

ಕರಾಚಿ: ರಾಷ್ಟ್ರೀಯ ತಂಡದ ಪರ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಉತ್ತಮ ನಿರ್ವಹಣೆ ನೀಡಿದರೆ ತಂಡದಲ್ಲಿ ಸ್ಥಾನ ಕಾಯಂ ಎನ್ನುವುದು ಸಾಮಾನ್ಯವಿಷಯ. ಆದರೆ, ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿಯೇ ಆಡುವರರನ್ನು ನೋಡಿದ್ದೇವೆ. ಇದು ಎಲ್ಲ ತಂಡಗಳಲ್ಲೂ ಕಾಣಸಿಗುತ್ತದೆ. ಇದೇ ಮಾದರಿಯಲ್ಲಿ 2019ರ ಏಕದಿನ ವಿಶ್ವಕಪ್ನಲ್ಲಿ ಪಾಕ್ ಆಟಗಾರರ ನಡುವಳಿಕೆಯನ್ನು ಅಂದಿನ ಆಯ್ಕೆ ಸಮಿತಿ ಮುಖ್ಯಸ್ಥ ಇಂಜಮಾಮ್ ಉಲ್ ಹಕ್ ಬಹಿರಂಗಪಡಿಸಿದ್ದಾರೆ.
ಕಳೆದ ವರ್ಷ ನಡೆದ ವಿಶ್ವಕಪ್ ಟೂನಿರ್ ಕಹಿ ಟನೆಗಳನ್ನು ಮೆಲುಕು ಹಾಕಿದ ಇಂಜಮಾಮ್, ಆಟಗಾರರು ತುಂಬಾ ಭಯದಲ್ಲಿದ್ದರು, ಕೇವಲ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದಕ್ಕಷ್ಟೇ ಆಡುವಂತಿತ್ತು. ಸರ್ಫ್ರಾಜ್ ಅಹಮದ್ ನಾಯಕತ್ವದಿಂದ ಕೆಳಗಿಳಿಸಿದ್ದು ಸರಿಕಾಣಲಿಲ್ಲ ಎಂದು ಹೇಳಿದ್ದಾರೆ. ನಾನು ಕಂಡಂತೆ ಅವರೊಬ್ಬ ಪಾಕ್ ಕಂಡ ಉತ್ತಮ ನಾಯಕ. 2016 ರಿಂದ 2019ರ ಏಕದಿನ ವಿಶ್ವಕಪ್ವರೆಗೂ ಪಾಕ್ ತಂಡ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಇಂಜಮಾಮ್, ಮೂರು ಮಾದರಿಯಲ್ಲೂ ಸರ್ಫ್ರಾಜ್ ಖಾನ್ ಉತ್ತಮ ನಾಯಕನಾಗಿದ್ದರು.
2017ರ ಸರ್ಫ್ರಾಜ್ ಅಹಮದ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಇಂಥ ನಾಯಕನನ್ನು ಕೆಳಗಿಳಿಸಿ ತಂಡದಿಂದ ಕೈಬಿಟ್ಟಿದ್ದು ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದು ಇಂಜಮಾಮ್ ಹೇಳಿದ್ದಾರೆ. ಏಕದಿನ ತಂಡದ ನಾಯಕ ಬಾಬರ್ ಅಜಮ್ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಬಾಬರ್ ಅವರಿಂದ ಉತ್ತಮ ಕ್ರಿಕೆಟ್ ಇನ್ನೂ ಬರಬೇಕಿದೆ ಎಂದು ಇಂಜಮಾಮ್ ಹೇಳಿದ್ದಾರೆ.