More

    ಶೂನ್ಯ ನೆರಳಿನ ದಿನ ಕೌತುಕ ವೀಕ್ಷಣೆ

    ಸಾಗರ: ನಭೋಮಂಡಲದಲ್ಲಿ ಆಗುವ ಕೌತುಕಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಆಗಬೇಕು. ಈ ದಿಸೆಯಲ್ಲಿ ಶೂನ್ಯ ನೆರಳಿನ ದಿನದ ಮಹತ್ವವನ್ನು ಪ್ರಯೋಗದ ಮೂಲಕ ಪರಿಚಯಿಸಿದ್ದೇವೆ ಎಂದು ಹವ್ಯಾಸಿ ಖಗೋಳ ತಜ್ಞ ಮಂಜುನಾಥ ಜೇಡಿಕುಣಿ ಹೇಳಿದರು.

    ನಗರದಲ್ಲಿ ಮಕ್ಕಳಿಗೆ ಪ್ರಯೋಗದ ಮೂಲಕ ಭಾನುವಾರ ಶೂನ್ಯ ನೆರಳಿನ ದಿನದ ಮಹತ್ವವನ್ನು ಪರಿಚಯಿಸಿ ಮಾತನಾಡಿದ ಅವರು, ಸೂರ್ಯನ ಆಯನ ಚಲನೆಯ ಕಾರಣದಿಂದ ಪ್ರತಿ ವರ್ಷ ಭೂಮಿಯ ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವಿನ ಯಾವುದೇ ಒಂದು ಪ್ರದೇಶದಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಉಂಟಾಗುತ್ತದೆ. ಇದು ಕಾಲ ಮತ್ತು ಸ್ಥಳಗಳಿಗೆ ಅನ್ವಯಿಸಿ ಬೇರೆ ಬೇರೆ ದಿನಾಂಕಗಳಲ್ಲಿ ಘಟಿಸುತ್ತದೆ ಎಂದರು.
    ನಮ್ಮ ಸಾಗರ 75 ಡಿಗ್ರಿ ರೇಖಾಂಶದಲ್ಲಿ ಇರುವುದರಿಂದ ಸಾಗರದ ನಿರ್ದಿಷ್ಟ ಸಮಯ ನಿರ್ಧಾರಿತ ಸಮಯ(ಸ್ಟಾೃಂಡರ್ಡ್ ಟೈಮ್)ಕ್ಕಿಂತ 28 ನಿಮಿಷ ಮುಂದೆ ಇರುತ್ತದೆ. ಆ ಕಾರಣದಿಂದ ಸರಿಯಾಗಿ ಮಧ್ಯಾಹ್ನ 12:28ಕ್ಕೆ ಶೂನ್ಯ ನೆರಳು ಸಂಭವಿಸಿತು. ಖಗೋಳಾಸಕ್ತರು ಕುತೂಹಲದಿಂದ ಈ ಕಾರ್ಯಕ್ರಮವನ್ನು ವೀಕ್ಷಿಸಿ ಸೆರೆಹಿಡಿಯುವ ಕೆಲಸ ಮಾಡಿ ಇದನ್ನು ಪ್ರಯತ್ನ ಮಾಡುತ್ತಾರೆ ಎಂದರು.
    ಸೂರ್ಯ ನೆತ್ತಿಯ ಮೇಲೆ ಬರುವುದೇ ಇದಕ್ಕೆ ಕಾರಣ. ಸೂರ್ಯನ ಕಿರಣಗಳು ನೇರವಾಗಿ ಭೂಮಿಯ ಮೇಲೆ ಬೀಳುತ್ತದೆ. ಈ ಕಾರಣದಿಂದ ನೇರವಾಗಿರುವ ವಸ್ತುವಿನ ನೆರಳು ಕಾಣದಂತಾಗುತ್ತದೆ. ನಭೋಮಂಡಲದ ಕೌತುಕವನ್ನು ಮಕ್ಕಳಿಗೆ ಪ್ರಯೋಗದ ಮೂಲಕ ಪರಿಚಯಿಸಿದರೆ ಅವುಗಳ ಮಹತ್ವ ತಿಳಿದುಕೊಂಡಂತಾಗುತ್ತದೆ. ಮಕ್ಕಳಿಗೆ ಪಠ್ಯದ ಜತೆಗೆ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ತಮ್ಮ ಸುತ್ತಮುತ್ತಲಿನ ಬದಲಾವಣೆಗಳನ್ನು ಕೂಡ ಗಮನಿಸಿ ಚಿಂತನ-ಮಂಥನ ನಡೆಸಲು ಮಾರ್ಗದರ್ಶನ ನೀಡಿದಂತಾಗುತ್ತದೆ ಎಂದರು
    ಶೂನ್ಯ ನೆರಳಿನ ಕೌತುಕವು ಸಾಗರದಲ್ಲಿ ಮತ್ತೊಮ್ಮೆ ಆ.15ರಂದು ಪುನರಾವರ್ತನೆ ಆಗುತ್ತದೆ ಎಂದು ಚಿಂತಕ ಬಿ.ಆರ್.ವಿಜಯವಾಮನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts