ಹಿಂದೂ ಯುವತಿಯನ್ನು ಮತಾಂತರ ಮಾಡಲು ಗುರುತು ಮರೆಮಾಚಿದ ಯುವಕ; ಆರೋಪಿ ಅರೆಸ್ಟ್​

Love JIhad
Published on

ಲಖನೌ: ಯುವತಿಯೊಂದಿಗೆ ಸ್ನೇಹ ಬೆಳೆಸಲು ಗುರುತು ಮರೆಮಾಚಿ ಆಕೆಯನ್ನು ಮತಂತಾರ ಮಾಡಿರುವ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

24 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಅಬಿದ್​ ಈ ಮೊದಲು ಅಂಕಿತ್​ ಎಂದು ಪರಿಚಯಿಸಿಸಿಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಹಿನ್ನಲೆ?

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್​ ಭಾಟಿ ಅಬಿದ್​ ಎಂಬ ವ್ಯಕ್ತಿಯೂ ತನ್ನನ್ನು ತಾನು ದೂರುದಾರ ಯುವತಿ ಬಳಿ ಅಂಕಿತ್​ ಎಂದು ಪರಿಚಯಿಸಿಕೊಂಡು ಸ್ನೇಹ ಬೆಳೆಸಿದ್ದಾನೆ. ದಿನಕಳೆದಂತೆ ಆಕೆಯ ವಿಶ್ವಾಸ ಗಳಿಸಿದ ಆರೋಪಿಯೂ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

harassment

ಕೆಲ ದಿನಗಳ ಬಳಿಕ ಆರೋಪಿಯೂ ತನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋವನ್ನು ಇಂಟರ್​ನೆಟ್​ನಲ್ಲಿ ಅಪ್ಲೋಡ್​ ಮಾಡುವುದಾಗಿ ಬೆದರಿಸಿ ಯುವತಿಯನ್ನು ವಿವಾಹವಾಗಿದ್ದಾನೆ. ಮದುವೆಯಾದ ಬಳಿಕ ಅಬಿದ್​ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿಸಿ ಮಾಂಸಹಾರವನ್ನು ತಿನ್ನಿಸಿದ್ದಾನೆ. ಬಳಿಕ ಆತನ ತಂದೆಯ ಜೊತೆ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಆಕೆಗೆ ಪೀಡಿಸಿದ್ಧಾನೆ.

ಕೂಡಿ ಹಾಕಿ ಹಲ್ಲೆ

ಇದಕ್ಕೊಪ್ಪದಿದ್ದಾಗ ಆಕೆಯನ್ನು ಅಬಿದ್​ ಕುಟುಂಬಸ್ಥರು ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ದುರುದಾರ ಯುವತಿ ಅಲ್ಲಿದ್ದವರ ಕಣ್ಣು ತಪ್ಪಿಸಿ ಪೊಲೀಸ್​ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ಮಹಿಳೆ ನೀಡಿರುವ ಹೇಳಿಕೆ ಆಧಾರದ ಮೇಲೆ ಆರೋಪಿಗಳ ವಿರುದ್ಧ ಉತ್ತರಪ್ರದೇಶ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಡು ತನಿಖೆ ನಡೆಸಲಾಗುತ್ತಿದೆ ಎಂದು ಬರೇಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್​ ಭಾಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net