More

  ಗುದನಾಳದಲ್ಲಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಬಚ್ಚಿಟ್ಟು ಸಾಗಾಟ

  ಹೈದರಾಬಾದ್​: ಗುದನಾಳದಲ್ಲಿ 1 ಕೋಟಿ ರೂ. ಮೌಲ್ಯದ 1705.3 ಗ್ರಾಂ ಚಿನ್ನವನ್ನು ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಇಲಾಖೆ ವ್ಯಾಪ್ತಿಗೆ ಒಳಪಡುವ ಏರ್​ ಇಂಟಲಿಜೆನ್ಸ್​ ಯೂನಿಟ್​(AIU) ಅಧಿಕಾರಿಗಳು ವಶಕ್ಕೆ ಪಡೆದಿದ್ಧಾರೆ.

  ಖಚಿತ ಮಾಹಿತಿ ಮೇರೆಗೆ ಆರೋಪಿಗಳಿಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಕಸ್ಟಮ್ಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

  ಸೋಮವಾರು ರಾತ್ರಿ 10:30ರ ಸುಮಾರಿಗೆ ಡುಬೈ ನಿಂದ ಇಂಡಿಗೋ ವಿಮಾನ 6E-1484ನಲ್ಲಿ ಹೂದರಾಬಾದಿಗೆ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ಏರ್​ ಇಂಟಲಿಜೆನ್ಸ್​ ಯೂನಿಟ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ.

  Gold Capsules
  ವಶಪಡಿಸಿಕೊಂಡಿರುವ ಕ್ಯಾಪ್ಸ್ಯೂಲ್

  ಇದನ್ನೂ ಓದಿ: ಬಿಲ್​ ಶೇರ್​ ಮಾಡುವಂತೆ ಹೇಳಿದ್ದಕ್ಕೆ ಸಿಟ್ಟು; ಜನುಮದಿನದಂದೇ ಸಿನಿಮೀಯ ಶೈಲಿಯಲ್ಲಿ ಯುವಕನ ಹತ್ಯೆ

  ಪರಿಶೀಲನೆ ವೇಳೆ ಇಬ್ಬರು ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಕಪ್ಪು ಟೇಪ್​ ಸುತ್ತಿದ ಚಿನ್ನದ ಪೇಸ್ಟ್​ ಲೇಪಿತ ಆರು ಕ್ಯಾಪ್ಸ್ಯೂಲ್​ ಇರುವುದು ಪತ್ತೆಯಾಗಿದೆ. ಬಂಧಿತರಿಂದ 1 ಕೋಟಿ ರೂ. ಮೌಲ್ಯದ 1705.3 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

  ಈ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್​ ಆ್ಯಕ್ಟ್​ 1962ರ ಅಡಿಯಲ್ಲಿ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts