More

    ಏಷ್ಯನ್​ ಗೇಮ್ಸ್​​ 2023: ಭಾರತದ ನೂರು ಪದಕಗಳ ಸಾಧನೆಗೆ ಇನ್ನು ಒಂದೇ ಪದಕ ಬಾಕಿ, ಆರ್ಚರಿಯಲ್ಲಿ 2 ಚಿನ್ನ

    ಹಾಂಗ್​ಝೌ: ಏಷ್ಯನ್​ ಗೇಮ್ಸ್​​ 19ನೇ ಆವೃತ್ತಿಯಲ್ಲಿ ಭಾರತದಿಂದ ಪದಕಗಳ ಶತಕ ಸಂಭ್ರಮ ಖಚಿತವಾಗಿದೆ. ನಿನ್ನೆ 95 ಪದಕಗಳೊಂದಿಗೆ ಆಟ ಮುಗಿಸಿದ್ದ ಭಾರತ ಇಂದು ಆರಂಭದಲ್ಲಿ ನಾಲ್ಕು ಪದಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಪದಕಗಳ ಸಂಖ್ಯೆಯನ್ನು 99ಕ್ಕೆ ಏರಿಸಿಕೊಂಡಿದೆ. ಆರ್ಚರಿ ಸ್ಪರ್ಧೆಯಲ್ಲಿ 2 ಚಿನ್ನ ಮತ್ತು ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಭಾರತಕ್ಕೆ ಲಭಿಸಿದೆ.

    ಬೆಳಗ್ಗೆ 6.30ಕ್ಕೆ ನಡೆದ ಮಹಿಳೆಯರ ಕಂಪೌಂಡ್​ ಆರ್ಚರಿ ವಿಭಾಗದಲ್ಲಿ ಜ್ಯೋತಿ ಸುರೇಖಾ ಅವರು ದಕ್ಷಿಣ ಕೊರಿಯಾದ ಸೊ ಚೇವನ್ ಅವರನ್ನು 149-145 ಸ್ಕೋರ್​ನಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಅದೇ ರೀತಿ ಮಹಿಳೆಯರ ಕಂಪೌಂಡ್ ಆರ್ಚರಿ​ ವಿಭಾಗದಲ್ಲಿ ಅದಿತಿ ಗೋಪಿಚಂದ್ ಅವರು ಇಂಡೋನೇಷ್ಯಾದ ಜಿಲಿಝತ್ ಫಡ್ಲಿಯನ್ನು 146-140 ಸ್ಕೋರ್​ನಿಂದ ಮಣಿಸಿ ಕಂಚಿನ ಪದಕ ಜಯಿಸಿದರು.​

    ಇದನ್ನೂ ಓದಿ: World Cup 2023: ರೋಹಿತ್​ ಶರ್ಮರನ್ನು ಭೇಟಿಯಾಗಿ ಪಾಕಿಸ್ತಾನಕ್ಕೆ ಖಡಕ್​ ಸಂದೇಶ ರವಾನಿಸಿದ ದಿ ಗ್ರೇಟ್​ ಖಲಿ!

    ಬೆಳಗ್ಗೆ 7.10ಕ್ಕೆ ನಡೆದ ಪುರುಷರ ಕಂಪೌಂಡ್ ಆರ್ಚರಿ​ ವಿಭಾಗ ಚಿನ್ನ-ಬೆಳ್ಳಿಗೆ ಅಭಿಷೇಕ್​ ವರ್ಮ ಮತ್ತು ಓಜಸ್​ ಡಿಯೋಟಾಲ್​ ಕಾದಾಟ ನಡೆಸಿದರು. ಇದರಲ್ಲಿ ಓಜಸ್​ ಡಿಯೋಟಾಲ್​ ಚಿನ್ನ ಪದಕ ಗಳಿಸಿದರೆ, ಅಭಿಷೇಕ್​ ವರ್ಮ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಓಜಸ್ 2023ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕಾಂಪೌಂಡ್ ಫೈನಲ್ ಅನ್ನು ಗೆಲ್ಲುವ ಮೂಲಕ ತಮ್ಮ ಮೂರನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ.

    ಏಷ್ಯನ್​ ಗೇಮ್ಸ್​ 19ನೇ ಆವೃತ್ತಿಯಲ್ಲಿ ‘ಅಬ್​ ಕಿ ಬಾರ್​, ಸೌ ಪಾರ್​’ (ಈ ಬಾರಿ ನೂರರ ಆಚೆ) ಘೋಷಣೆಯೊಂದಿಗೆ ಭಾರತ ಅಭಿಯಾನ ಆರಂಭಿಸಿತು. ಅದರಂತೆಯೇ 100 ಪದಕ ಗೆಲ್ಲುವ ಕನಸು ನನಸಾಗಿಸಿಕೊಂಡಿದೆ. ಭಾರತ ಏಷ್ಯಾಡ್​ ಇತಿಹಾಸದಲ್ಲಿ ಮೊದಲ ಬಾರಿ 100ಕ್ಕೂ ಅಧಿಕ ಪದಕ ಗೆಲುವಿನ ದಾಖಲೆ ನಿರ್ಮಿಸಿದೆ. 2018ರಲ್ಲಿ 70 ಪದಕ ಗೆದ್ದಿದ್ದು ಇದುವರೆಗಿನ ಗರಿಷ್ಠ ಸಾಧನೆ ಆಗಿತ್ತು. ಭಾನುವಾರ ಕ್ರೀಡಾಕೂಟದ ಕೊನೆಯ ದಿನವಾಗಿದೆ. ಆದರೆ ಭಾರತದ ಕ್ರೀಡಾಸ್ಪರ್ಧೆಗಳು ಶನಿವಾರವೇ ಮುಕ್ತಾಯಗೊಳ್ಳಲಿವೆ. (ಏಜೆನ್ಸೀಸ್​)

    ವಿಶ್ವಕಪ್‌ನಲ್ಲಿ ಇಂದು ಲಂಕಾ-ಆಫ್ರಿಕಾ ಮುಖಾಮುಖಿ: ಕಾಡಲಿದೆ ಪ್ರಮುಖ ಬೌಲರ್‌ಗಳ ಅನುಪಸ್ಥಿತಿ

    ಧರ್ಮಶಾಲಾದಲ್ಲಿ ಇಂದು ಬಾಂಗ್ಲಾದೇಶ-ಅಫ್ಘಾನಿಸ್ತಾನ ಮುಖಾಮುಖಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts