

ಬೆಂಗಳೂರು: ಟೀಮ್ ಇಂಡಿಯಾ ಆಟಗಾರ ಮಯಾಂಕ್ ಅಗರ್ವಾಲ್ ಫಿಟ್ನೆಸ್ ಬಗ್ಗೆ ಸಾಕಷ್ಟು ಎಚ್ಚರ ವಹಿಸುತ್ತಾರೆ. ಲಾಕ್ಡೌನ್ ವೇಳೆಯಲ್ಲೂ ವಿವಿಧ ದೈಹಿಕ ಕಸರತ್ತು ಮಾಡುವ ಮಾಡುವ ಮೂಲಕ ಫಿಟ್ನೆಸ್ನತ್ತ ಹೆಚ್ಚಿನ ಗಮನಹರಿಸಿದ್ದಾರೆ. ಇವರಿಗೆ ಕುಟುಂಬ ಸದಸ್ಯರು ಕೂಡ ಸಾಥ್ ನೀಡುತ್ತಾರೆ. ದಿನಂಪ್ರತಿ ಮಾಡುವ ದೈಹಿಕ ಕಸರತ್ತಿನ ವಿಡಿಯೋ , ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಯಾಂಕ್ ಪ್ರಕಟಿಸುತ್ತಾ ಬಂದಿದ್ದಾರೆ. ಶುಕ್ರವಾರ ಪ್ರಕಟಿಸಿದ್ದ ಫೋಟೋಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವೇಗಿ ಇಶಾಂತ್ ಶರ್ಮ ಹಾಸ್ಯಮಯವಾಗಿ ಕಾಮೆಂಟ್ ಹಾಕುವ ಮೂಲಕ ಟ್ರೋಲ್ ಮಾಡಿದ್ದಾರೆ.
2018ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ 29 ವರ್ಷದ ಮಯಾಂಕ್ ಅಗರ್ವಾಲ್, ಕಳೆದ ಡಿಸೆಂಬರ್ ತಿಂಗಳಿಂದ ಯಾವುದೇ ಟೆಸ್ಟ್ ಪಂದ್ಯ ಆಡಿಲ್ಲ. ಕಳೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೆ 26 ರನ್ ಬಾರಿಸಿದ್ದರು. ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲೇ ಲಾಕ್ ಆಗಿದ್ದಾರೆ. ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರತಿನಿಧಿಸುತ್ತಿದ್ದಾರೆ.