More

  ಸಂಶೋಧನೆಗೆ ವಿಮರ್ಶಾತ್ಮಕ ದೃಷ್ಟಿಕೋನ ಅಗತ್ಯ

  ವಿಜಯವಾಣಿ ಸುದ್ದಿಜಾಲ ಧಾರವಾಡ
  ಸಂಶೋಧನೆಗೆ ವಿಮರ್ಶಾತ್ಮಕ ದೃಷ್ಟಿಕೋನ ಬಹಳ ಮುಖ್ಯ. ಪ್ರಸ್ತುತ ವಿದ್ಯಾಥಿರ್ಗಳು ಅದನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ.ಕರಡೊಣಿ ಅಭಿಪ್ರಾಯಪಟ್ಟರು.
  ನಗರದ ಕರ್ನಾಟಕ ಕಲಾ ಕಾಲೇಜಿನ ಇಂಗ್ಲಿಷ್​ ಅಧ್ಯಯನ ವಿಭಾಗ ವತಿಯಿಂದ ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಶೋಧನಾ ವಿಧಾನದ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
  ಭವಿಷ್ಯತ್ತಿನಲ್ಲಿ ಸಂಶೋಧನೆಗೆ ಹೆಚ್ಚಿನ ಅವಕಾಶಗೆ ಇವೆ. ಸಂಶೋಧನೆ ಬರವಣಿಗೆಗೆ ಭಾಷಾ ಪ್ರಭುತ್ವ ಮುಖ್ಯ. ಪ್ರಾಯೋಗಿಕವಾಗಿ ಸತತ ಪರಿಶ್ರಮ, ಓದು ಪ್ರಯತ್ನ ಮೂಲಕ ಸಂಶೋಧನಾ ಬರವಣಿಗೆಯ ಕೌಶಲ ರೂಢಿಸಿಕೊಳ್ಳಬೇಕು. ಈ ಕಾರ್ಯಾಗಾರದ ಉಪಯೋಗವನ್ನು ಎಲ್ಲ ವಿದ್ಯಾಥಿರ್ಗಳು ಪಡೆಯಬೇಕು ಎಂದರು.
  ಡಾ. ಈರಣ್ಣ ಮುಳಗುಂದ ಮಾತನಾಡಿ, ಪ್ರಸ್ತುತ ಉದ್ಯಮ ವ್ಯವಹಾರಿಕ ೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಪ್ರಾಶಸ ಇದೆ. ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆಯಲ್ಲಿ ಯೋಜನಾ ಬರವಣಿಗೆ ಮಹತ್ವ ಪಡೆದುಕೊಂಡಿದೆ ಎಂದರು.
  ಡಾ. ಎನ್​.ಎಚ್​.ಕಲ್ಲೂರ ಮಾತನಾಡಿ, ವಿಷಯದ ಆಯ್ಕೆ, ಸಾಹಿತ್ಯ ಅಧ್ಯಯನ, ಸಂಶೋಧನಾ ವಿಧಾನ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ವಿಷಯ ಮತ್ತು ಭಾಷೆ ಮೇಲೆ ಪ್ರಭುತ್ವ ಹೊಂದಬೇಕು. ಸಂಶೋಧನೆಗೆ ಪೂರಕ ತಯಾರಿ ನಡೆಸಬೇಕಲ್ಲದೆ, ಸಂಶೋಧನಾ ವಿಶ್ಲೇಷಣೆ ಬರವಣಿಗೆ ಮುಖ್ಯ ಎಂದರು.
  ಡಾ. ಎಸ್​.ಬಿ.ಬಿರಾದರ ಮಾತನಾಡಿದರು. ವಿದ್ಯಾಥಿರ್ಗಳು ಸಂಶೋಧನೆಗೆ ಸಂಬಂಧಿಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು.
  ಅಕಾಡೆಮಿಕ್​ ಡೀನ್​ ಡಾ. ಮುಕುಂದ ಲಮಾಣಿ, ಡಾ. ಕಾಂಚನ ಗಾಂವಕರ, ಡಾ. ಸುಕನ್ಯಾ ಜಾಲಿಹಾಳ, ಡಾ. ಸಿ.ಬಿ. ಐನಳ್ಳಿ, ಡಾ. ಸುಬ್ರಮಣ್ಯ ಭಟ್​, ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts