More

    5 ಬಾರಿ ಕರೊನಾ ಪಾಸಿಟಿವ್​ ಬಂದರೂ ಪಾರಾದ ಬಾಕ್ಸರ್ ಡಿಂಗ್ಕೊ 

     ನವದೆಹಲಿ: ಕ್ಯಾನ್ಸರ್​ನಿಂದ ಬಳಲುತ್ತಿರುವ ಬಾಕ್ಸಿಂಗ್​ ಲೆಜೆಂಡ್​ ಏಷ್ಯಾಡ್​ ಸ್ವರ್ಣ ಪದಕ ವಿಜೇತ ಡಿಂಗ್ಕೊ ಸಿಂಗ್​ ಕರೊನಾ ವೈರಸ್​ನಿಂದ ಚೇತರಿಸಿಕೊಂಡಿದ್ದಾರೆ. ಶುಕ್ರವಾರ ನಡೆದ ಕೋವಿಡ್​-19 ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿದೆ. ಕ್ಯಾನ್ಸರ್​ನಿಂದ ಬಳಲುತ್ತಿರುವ ಡಿಂಗ್ಕೊ ಅವರನ್ನು ಮಣಿಪುರ ಇಂಫಾಲ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕೋವಿಡ್-19 ವರದಿ ನೆಗೆಟಿವ್​ ಬಂದ ಹಿನ್ನೆಲೆಯಲ್ಲಿ ಡಿಂಗ್ಕೊ ಅವರನ್ನು ಮನೆಗೆ ವಾಪಸ್​ ಕರೆತಂದಿದ್ದು, 15 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಮೇ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಡಿಂಗ್ಕೊ ಐದು ಬಾರಿ ನಡೆಸಿದ ಕರೊನಾ ವೈರಸ್​ ಪರೀಕ್ಷೆಯಲ್ಲಿ ಪಾಸಿಟಿವ್​ ಬಂದಿತ್ತು. 

     

    ಇದನ್ನೂ ಓದಿ:FACT-CHECK| ಕಪಿಲ್ ದೇವ್ ಎಂದೂ ನೋಬಾಲ್ ಎಸೆದಿಲ್ಲವೇ?

    ಕಳೆದ ಒಂದು ತಿಂಗಳಿಂದ ವೈದ್ಯಕಿಯ ಸಿಬ್ಬಂದಿ ನನ್ನ ಆರೈಕೆ ನೋಡಿಕೊಂಡರು. ನಾನು ಜೀವನದ ಜತೆ ಹೋರಾಡುತ್ತಿರುವುದಕ್ಕೆ ಅವರು ಸಾಥ್​ ನೀಡಿದರು ಎಂದು ಯಕೃತ್ತು ಕ್ಯಾನ್ಸರ್​ನಿಂದ ಬಳಲುತ್ತಿರುವ ಡಿಂಗ್ಕೊ ಹೇಳಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ 5 ಬಾರಿ ನಡೆದ ಕೋವಿಡ್​-19ರ ಪರೀೆ ಪಾಸಿಟಿವ್​ ಬಂದಿತ್ತು. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವೈದ್ಯಕಿಯ ಸಿಬ್ಬಂದಿ ಸೇರಿದಂತೆ ಎಲ್ಲ ನನ್ನ ಹಿತೈಷಿಗಳಿಗೆ ನಾನು ಅಭಾರಿಯಾಗಿರುತ್ತೇನೆ ಎಂದು ಡಿಂಗ್ಕೊ ತಿಳಿಸಿದ್ದಾರೆ.

    ಇದನ್ನೂ ಓದಿ:VIDEO|ಫಾರ್ಮ್ ಹೌಸ್​ನಲ್ಲಿ ಅಭ್ಯಾಸ ಆರಂಭಿಸಿದ ವೇಗಿ ಮೊಹಮದ್​ ಶಮಿ


    ರೆಡಿಯೇಷನ್​ ಥಿರೆಪಿಗಾಗಿ ಲಾಕ್​ಡೌನ್​ ವೇಳೆ ಡಿಂಗ್ಕೊ ಅವರನ್ನು ವಿಶೇಷ ಅನುಮತಿಯೊಂದಿಗೆ ಮಣಿಪುರದಿಂದ ದೆಹಲಿಗೆ ಹೆಲಿಕಾಪ್ಟರ್​ನಲ್ಲಿ ಕರೆತಲಾಗಿತ್ತು. ಆದರೆ, ಜಾಂಡೀಸ್​ನಿಂದ ಬಳಲಿದ ಹಿನ್ನೆಲೆಯಲ್ಲಿ ಅವರನ್ನು ವಾಪಸ್​ ಕರೆದುಕೊಂಡು ಹೋಗಲಾಗಿತ್ತು. ಆದರೆ, ಇಂಪಾಲ್​ಗೆ ವಾಪಸಾದ ಬೆನ್ನಲ್ಲೇ ಡಿಂಗ್ಕೊಗೆ ಕೋವಿಡ್​-19 ಪಾಸಿಟಿವ್​ ಸೋಂಕು ಕಾಣಿಸಿಕೊಂಡಿತ್ತು. 1998ರಲ್ಲಿ ಬ್ಯಾಂಕಾಕ್​ನಲ್ಲಿ ನಡೆದ ಏಷ್ಯಾಡ್​ನಲ್ಲಿ ಸ್ವರ್ಣ ಜಯಿಸಿದ್ದ ಡಿಂಗ್ಕೊ, ಅದೇ ವರ್ಷ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು, 2013ರಲ್ಲಿ ಅರ್ಜುನ ಪ್ರಶಸ್ತಿಗೂ ದಕ್ಕಿತ್ತು. 6 ಬಾರಿ ವಿಶ್ವ ಚಾಂಪಿಯನ್​ ಎಂಸಿ ಮೇರಿಕೋಮ್​ ಸೇರಿದಂತೆ ದೇಶದ ಹಲವು ಬಾಕ್ಸರ್​ಗಳಿಗೆ ಅವರೇ ಸ್ಫೂರ್ತಿ ಆಗಿದ್ದಾರೆ.


    https://www.vijayavani.net/babar-azam-says-compare-me-with-pakistans-players-instead-of-virat/ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts