More

  ನೀವು ದಿನಚರಿ ಹೇಗೆ ಪ್ರಾರಂಭಿಸುತ್ತೀರಿ? ಸ್ಮೃತಿ ಇರಾನಿ ನೀಡಿದ ಸಲಹೆ ಹೀಗಿದೆ…

  ನವದೆಹಲಿ: ಕೇಂದ್ರ ಸಚಿವ ಸ್ಮೃತಿ ಇರಾನಿ ಇನ್ಸ್​ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ದಿನಚರಿ ಹೇಗೆ ಪ್ರಾರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದೀಗ ಕೇಂದ್ರ ಸಚಿವೆಯ ಪೋಸ್ಟ್​ಗೆ ಸಾಕಷ್ಟು ಕಮೆಂಟ್ ಬರುತ್ತಿದೆ. ಇದನ್ನೂ ಓದಿ: ‘ಮೊನಾಲಿಸಾ’ ವರ್ಣಚಿತ್ರದಂತೆ ಕಾಣ್ತಿದ್ದಾರಾ ಕಂಗನಾ ರಣಾವತ್? ಇಲ್ಲಿವೆ ನೋಡಿ ಫೋಟೋಸ್…

  ಪ್ರತಿ ದಿನ ಮುಂಜಾನೆಯನ್ನು ಹೇಗೆ ಪ್ರಾರಂಭಿಸುತ್ತೇವೆ ಎನ್ನುವುದು ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಮುಖ್ಯವಾಗುತ್ತದೆ. ಹೀಗಾಗಿ ಕೆಲವರು ಯೋಗ, ಜಿಮ್, ಜಾಗಿಂಗ್ ಮಾಡಿದರೆ, ಇನ್ನು ಕೆಲವು ಮಂದಿ ಪೇಪರ್ ಓದುತ್ತಾ ಬಿಸಿಬಿಸಿ ಕಾಫಿ ಅಥವಾ ಚಹಾ ಹೀರುತ್ತಿರುತ್ತಾರೆ. ಇದೀಗ ಕೇಂದ್ರ ಸಚಿವ ಇನ್ಸ್​ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡು ‘ಪ್ರಾರ್ಥನೆಯೊಂದಿಗೆ ದಿನ ಪ್ರಾರಂಭಿಸಿ- ಯಾರು ನಿಮ್ಮನ್ನು ನೋಡುತ್ತಾರೋ ಅವರಿಗಾಗಿ’ ಎಂದು ಬರೆದುಕೊಂಡಿದ್ದಾರೆ. ಜತೆಗೆ ‘ಹ್ಯಾಪಿ ಮಾರ್ನಿಂಗ್ಸ್’ ಎಂಬ ಹ್ಯಾಶ್‌ಟ್ಯಾಗ್ ಕೂಡ ಬಳಸಿದ್ದಾರೆ.

   

   
   
   
   
   
  View this post on Instagram
   
   
   
   
   
   
   
   
   
   
   

   

  A post shared by Smriti Irani (@smritiiraniofficial)

  ಸ್ಮೃತಿ ಇರಾನಿ ಮಾಡಿರುವ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದ್ದು, 19 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. ನೀನಾ ಗುಪ್ತಾ, ಸೋನು ಸೂದ್ ಮತ್ತು ಅನೇಕರು ಕಮೆಂಟ್ ಮಾಡಿದ್ದಾರೆ. ಕೇಂದ್ರ ಸಚಿವ ಸಾಮಾಜಿಕ ಜಾಲತಾಣವನ್ನು ಸಕ್ರೀಯವಾಗಿ ಬಳಸುತ್ತಾರೆ.

  ಸ್ಮೃತಿ ಇರಾನಿ ಅವರ ಪದವಿ ಹುಡುಕಿ ತನ್ನಿ!

  ಬಿಜೆಪಿ ನಾಯಕರ ಕುರಿತು ಕಾಂಗ್ರೆಸ್ ಮಾಡಿದ್ದ ಟ್ವೀಟ್‌ಗೆ ಬಿಜೆಪಿ ತಿರುಗೇಟು ನೀಡಿ, ‘ಖಂಡಿತಾ ಸ್ವಾಮಿ…. ಹಾಗೆಯೇ ನಿರುದ್ಯೋಗ ಭತ್ಯೆಯನ್ನು ರಾಹುಲ್ ಗಾಂಧಿ(ಪದವೀಧರರಾಗಿದ್ದರೆ ಮಾತ್ರ) ಹಾಗೂ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೂ ದಯಪಾಲಿಸಿ.’ ಎಂದು ಟ್ವೀಟ್ ಪೋಸ್ಟ್ ಮಾಡಿತ್ತು.

  ಇದನ್ನೂ ಓದಿ: http://VIDEO | ಸಿನಿಮಾ ಸ್ಟೈಲ್​ನಲ್ಲಿ ಮದುವೆ ಹೆಣ್ಣನ್ನು ಬೈಕ್​ನಲ್ಲಿ ಹೊತ್ತೊಯ್ದ ಕುಟುಂಬಸ್ಥರು! ಯಾಕೆ ಅನ್ನೋದೇ ಕುತೂಹಲ

  ಬಿಜೆಪಿ ಮಾಡಿದ್ದ ಟ್ವೀಟ್‌ಗೆ ಸವಾಲು ಹಾಕಿರುವ ಕಾಂಗ್ರೆಸ್, ರಾಹುಲ್ ಗಾಂಧಿಯವರು ಪದವೀಧರರಿದ್ದಾರೆ ಸರಿ, ಡಾ. ಯತೀಂದ್ರ ಸಿದ್ದರಾಮಯ್ಯ ಅವರೂ ನೀವೇ ಹೇಳಿದಂತೆ ಡಾಕ್ಟರ್ ಆಗಿದ್ದಾರೆ. ಸ್ಮೃತಿ ಇರಾನಿ ಅವರ ಪದವಿ ಹುಡುಕಿ ತನ್ನಿ, ಹಾಗೆಯೇ ವಿಶ್ವದಲ್ಲಿ ಯಾವ ಯುನಿವರ್ಸಿಟಿಯಲ್ಲಿ ‘ಎಂಟೈರ್ ಪೊಲಿಟಿಕಲ್ ಸೈನ್ಸ್’ ಪದವಿ ಇದೆ ಎಂಬುದನ್ನೂ ಹುಡುಕಿ ತನ್ನಿ. ಅವರಿಗೂ ಭತ್ಯೆ ಕೊಡುವ ಬಗ್ಗೆ ಚಿಂತಿಸೋಣ! (ವಿ.ಸೂ – ವಾಟ್ಸಾಪ್ ಯೂನಿವರ್ಸಿಟಿಯ ಪದವಿಯನ್ನು ಪರಿಗಣಿಸುವುದಿಲ್ಲ) ಎಂದು ಟಕ್ಕರ್ ನೀಡಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts