More

  OctoberBaby ಎಂದು ಬರೆದುಕೊಂಡ ಸ್ವರಾ ಭಾಸ್ಕರ್; ತಾಯಿಯಾಗ್ತಿದ್ದಾರೆ ಬಾಲಿವುಡ್ ನಟಿ

  ನವದೆಹಲಿ: ಬಾಲಿವುಡ್​ನಲ್ಲಿ ನಟಿ ಸ್ವರಾ ಭಾಸ್ಕರ್​ ಸದ್ದಿಲ್ಲದೇ ಮದೆವೆಯಾಗುವ ಮೂಲಕ ಸುದ್ದಿಯಾಗಿದ್ದರು. ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿದ್ದ ಫಹಾದ್​ ಅಹ್ಮದ್​ ಅವರೊಂದಿಗೆ ಸ್ವರಾ ಭಾಸ್ಕರ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ರಿಜಿಸ್ಟರ್​ ಮದುವೆ​ ಮಾಡಿಕೊಂಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಇದೀಗ ಈ ದಂಪತಿ ತಮ್ಮ ಕುಟುಂಬಕ್ಕೆ ಹೊಸ ಸದಸ್ಯರನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ. 

  ಇದೀಗ ನಟಿ ಸ್ವರಾ ಭಾಸ್ಕರ್ ತಮ್ಮ ಅಭಿಮಾನಿಗಳು ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಾನು ಗರ್ಭಿಣಿಯಾಗಿರುವ ಬಗ್ಗೆ ಟ್ವೀಟ್ ಮಾಡಿ ಫೋಟೋ ಹಂಚಿಕೊಂಡಿದ್ದಾರೆ. ‘ಕೆಲವೊಮ್ಮೆ ನಿಮ್ಮ ಎಲ್ಲಾ ಪ್ರಾರ್ಥನೆಗಳಿಗೆ ಒಟ್ಟಿಗೆ ಉತ್ತರಿಸಲಾಗುತ್ತದೆ! ಆಶೀರ್ವದಿಸಿ…’ಎಂದು ಸ್ವರಾ ಭಾಸ್ಕರ್ ಬರೆದುಕೊಂಡಿದ್ದಾರೆ. ತಮ್ಮ ಮೊದಲ ಮಗುವನ್ನು ‘ಅಕ್ಟೋಬರ್ ಬೇಬಿ’ ಎಂದು ಕರೆದಿದ್ದಾರೆ. ಸ್ವರಾ ಭಾಸ್ಕರ್ ತಾಯಿಯಾಗುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದ್ದಂತೆ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ನಟಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯದ ಕಮೆಂಟ್ ಬರುತ್ತಿದೆ.

  ಸ್ವರಾ ಭಾಸ್ಕರ್ ಪತಿ ಫಹಾದ್​ ಅಹ್ಮದ್​ ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಸಮಾಜವಾದಿ ಯುವಜನ ಸಭಾದ ರಾಜ್ಯಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ. 2019 ರಲ್ಲಿ ಸ್ವರಾ ಭಾಸ್ಕರ್ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ, ರ್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ್ದರು. ಈ ಪ್ರತಿಭಟನೆಯಲ್ಲಿ ಫಹಾದ್ ಕೂಡ ಇದ್ದರು. ಈ ವೇಳೆ ಆದ ಪರಿಚಯ, ಸ್ನೇಹವಾಗಿ, ಪ್ರೀತಿಯಾಗಿ ತಿರುಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts