More

    ನೆಟ್ಸ್​ನಲ್ಲಿ ಸುನೀಲ್​ ಗಾವಸ್ಕರ್​ ಕೆಟ್ಟ ಬ್ಯಾಟ್ಸ್​ಮನ್​ ಎಂದು ಕಿರಣ್​ ಮೋರೆ ಹೇಳಿದ್ಯಾಕೆ..!

    ಮುಂಬೈ: 70, 80ರ ದಶಕದಲ್ಲಿ ಸುನೀಲ್​ ಗಾವಸ್ಕರ್​ ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು ಎನಿಸಿದ್ದ ಆಟಗಾರ. ವಿಶ್ವ ಕ್ರಿಕೆಟ್​ ಭೂಪಟದಲ್ಲಿ ಭಾರತ ಗುರುತಿಸುವಂತೆ ಮಾಡಿದವರ ಪೈಕಿ ಗಾವಸ್ಕರ್​ ಕೂಡ ಒಬ್ಬರು. ಲಿಟ್ಟಲ್​ ಮಾಸ್ಟರ್​ ಖ್ಯಾತಿಯ ಮುಂಬೈನ ಗಾವಸ್ಕರ್​ ಟೆಸ್ಟ್​ ಕ್ರಿಕೆಟ್​ನಲ್ಲಿ 10 ಸಾವಿರ ರನ್​ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್​. ಅದೆಷ್ಟೋ ಯುವ ಕ್ರಿಕೆಟಿಗರಿಗೆ, ವಿದೇಶಿ ಆಟಗಾರರಿಗೆ ಸ್ಫೂತಿರ್ಯ ಸೆಲೆಯಾಗಿದ್ದ ಸುನೀಲ್​ ಗಾವಸ್ಕರ್​. ಭಾರತದ ಮಾಜಿ ವಿಕೆಟ್​ ಕೀಪರ್​ ಕಿರಣ್​ ಮೋರೆ ಮಾತ್ರ ಗಾವಸ್ಕರ್​, ನೆಟ್ಸ್​ನಲ್ಲಿ ಅತ್ಯಂತ ಕೆಟ್ಟ ಆಟಗಾರ ಎಂದಿದ್ದಾರೆ.

    ಇದನ್ನೂ ಓದಿ: 2019ರ ವಿಶ್ವಕಪ್​ ವೇಳೆ ಪಾಕ್​ ತಂಡದಲ್ಲಿತ್ತು ಭಯದ ವಾತಾವರಣ

    ಟೆಸ್ಟ್​ ಕ್ರಿಕೆಟ್​ನಲ್ಲಿ ತಾಂತ್ರಿಕವಾಗಿ ಸಾಕಷ್ಟು ನೈಪುಣ್ಯತೆ ಹೊಂದಿದ್ದ ಗಾವಸ್ಕರ್​ ಮಂದಗತಿಯ ಬ್ಯಾಟಿಂಗ್​ ಮೂಲಕ ದಿನಗಟ್ಟಲೇ ಕ್ರೀಸ್​ನಲ್ಲಿ ನಿಲ್ಲುತ್ತಿದ್ದರು. ಆದರೆ, ಗಾವಸ್ಕರ್​ ಪಂದ್ಯ ಹಿಂದಿನ ಮಾತ್ರ ಸೂಕ್ತರಿತಿಯಲ್ಲಿ ತಯಾರಿ ಮಾಡುಕೊಳ್ಳುತ್ತಿರಲಿಲ್ಲ ಎಂದು ಕಿರಣ್​ ಮೋರೆ ಹೇಳಿದ್ದಾರೆ. ನಾವು ನಾಳೆ ಹೇಗೆ ಆಡುತ್ತಾರೆ, ಯಾವುದೇ ತಯಾರಿ ಮಾಡಿಕೊಳ್ಳುತ್ತಿಲ್ಲ. ರನ್​ ಹೇಗೆ ಗಳಿಸುತ್ತಾರೆ ಎಂದು ಯೋಚಿಸುತ್ತಿದ್ದರೆ, ಪಂದ್ಯದ ದಿನ ಅವರ ಬ್ಯಾಟಿಂಗ್​ ನೋಡುತ್ತಿದ್ದರೆ ವಾವ್​ ಎನ್ನುತ್ತಿದ್ದೇವು ಎಂದು ಮೋರೆ ಹೇಳಿಕೊಂಡಿದ್ದಾರೆ. ಅವರಿಗಿದ್ದ ಏಕಾಗ್ರತೆಯೇ ದೇವರ ಕೊಡುಗೆ, ಅವರ ಯಶಸ್ಸಿನ ಹಿಂದೆ ಏಕಾಗ್ರತೆಯೇ ಗುಟ್ಟು, ಯಾರು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: 5 ಬಾರಿ ಕರೊನಾ ಪಾಸಿಟಿವ್​ ಬಂದರೂ ಪಾರಾದ ಬಾಕ್ಸರ್ ಡಿಂಗ್ಕೊ 

    ಸುನೀಲ್​ ಗಾವಸ್ಕರ್​, 125 ಟೆಸ್ಟ್​ ಪಂದ್ಯಗಳಿಂದ 34 ಶತಕ ಒಳಗೊಂಡಂತೆ 10122 ರನ್​ ಸಿಡಿಸಿದ್ದಾರೆ. 2005ರಲ್ಲಿ ಸಚಿನ್​ ತೆಂಡುಲ್ಕರ್​ ಈ ದಾಖಲೆ ಹಿಂದಿಕ್ಕಿದರು. 1983 ಏಕದಿನ ವಿಶ್ವಕಪ್​ ವಿಜೇತ ಭಾರತ ತಂಡದ ಭಾಗವಾಗಿದ್ದರು. 70 ವರ್ಷ ಗಾವಸ್ಕರ್​ ಸದ್ಯ ವೀಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜುಲೈ 10ಕ್ಕೆ 71ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

    ಸರೋಜ್ ಖಾನ್​ ಜತೆ ಕೆಲಸ ಮಾಡಿದ್ದೇ ನನ್ನ ಭಾಗ್ಯ; ಪ್ರಿಯಾಂಕಾ ಉಪೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts