ವಿರಾಟ್​ ಕೊಹ್ಲಿ, ಎಂ.ಎಸ್​. ಧೋನಿ... ಇಂಗ್ಲೆಂಡ್​ ವಿರುದ್ಧ ಅತಿ ಹೆಚ್ಚು ಟೆಸ್ಟ್​ ಪಂದ್ಯ ಗೆದ್ದ ಟೀಮ್ ಇಂಡಿಯಾ ಕ್ಯಾಪ್ಟನ್ ಯಾರು? | Test Captain

ವಿಜಯವಾಣಿ (52)
Published on

Test Captains: ಇದೇ ಜೂನ್ 20ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಲಿದ್ದು, ಗೆಲುವಿಗಾಗಿ ಭಾರತ ಸನ್ನದ್ಧಗೊಂಡಿದೆ. ಈ ಸರಣಿಗಾಗಿ ಈಗಾಗಲೇ ಇಂಗ್ಲೆಂಡ್‌ಗೆ ಆಗಮಿಸಿರುವ ಟೀಮ್ ಇಂಡಿಯಾ ಆಟಗಾರರು, ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಶುಭಮನ್ ಗಿಲ್ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಾಡಲು ಎದುರುನೋಡುತ್ತಿರುವ ಭಾರತ ತಂಡದಲ್ಲಿ ಯುವ ಆಟಗಾರರೇ ಕೂಡಿರುವುದು ವಿಶೇಷ.

ಟೀಮ್ ಇಂಡಿಯಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್​ರಂತಹ ದಿಗ್ಗಜ ಕ್ರಿಕೆಟಿಗರು ಟೆಸ್ಟ್​ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತ ತಂಡ ಆಡಲಿರುವ ಮೊದಲ ಸರಣಿ ಇದಾಗಿದೆ. ಯುವ ಕ್ರಿಕೆಟಿಗರಿಂದಲೇ ಸೇರಿರುವ ಭಾರತೀಯ ತಂಡ ಶುಭಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಇಂಗ್ಲೆಂಡ್​ ವಿರುದ್ಧ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಕ್ರಿಕೆಟ್​ ಪ್ರಿಯರಲ್ಲಿ ಕಾಡತೊಡಗಿದೆ.

ಈ ಮಧ್ಯೆ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ಗೆಲುವು ಸಾಧಿಸಿದ ಭಾರತೀಯ ಕ್ಯಾಪ್ಟನ್​ಗಳು ಯಾರೆಲ್ಲ? ಎಂಬುದರ ವಿವರ ಹೀಗಿದೆ ಗಮನಿಸಿ.

ಕಪಿಲ್ ದೇವ್

ಕ್ರಿಕೆಟ್​ ದಂತಕಥೆ ಕಪಿಲ್ ದೇವ್ ಕ್ಯಾಪ್ಟನ್ಸಿಯಲ್ಲಿ ಭಾರತ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದೆ. ಅವುಗಳಲ್ಲಿ ಎರಡರಲ್ಲಿ ಗೆದ್ದರೆ, ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಮ್ ಇಂಡಿಯಾ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ ಭಾರತ ಒಂದು ಪಂದ್ಯವನ್ನು ಗೆದ್ದರೆ, ಉಳಿದ ಎರಡು ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿತು.

ಸೌರವ್ ಗಂಗೂಲಿ

ಗಂಗೂಲಿ ನಾಯಕತ್ವದಲ್ಲಿ ಭಾರತ ಒಟ್ಟು ನಾಲ್ಕು ಟೆಸ್ಟ್‌ಗಳನ್ನು ಆಡಿತು. ಇದರಲ್ಲಿ ಒಂದು ಪಂದ್ಯವನ್ನು ಗೆದ್ದು, ಇನ್ನೊಂದರಲ್ಲಿ ಸೋಲುಂಡಿತು. ಉಳಿದ ಎರಡು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿತು.

ಮಹೇಂದ್ರ ಸಿಂಗ್ ಧೋನಿ

ಭಾರತ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯಲ್ಲಿ ಭಾರತ ಇಂಗ್ಲೆಂಡ್‌ನಲ್ಲಿ ಒಂಬತ್ತು ಪಂದ್ಯಗಳನ್ನು ಆಡಿತು. ಈ ಪೈಕಿ ಟೀಮ್ ಇಂಡಿಯಾ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದು, ಏಳು ಪಂದ್ಯಗಳಲ್ಲಿ ಸೋಲುಂಡಿತು. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಆಡಿರುವ 9 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದು, ಐದರಲ್ಲಿ ಸೋಲು ಕಂಡಿದ್ದಾರೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net