

ಮುಂಬೈ: ವಾಸಿಂ ಜಾಫರ್, ದೇಶೀಯ ಕ್ರಿಕೆಟ್ನಲ್ಲಿ ಕಿಂಗ್ ಆಗಿ ಮೆರೆದ ಆಟಗಾರ. ಇತ್ತೀಚೆಗಷ್ಟೇ ಉತ್ತರಾಖಂಡ ರಣಜಿ ತಂಡಕ್ಕೆ ಮುಖ್ಯಕೋಚ್ ಆಗಿ ನೇಮಕಗೊಂಡಿರುವ ಜಾಫರ್, ಕೇವಲ ಆಟಗಾರನಲ್ಲದೆ, ಉತ್ತಮ ವಿಶ್ಲೇಷಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ದಿಗ್ಗಜ ಸಚಿನ್ ತೆಂಡುಲ್ಕರ್, ಸ್ಟಾರ್ ಬ್ಯಾಟ್ಸ್ಮನ್ ರೋಹಿತ್ ಶರ್ಮ ಹಾಗೂ ನಾಯಕ ವಿರಾಟ್ ಕೊಹ್ಲಿ, ಈ ಮೂವರ ನಡುವೆ ಏಕದಿನ ಕ್ರಿಕೆಟ್ನಲ್ಲಿ ಉತ್ತಮರು ಯಾರೆಂಬ ಕಠಿಣ ಪ್ರಶ್ನೆಗೆ ತರ್ಕಬದ್ಧವಾಗಿಯೇ ಉತ್ತರ ನೀಡಿದ್ದಾರೆ ಜಾಫರ್. ಮುಂಬೈನ ಜಾಫರ್ ಪಾಲಿಗೆ ನಿಗದಿತ ಓವರ್ಗಳಿಗೆ ವಿರಾಟ್ ಕೊಹ್ಲಿಯೇ ಬೆಸ್ಟ್ ಎಂದು ಸಕಾರಣದೊಂದಿಗೆ ವಿವರಿಸಿದ್ದಾರೆ.
ಇದನ್ನೂ ಓದಿ: ಬಾರ್ಸಿಲೋನಾಗೆ ಲಿಯೋನೆಲ್ ಮೆಸ್ಸಿ ಗುಡ್ಬೈ?
ತವರು ನೆಲದ ಹುಡುಗರಿಗೆ ಮಣೆ ಹಾಕದ ಜಾಫರ್, ಕ್ರಿಕ್ ಟ್ರ್ಯಾಕರ್ ವೆಬ್ಸೈಟ್ನಲ್ಲಿ ನಡೆದ ಸಂವಾದಲ್ಲಿ ಕೊಹ್ಲಿಯೇ ಬೆಸ್ಟ್ ಎಂದಿದ್ದಾರೆ. ಸಚಿನ್ ಅಧುನಿಕ ಕ್ರಿಕೆಟ್ನಲ್ಲಿ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಇರಬಹುದು, ಬ್ಯಾಟಿಂಗ್ ವಿಭಾಗದಲ್ಲಿ ಎಲ್ಲ ಮಾದರಿಯ ವಿಶ್ವ ದಾಖಲೆಹೊಂದಿದ್ದಾರೆ. 463 ಪಂದ್ಯಗಳಿಂದ 49 ಶತಕ ಸೇರಿದಂತೆ ಸರಾಸರಿ 44.83 ರಂತೆ 18426 ರನ್ ಕಲೆಹಾಕಿದ್ದಾರೆ. ಇನ್ನು ರೋಹಿತ್ ಶರ್ಮ ಕುರಿತು ಹೇಳುವುದಾದರೆ, 3 ದ್ವಿಶತಕ ಸಿಡಿಸಿರುವ ಆಟಗಾರ. 49.27 ಸರಾಸರಿಯಂತೆ 29 ಶತಕ ಒಳಗೊಂಡಂತೆ 9915 ರನ್ ಬಾರಿಸಿದ್ದಾರೆ. ಏಕದಿನ ವಿಶ್ವಕಪ್ನಲ್ಲಿ 5 ಶತಕ ಸಿಡಿಸಿದ ದಾಖಲೆ ಕೂಡ ಹೊಂದಿದ್ದಾರೆ. ಆದರೂ ಇವರಿಬ್ಬರಿಗೂ ಕೊಹ್ಲಿಯೇ ಏಕದಿನ ಕ್ರಿಕೆಟ್ನಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ ಎಂದು ಜಾಫರ್ ತಮ್ಮ ನಿಲುವನ್ನು ಸಮಥಿರ್ಸಿಕೊಂಡಿದ್ದಾರೆ. ಇದುವರೆಗೂ 248 ಪಂದ್ಯಗಳಿಂದ 43 ಶತಕ ಬಾರಿಸಿರುವ ಕೊಹ್ಲಿ 11867 ರನ್ ದಾಖಲಿಸಿದ್ದಾರೆ. ಕೊಹ್ಲಿಗೆ ಸಚಿನ್ ದಾಖಲೆ ಹಿಮ್ಮೆಟ್ಟುವ ಅವಕಾಶವಿದ್ದು, ಅವರಲ್ಲಿ ಇನ್ನು ಕ್ರಿಕೆಟ್ ಬಾಕಿ ಇದೆ ಎಂದು ಜಾಫರ್ ವಿಶ್ಲೇಷಿಸಿದ್ದಾರೆ.
ಮುಂಬೈ ಹಾಗೂ ವಿದರ್ಭ ರಣಜಿ ತಂಡ ಪ್ರತಿನಿಧಿಸಿರುವ ಜಾಫರ್, 30 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ವೃತ್ತಿ ಜೀವನದಲ್ಲಿ ಫೇವರಿಟ್ ಪಾರ್ಟನರ್ ಎಂದು ಹೇಳಿದ್ದಕ್ಕೆ ಯಾವಾಗಲೂ ಮನರಂಜನೆ ನೀಡುವ ವೀರೇಂದ್ರ ಸೆಹ್ವಾಗ್ ಎಂದು ಹೇಳಿದ್ದಾರೆ. ಕಳೆದ ಋತುವಿನವರೆಗೂ ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯವಾಗಿದ್ದ ಜಾರ್, ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಉತ್ತರಾಖಂಡ ರಣಜಿ ತಂಡಕ್ಕೆ ಮುಖ್ಯಕೋಚ್ ಆಗಿ ನೇಮಕಗೊಂಡರು.