿ ಅಂದಾಜು ಮೌಲ್ಯದ ದಾಸ್ತಾನು ಇತ್ತು. ಅಗ್ನಿಶಾಮಕ ಸಿಬ್ಬಂದಿ ಬರುವುದು ತಡವಾಗಿದ್ದರೆ ಸಂಪೂರ್ಣ ಭಸ್ಮ‌ವಾಗುವ ಸಾಧ್ಯತೆ ಇತ್ತು. ಸಿರುಗುಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಬಿಯರ್​ ಬಾಟಲ್‌ ಸಾಗಿಸುತ್ತಿದ್ದ ಟ್ರಕ್​ ಪಲ್ಟಿ: ಮದ್ಯಕ್ಕಾಗಿ ಮುಗಿಬಿದ್ದ ಜನರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts