More

    ತನ್ನ ಮದುವೆಯನ್ನು ತಾನೇ ನಿಲ್ಲಿಸಿದ ಅಪ್ರಾಪ್ತ ವಯಸ್ಕಳು: ಜೂನ್​ 8ರಂದು ನಡೆಯಬೇಕಿದ್ದ ವಿವಾಹ

    ಆಂಧ್ರಪ್ರದೇಶ: ತನ್ನ ಶಿಕ್ಷಣವನ್ನು ಮುಂದುವರಿಸಲು ಬಯಸಿದ ಅಪ್ರಾಪ್ತ ವಯಸ್ಕಳೊಬ್ಬಳು ಮಹಿಳಾ ಪೊಲೀಸ್ ಸಹಾಯವಾಣಿ ದಿಶಾಗೆ ಕರೆ ಮಾಡುವ ಮೂಲಕ ತನ್ನ ಸ್ವಂತ ಬಾಲ್ಯ ವಿವಾಹವನ್ನು ರದ್ದುಪಡಿಸುವಲ್ಲಿ ಯಶಸ್ವಿಯಾಗಿದ್ದಾಳೆ.

    ಇದನ್ನೂ ಓದಿ: OctoberBaby ಎಂದು ಬರೆದುಕೊಂಡ ಸ್ವರಾ ಭಾಸ್ಕರ್; ತಾಯಿಯಾಗ್ತಿದ್ದಾರೆ ಬಾಲಿವುಡ್ ನಟಿ

    ಘಟನೆಯು ಏಲೂರು ಜಿಲ್ಲೆಯ ವೆಂಕಟಾಪುರಂ ಗ್ರಾಮದಲ್ಲಿ ನಡೆದಿದ್ದು, ಜೂನ್ 8ಕ್ಕೆ ಅಪ್ರಾಪ್ತ ವಯಸ್ಕಳ ಮದುವೆಯನ್ನು ನಿಶ್ಚಯಿಸಲಾಗಿತ್ತು. ಆದರೆ ಮದುವೆ ಇಷ್ಟವಿಲ್ಲದ ಕಾರಣ ಆಕೆಯು ಮಹಿಳಾ ಪೊಲೀಸ್ ಸಹಾಯವಾಣಿ ದಿಶಾಗೆ ಕರೆ ಮಾಹಿತಿ ತಿಳಿಸಿದ್ದಾಳೆ.

    ತಕ್ಷಣವೇ ಪೊಲೀಸರು ಆಕೆಯ ಮನೆಗೆ ಭೇಟಿ ನೀಡಿದ್ದು, ತನ್ನ ಇಚ್ಛೆಗೆ ವಿರುದ್ಧವಾಗಿ ಪೋಷಕರು ತನ್ನ ಮದುವೆಯನ್ನು ನಿಶ್ಚಯಿಸಿದ್ದಾರೆ ಎಂದು ಆಕೆ ದೂರಿದ್ದಾಳೆ. ತಾನು ಶಾಲೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದು, ಕನಿಷ್ಠ ಪದವಿಯವರೆಗೆ ಓದಲು ಬಯಸುತ್ತೇನೆ. ಅಲ್ಲದೆ ತಾನು ಅಪ್ರಾಪ್ತ ವಯಸ್ಕಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

    ಶಿಕ್ಷಣಕ್ಕೆ ಅಡ್ಡಿಪಡಿಸುವುದು ಒಳ್ಳೆಯದಲ್ಲ ಎಂದು ಆಕೆಯ ಪೋಷಕರಿಗೆ ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದಾರೆ. ಮಗಳ ಶಿಕ್ಷಣದ ಉತ್ಸಾಹ ಕಂಡ ಪಾಲಕರು ಬಾಲಕಿಯ ಮದುವೆಯನ್ನು ರದ್ದುಗೊಳಿಸಿದ್ದಾರೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts