More

    ‘ಮೊನಾಲಿಸಾ’ ವರ್ಣಚಿತ್ರದಂತೆ ಕಾಣ್ತಿದ್ದಾರಾ ಕಂಗನಾ ರಣಾವತ್? ಇಲ್ಲಿವೆ ನೋಡಿ ಫೋಟೋಸ್…

    ನವದೆಹಲಿ: ಸಿನಿಮಾ, ವಿವಾದಾತ್ಮಕ ಹೇಳಿಕೆ ಹಾಗೂ ಸೋಶಿಯಲ್ ಮೀಡಿಯೋ ಪೋಸ್ಟ್ ಕಾರಣಗಳಿಂದಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ರಾಣಿಯಂತೆ ಸಿಂಗರಿಸಿಕೊಂಡು ಕಂಗನಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ರಾಯಲ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿರುವ ಕಂಗನಾ, ಇನ್ಸ್​​ಟಾಗ್ರಾಂನಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಿರೀಟ ಧರಿಸಿ, ಸಾಂಪ್ರದಾಯಿಕ ಲೆಹೆಂಗಾ ಚೋಲಿ ಡ್ರೆಸ್​ನಲ್ಲಿ ಕಂಗನಾ ಮಿಂಚಿದ್ದಾರೆ. ‘ನೀವು ನಿಮ್ಮ ಕನಸುಗಳನ್ನು ಆಯ್ಕೆ ಮಾಡಬೇಡಿ. ಅದು ನಿಮ್ಮನ್ನು ಆಯ್ಕೆ ಮಾಡುತ್ತದೆ. ನಿಮ್ಮನ್ನು ನೀವು ನಂಬಿರಿ ಮತ್ತು ಒಂದು ಹೆಜ್ಜೆ ಮುನ್ನಡೆಯಿರಿ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

    ಸದ್ಯ ಕಂಗನಾ ಅಪ್ಲೋಡ್ ಮಾಡಿರುವ ಫೋಟೋಗಳು ವೈರಲ್ ಆಗುತ್ತಿದ್ದು, ಫ್ಯಾನ್ ಕಮೆಂಟ್ ಮಾಡುತ್ತಿದ್ದಾರೆ. ನೀವು ರಾಣಿಯಂತೆ ಕಾಣುತ್ತಿದ್ದೀರಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲ ಫ್ಯಾನ್ ಈ ಫೋಟೋವನ್ನು ಮೊನಾಲಿಸಾ ಅವರ ವರ್ಣಚಿತ್ರಕ್ಕೆ ಹೋಲಿಸಿದ್ದಾರೆ.

    ತನ್ನ ರಾಯಲ್ ಫೋಟೋಶೂಟ್ ಅನ್ನು ಅಪ್ಲೋಡ್ ಮಾಡಿದ ಒಂದು ಗಂಟೆಯೊಳಗೆ, ಕಂಗನಾ ಅವರ ಪೋಸ್ಟ್‌ಗೆ 1 ಲಕ್ಷಕ್ಕೂ ಹೆಚ್ಚು ಲೈಕ್ಸ್​ಗಳು ಬಂದಿವೆ. ಫೋಟೋಶೂಟ್‌ನಲ್ಲಿ ಮಾಡಿದ ರೀಲ್ ಇನ್ಸ್​ಟಾಗ್ರಾಂನಲ್ಲಿ 3ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts