40 ನಿಮಿಷ ಕ್ಲೈಮ್ಯಾಕ್ಸ್​ಗೆ 120 ದಿನ ಚಿತ್ರೀಕರಣ! ಪ್ರಭಾಸ್​ ‘RajaSaab’ ರಿಲೀಸ್ ತಡ, ಕಾರಣ ಬಿಚ್ಚಿಟ್ಟ ನಿರ್ಮಾಪಕರು

The Rajasaab: ಟಾಲಿವುಡ್​ ರೆಬೆಲ್​ ಸ್ಟಾರ್ ಪ್ರಭಾಸ್​ ಅಭಿನಯದ ದಿ ರಾಜಾ ಸಾಬ್​ ಚಿತ್ರದ ಟೀಸರ್​ ಲಾಂಚ್ ಈವೆಂಟ್ ಇತ್ತೀಚೆಗಷ್ಟೇ ನಡೆದಿದ್ದು, ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶಕರು ಮತ್ತು ನಿರ್ಮಾಪಕರು ಹಲವಾರು ಕುತೂಹಲಕಾರಿ ಸಂಗತಿಗಳನ್ನು ಸಿನಿಪ್ರಿಯರ ಮುಂದೆ ಬಹಿರಂಗಪಡಿಸಿದ್ದಾರೆ. ಚಿತ್ರದ ರಿಲೀಸ್ ತಡವಾಗಲು ಕಾರಣವೇನು ಎಂಬುದನ್ನೂ ತಿಳಿಸಿದ್ದಾರೆ.

ಇದನ್ನೂ ಓದಿ: 23 ಲಕ್ಷ ಜನರ ಪಿಂಚಣಿ ರದ್ದು; ಅನರ್ಹ ಫಲಾನುಭವಿಗಳನ್ನು ಗುರುತಿಸಿದ ರಾಜ್ಯ ಸರ್ಕಾರ

ಹಾರರ್​-ಕಾಮಿಡಿ ಜಾನರ್​ನಡಿ ಮೂಡಿಬಂದಿರುವ ‘ದಿ ರಾಜಾಸಾಬ್’ ಚಿತ್ರದಲ್ಲಿ ಪ್ರಭಾಸ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ವರ್ಷಗಳಿಂದ ಚಿತ್ರದ ಬಗ್ಗೆ ಸುದ್ದಿ ಕೇಳಿಬರುತ್ತಿದ್ದೇ ಆದರೂ ರಿಲೀಸ್ ಭಾಗ್ಯ ಸಿಕ್ಕಿರಲಿಲ್ಲ. ತಾಂತ್ರಿಕ ಕಾರಣಗಳಿಂದ ಪ್ರಭಾಸ್ ಸಿನಿಮಾವನ್ನು ಮುಂದೂಡಲಾಗುತ್ತಿತ್ತು. ಇದು ನಟನ ಅಭಿಮಾನಿಗಳಲ್ಲಿ ತೀರ ಗೊಂದಲ ಮತ್ತು ಬೇಸರವನ್ನು ತಂದೊಡ್ಡಿತ್ತು. ಕಡೆಗೂ ಇದಕ್ಕೆಲ್ಲ ಸ್ಪಷ್ಟನೆ ನೀಡಿರುವ ನಿರ್ಮಾಪಕರು, ವಿಎಫ್​ಎಕ್ಸ್​ ಕೆಲಸಗಳಿಂದ ಚಿತ್ರದ ರಿಲೀಸ್ ವಿಳಂಬವಾಯಿತು ಎಂದಿದ್ದಾರೆ.

40 ನಿಮಿಷಗಳ ಕ್ಲೈಮ್ಯಾಕ್ಸ್​!

“ನನಗೆ ನಿರ್ದೇಶಕರು ಹೇಗೆ ಆ ವೇಳಾಪಟ್ಟಿಗಳನ್ನು ನಿಭಾಯಿಸಿದರು ಅನ್ನೋದು ಗೊತ್ತಿಲ್ಲ. ಬೆಳಗ್ಗೆ 6 ಗಂಟೆಗೆ ಚಿತ್ರೀಕರಣ ಪ್ರಾರಂಭಿಸಿದರೆ, ರಾತ್ರಿ 10 ಅಥವಾ 11 ಗಂಟೆಗೆ ಪ್ಯಾಕಪ್​ ಆಗುತ್ತಿತ್ತು. ಹೀಗೆ ಮಾಡುತ್ತಾ ಅದು 120 ದಿನಗಳವರೆಗೆ ಹೋಗಿದೆ. ಇದು ಕೇವಲ ಒಂದೇ ಒಂದು ಶೆಡ್ಯೂಲ್ ಅಷ್ಟೇ. ಆ 120 ದಿನಗಳ ಪರಿಶ್ರಮ, ಕೆಲಸವನ್ನು 40 ನಿಮಿಷಗಳ ಕ್ಲೈಮ್ಯಾಕ್ಸ್​ನಲ್ಲಿ ನೀವೇ ನೋಡುತ್ತೀರಿ” ಎಂದು ಹೇಳಿದರು.

ಇದನ್ನೂ ಓದಿ: ರಷ್ಯಾ-ಯುಕ್ರೇನ್​ ರೀತಿ ಇಲ್ಲಿ…! ಜಾಲತಾಣದಲ್ಲಿ ಸಂಚಲನ ಮೂಡಿಸಿದ ಶರ್ಮಿಷ್ಠಾ ಭವಿಷ್ಯವಾಣಿ | Iran-Israel conflict

300 ದಿನಗಳ ವಿಎಫ್​ಎಕ್ಸ್​

“120 ದಿನಗಳ ಕ್ಲೈಮ್ಯಾಕ್ಸ್​, 300 ದಿನಗಳ ವಿಎಫ್​​ಎಕ್ಸ್​ ಕೆಲಸಗಳೇ ಚಿತ್ರದ ರಿಲೀಸ್​ ತಡವಾಗಲು ಕಾರಣ. ಇದು ನಾವು ಹಿಂದೆಂದೂ ನೋಡಿರದ ವಿಷಯ. ಬಹುನಿರೀಕ್ಷಿತ ಸಿನಿಮಾದ ಬಿಡುಗಡೆ ವಿಳಂಬವಾಗಿದ್ದಕ್ಕೆ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ ಎಂಬುದು ನನಗೆ ತಿಳಿದಿದೆ. ಆದರೆ, ಒಳ್ಳೆಯ ಗುಣಮಟ್ಟ ಹಾಗೂ ಕಥಾಹಂದರದ ಸಿನಿಮಾವನ್ನು ತಲುಪಿಸುವುದು ನಮಗೆ ಮುಖ್ಯವಾಗಿತ್ತು” ಎಂದು ನಿರ್ಮಾಪಕರು ಹೇಳಿದ್ದಾರೆ,(ಏಜೆನ್ಸೀಸ್).

ರಷ್ಯಾ-ಯುಕ್ರೇನ್​ ರೀತಿ ಇಲ್ಲಿ…! ಜಾಲತಾಣದಲ್ಲಿ ಸಂಚಲನ ಮೂಡಿಸಿದ ಶರ್ಮಿಷ್ಠಾ ಭವಿಷ್ಯವಾಣಿ | Iran-Israel conflict

 

Share This Article

ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style

life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…

ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್

ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…