More

    7ನೇ ಶರಣ ಸಾಹಿತ್ಯ ಸಮ್ಮೇಳನ 10ರಿಂದ

    ಭದ್ರಾವತಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ 7ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಮಾ.10 ಮತ್ತು 11ರಂದು ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ 650ನೇ ವಚನ ಮಂಟಪದ ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದು ಪರಿಷತ್ ಅಧ್ಯಕ್ಷ ಎನ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
    ಮಾ.10ರಂದು ಬೆಳಗ್ಗೆ 8.30ಕ್ಕೆ ತಹಸೀಲ್ದಾರ್ ಕೆ.ಆರ್.ನಾಗರಾಜ್ ರಾಷ್ಟçಧ್ವಜ, ಹಿರಿಯ ಪತ್ರಕರ್ತ ಎನ್.ಬಾಬು ನಾಡಧ್ವಜ, ಪರಿಷತ್ ಅಧ್ಯಕ್ಷ ಎನ್.ಎಸ್.ಮಲ್ಲಿಕಾರ್ಜುನಯ್ಯ ಪರಿಷತ್ ಧ್ವಜಾರೋಹಣ ಮಾಡಲಿದ್ದಾರೆ. 9.30ಕ್ಕೆ ಸಂವಾದ ನಡೆಯಲಿದೆ. ಸಂಜೆ 5.30ಕ್ಕೆ ಶಿವಮೊಗ್ಗ ಬಸವ ಕೇಂದ್ರ, ಚಿಕ್ಕಮಗಳೂರಿನ ಶ್ರೀ ಬಸವ ತತ್ವ ಪೀಠದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಹೊನ್ನಾಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಧನಂಜಯ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಪರಿಷತ್‌ನ ರಾಷ್ಟಿçÃಯ ಅಧ್ಯಕ್ಷ ನಿವೃತ್ತ ಐಎಎಸ್ ಅಽಕರಿ ಡಾ.ಸಿ.ಸೋಮಶೇಖರ್ ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಬಿ.ಕೆ.ಸಂಗಮೇಶ್ವರ ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಅಧ್ಯಕ್ಷೆ ಡಾ.ವೀಣಾ ಭಟ್ ಉಪಸ್ಥಿತರಿರುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    11ರಂದು ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಲಿದ್ದು, ತಾಪಂ ಇಒ ಎಂ.ಗAಗಣ್ಣ, ಡಾ.ಜಿ.ಎಂ.ನಟರಾಜ್, ಪರಿಷತ್ ಗೌರವ ಅಧ್ಯಕ್ಷ ಎಂ.ವಿರುಪಕ್ಷಪ್ಪ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ.
    ಸುದ್ದಿಗೋಷ್ಠಿಯಲ್ಲಿ ಎಚ್.ಎನ್.ಮಹಾರುದ್ರ, ಕತ್ತಲಗೆರೆ ತಿಮ್ಮಪ್ಪ, ಬಾರಂದೂರು ಪ್ರಕಾಶ್, ಜಗದೀಶ್ ಕವಿ, ರಾಜಶೇಖರ್, ಎಚ್.ಮಲ್ಲಿಕಾರ್ಜುನ್, ಮಲ್ಲಿಕಾಂಬ, ವಿರುಪಾಕ್ಷಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts