

ಸೇಂಟ್ ಜಾನ್ಸ್: ಮುಂಬರುವ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಶಿಮ್ರೋನ್ ಹೆಟ್ಮೆಯರ್, ಡರೇನ್ ಬ್ರಾವೊ ಮತ್ತು ಕೀಮೊ ಪೌಲ್ ಕರೊನಾ ಭೀತಿಯಿಂದಾಗಿ ಇಂಗ್ಲೆಂಡ್ಗೆ ತೆರಳಲು ನಿರಾಕರಿಸಿದ ಕಾರಣ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಮೂವರು ಕ್ರಿಕೆಟಿಗರ ನಿರ್ಧಾರವನ್ನು ಗೌರವಿಸಿರುವ ವಿಂಡೀಸ್ ಕ್ರಿಕೆಟ್ ಮಂಡಳಿ (ಸಿಡಬ್ಲ್ಯುಐ) ಭವಿಷ್ಯದಲ್ಲಿ ಅವರನ್ನು ತಂಡದ ಆಯ್ಕೆಗೆ ಪರಿಗಣಿಸಲಾಗುವುದು ಎಂದಿದೆ.
ಇದನ್ನೂ ಓದಿ: ಕುವೈತನ್ಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಕರೊನಾಗೆ ಬಲಿ
ಸರಣಿಗೆ 14 ಸದಸ್ಯರ ತಂಡದ ಜತೆಗೆ 11 ಮೀಸಲು ಆಟಗಾರರ ಪಟ್ಟಿಯನ್ನೂ ಸಿಡಬ್ಲ್ಯುಐ ಬುಧವಾರ ಪ್ರಕಟಿಸಿದೆ. ಜುಲೈ 8ರಿಂದ 3 ಪಂದ್ಯಗಳ ಸರಣಿ ನಿಗದಿಯಾಗಿದ್ದು, ವಿಂಡೀಸ್ ತಂಡ ಜೂನ್ 9ರಂದು ಬಾಡಿಗೆ ವಿಮಾನದ ಮೂಲಕ ಲಂಡನ್ಗೆ ಪ್ರಯಾಣಿಸಲಿದೆ.
ಮೀಸಲು ಆಟಗಾರರು ಕೂಡ ತಂಡದ ಜತೆಗೆ ಪ್ರಯಾಣಿಸಲಿದ್ದು, ಅಭ್ಯಾಸದ ವೇಳೆ ನೆರವಾಗಲಿದ್ದಾರೆ ಮತ್ತು ಆಟಗಾರರು ಗಾಯಗೊಂಡರೆ ಅವರ ಸ್ಥಾನವನ್ನು ತುಂಬಲಿದ್ದಾರೆ. ಕೆಲವು ಹೊಸ ಆಟಗಾರರು ತಂಡದಲ್ಲಿ ಮತ್ತು ಮೀಸಲು ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಜೇಸನ್ ಹೋಲ್ಡರ್ ವಿಂಡೀಸ್ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.