More

    ಗಳಂಗಳಪ್ಪ ಪಾಟೀಲ್ ಶರಣ ಸಾಹಿತ್ಯ ಕೇಂದ್ರಕ್ಕೆ ಜಾಗ ಮಂಜೂರು

    ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಡಾ.ಗಳಂಗಳಪ್ಪ ಪಾಟೀಲ್ (ಎಸ್.ಬಿ.ಪಾಟೀಲ್) ಬಸವಾದಿ ಶರಣ ಸಾಹಿತ್ಯ ಕೇಂದ್ರದ ಕಾರ್ಯಚಟುವಟಿಕೆ ವ್ಯವಸ್ಥಿತವಾಗಿ ನಡೆಸುವುದರ ಜತೆಗೆ ಸಂಶೋಧನಾ ಕಾರ್ಯ ವಿಸ್ತರಿಸಲು ಹೊಸ ಕಟ್ಟಡ ನಿರ್ಮಾಣಕ್ಕೆ ಎರಡು ಎಕರೆ ಜಾಗ ಮಂಜೂರು ಮಾಡಲಾಗಿದೆ.

    ಗುಲ್ಬರ್ಗ ವಿವಿಯಲ್ಲಿ ಸೋಮವಾರ ಕುಲಪತಿ ಡಾ.ದಯಾನಂದ ಅಗಸರ ಅಧ್ಯಕ್ಷತೆ ಮತ್ತು ಕೇಂದ್ರದ ದಾಸೋಹಿಗಳಾದ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಸಮ್ಮುಖದಲ್ಲಿ ನಡೆದ ಕೇಂದ್ರ ಕಾರ್ಯನಿರ್ವಹಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿ ಸಿಂಡಿಕೇಟ್ ಸಭೆಯ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು.

    ೩೦ ವರ್ಷ ಹಿಂದೆ ಡಾ.ಗಳಂಗಳಪ್ಪ ಪಾಟೀಲ್ (ಎಸ್.ಬಿ.ಪಾಟೀಲ್) ಬಸವಾದಿ ಶರಣ ಸಾಹಿತ್ಯ ಕೇಂದ್ರವನ್ನು ಗುಲ್ಬರ್ಗ ವಿವಿಯಲ್ಲಿ ಸ್ಥಾಪಿಸಲು ಬಿ.ಜಿ.ಪಾಟೀಲ್ ೨೫ ಲಕ್ಷ ರೂ. ಠೇವಣಿ ಇರಿಸಿ ಸಂಶೋಧನಾ ಕೇಂದ್ರ ಆರಂಭಿಸಲು ಸಹಕರಿಸಿದ್ದರು. ಕನ್ನಡ ಅಧ್ಯಯನ ಕೇಂದ್ರದ ಕಟ್ಟಡದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದೆ.

    ಬಸವಾದಿ ಶರಣರ ತತ್ವಗಳನ್ನು ಜನರಿಗೆ ತಿಳಿಸುವುದು, ಹೆಚ್ಚಿನ ಸಂಶೋಧನೆ ಇತರ ಚಟುವಟಿಕೆ ನಡೆಸಿಕೊಂಡು ಹೋಗಲು ಸ್ವಂತ ಕಟ್ಟಡದ ಅಗತ್ಯ ಕಂಡುಬAದಿದ್ದರಿAದ ಜಮೀನು ಮಂಜೂರು ಮಾಡಲಾಗಿದೆ. ಹೊಸ ಕಟ್ಟಡ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಹವಾನಿಯಂತ್ರಿತ ಗ್ರಂಥಾಲಯ ಮೊದಲಾದ ವ್ಯವಸ್ಥೆ ಒಳಗೊಂಡಿರಲಿದೆ ಎಂದು ಡಾ.ಬಿ.ಜಿ.ಪಾಟೀಲ್ ತಿಳಿಸಿದರು.

    ಕೇಂದ್ರ ಸ್ಥಾಪನೆಯಾಗಿ ೩೦ ವರ್ಷದ ನೆನಪಿಗಾಗಿ ಜು.೧೬ರಂದು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಇತರ ಕಾರ್ಯಕ್ರಮ ಆಯೋಜಿಸಲು ಚರ್ಚಿಸಿ ಸಿಯುಕೆ ಇತರ ಪರಿಣತರು, ಬಸವ ಚಿಂತಕ ನೀರಜ್ ಪಾಟೀಲ್ ಇತರರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.

    ಕುಲಸಚಿವ ಶರಣಪ್ಪ ಸತ್ಯಂಪೇಟೆ, ಕೇಂದ್ರದ ಸಮಿತಿ ಸದಸ್ಯರಾದ ಬಂಡೆಪ್ಪ ಕೇಸೂರ, ಡಾ.ಕಲ್ಯಾಣರಾವ ಪಾಟೀಲ್, ಡಾ.ಶಾರದಾದೇವಿ ಜಾಧವ್, ಕೆ.ರವೀಂದ್ರನಾಥ, ವಿಶೇಷ ಆಹ್ವಾನಿತ ಸದಸ್ಯರಾದ ಚಂದ್ರಕಾAತ ಬಿ.ಪಾಟೀಲ್, ಡಾ.ವಿ.ಜಿ. ಅಂದಾನಿ, ರಾಜಪ್ಪ ಗೊಂಡಾ ಇತರರಿದ್ದರು.

    ಡಾ.ಗಳಂಗಳಪ್ಪ ಪಾಟೀಲ್ (ಎಸ್.ಬಿ.ಪಾಟೀಲ್) ಬಸವಾದಿ ಶರಣ ಸಾಹಿತ್ಯ ಕೇಂದ್ರದ ೩೦ನೇ ವರ್ಷಾಚರಣೆ ನಿಮಿತ್ತ ಜರುಗುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಸವಾದಿ ಶರಣರ ತತ್ವಗಳ ಪ್ರಚುರಪಡಿಸಲು ಶ್ರಮಿಸಿದವರು, ಶಿಕ್ಷಣ, ಕೈಗಾರಿಕೆ, ಬ್ಯಾಂಕಿಂಗ್, ವಾಣಿಜ್ಯ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಗುವುದು.
    | ಡಾ.ಬಿ.ಜಿ.ಪಾಟೀಲ್ ಎಂಎಲ್‌ಸಿ ಹಾಗೂ ಕೇಂದ್ರದ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts