ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯ ವಿಡಿಯೋ ಸಾಗರದಲ್ಲಿ ವೈರಲ್

Sagara Pro pak viedo in WG complaint lodged
Published on

ಸಾಗರ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಇರುವ ವಿಡಿಯೋ ಸಾಗರದಲ್ಲಿ ವೈರಲ್ ಆಗಿದ್ದು ಸೂಕ್ತ ಕ್ರಮ ಜರುಗಿಸುವಂತೆ ಸಾಗರ ತಾಲೂಕು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಸಾಗರದ ಆಟೋ ಡ್ರೈವರ್ಸ್‌ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ವ್ಯಕ್ತಿಯೊಬ್ಬ ಮೇ 29ರಂದು ಪಾಕಿಸ್ತಾನವನ್ನು ಹೊಗಳುವ ಹಾಡಿನ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾನೆ.

‘‘ಸಮಾಜದಲ್ಲಿ ಅಶಾಂತಿ ಹುಟ್ಟುಹಾಕಿ ದೇಶದ್ರೋಹದ ಭಾವನೆ ಉಂಟುಮಾಡುವ ಉದ್ದೇಶದಿಂದ ಗ್ರೂಪ್‌ಗೆ ವಿಡಿಯೋ ಹಾಕಲಾಗಿದೆ. ಆದ್ದರಿಂದ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ’’ ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ. ದೂರಿನ ಜತೆ ವಿಡಿಯೋ ಹೊಂದಿರುವ ಎರಡು ಸಿಡಿ ಹಾಗೂ ಸ್ಕ್ರೀನ್‌ಶಾಟ್ ಕೂಡ ಲಗತ್ತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net