ಬಹುಕಾಲದ ಗೆಳತಿಯೊಂದಿಗೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಋತುರಾಜ್ ಗಾಯಕ್ವಾಡ್; ಇಲ್ಲಿದೆ ನೋಡಿ ಮದುವೆ ಫೋಟೋಸ್…

Ruturaj Gaikwad
Published on

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಆರಂಭಿಕ ಬ್ಯಾಟ್ಸ್​ಮನ್ ಋತುರಾಜ್ ಗಾಯಕ್ವಾಡ್ ತಮ್ಮ ಬಹುಕಾಲದ ಗೆಳತಿ ಉತ್ಕರ್ಷ ಪವಾರ್ ಅವರೊಂದಿಗೆ ಇಂದು ವಿವಾಹವಾದರು. ತಮ್ಮ ಮದುವೆಯ ಫೋಟೋಗಳನ್ನು ಗಾಯಕ್ವಾಡ್ ಇನ್ಸ್​​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿವಾಹದ ಸಂಭ್ರಮದ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿರುವ ಋತುರಾಜ್ ಗಾಯಕ್ವಾಡ್ 'From the pitch to the altar, our journey begins!' ಎಂದು ಬರೆದುಕೊಂಡಿದ್ದಾರೆ. ನವದಂಪತಿಗಳಿಗೆ ಅನೇಕ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ.

ಋತುರಾಜ್ ಗಾಯಕ್ವಾಡ್ ಪತ್ನಿ ಉತ್ಕರ್ಷ ಪವರ್ ಕೂಡ ಕ್ರಿಕೆಟ್ ಆಟಗಾರ್ತಿಯಾಗಿದ್ದು, ಮಹಾರಾಷ್ಟ್ರ ಮಹಿಳಾ ಕ್ರಿಕೆಟ್ ತಂಡದ ಆಲ್​ರೌಂಡರ್ ಆಗಿದ್ದಾರೆ. ಇದೀಗ ಕ್ರಿಕೆಟ್ ದಂಪತಿಗಳಿಗೆ ಶಿಖರ್ ಧವನ್, ಶಿವಂ ದುಬೆ, ರಶೀದ್ ಖಾನ್, ಶ್ರೇಯಸ್ ಅಯ್ಯರ್, ಉಮ್ರಾನ್ ಮಲಿಕ್ ಸೇರಿದಂತೆ ಅನೇಕ ಆಟಗಾರರು ಶುಭಾಶಯ ಕೋರುತ್ತಿದ್ದಾರೆ.

ಐಪಿಎಲ್ ಸೀಸನ್ 16ರ ಫೈನಲ್ ಪಂದ್ಯದ ವೀಕ್ಷಣೆಗೆ ಅಹಮದಾಬಾದ್​ಗೆ ಆಗಮಿಸಿದ್ದ ಉತ್ಕರ್ಷ, ಸಿಎಸ್​ಕೆ ಚಾಂಪಿಯನ್ ಆಗುತ್ತಿದ್ದಂತೆ ಸಂಭ್ರಮಾಚರಣೆ ವೇಳೆ ರುತುರಾಜ್ ಜತೆಗೆ ಕಾಣಿಸಿಕೊಂಡಿದರು.

2019ರಲ್ಲಿ ಸಿಎಸ್‌ಕೆ ತಂಡದ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಋತುರಾಜ್ 39.07ರ ಸರಾಸರಿಯಲ್ಲಿ 1,797 ರನ್ ಗಳಿಸಿದ್ದಾರೆ. ಐಪಿಎಲ್​ ಇನ್ನಿಂಗ್ಸ್​ನಲ್ಲಿ ಒಂದು ಶತಕ ಮತ್ತು 14 ಅರ್ಧಶತಕ ಒಳಗೊಂಡಿದ್ದು, ಈವರೆಗಿನ ಅತ್ಯುತ್ತಮ ಸ್ಕೋರ್ 101*.

ಋತುರಾಜ್ ಗಾಯಕ್ವಾಡ್ ಭಾರತ ತಂಡದ ಪರ 9 ಟಿ-20 ಪಂದ್ಯಗಳನ್ನು ಆಡಿದ್ದಾರೆ. 1 ಅರ್ಧಶತಕದೊಂದಿಗೆ 135 ರನ್ ಗಳಿಸಿದ್ದಾರೆ. ಈವರೆಗೆ ಒಂದು ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net