ಧರ್ಮಶಾಲಾದಲ್ಲಿ ಇಂದು ಬಾಂಗ್ಲಾದೇಶ-ಅಫ್ಘಾನಿಸ್ತಾನ ಮುಖಾಮುಖಿ

New-Project-8
Published on

ಧರ್ಮಶಾಲಾ: ಏಕದಿನ ಕ್ರಿಕೆಟ್‌ನಲ್ಲಿ ಪ್ರಬಲರಿಗೆ ಸ್ಪರ್ಧೆಯೊಡ್ಡಬಲ್ಲ ತಂಡಗಳಾಗಿ ಗುರುತಿಸಿಕೊಂಡಿರುವ ಬಾಂಗ್ಲಾದೇಶ ಹಾಗೂ ಅ್ಘಾನಿಸ್ತಾನ ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಶನಿವಾರದ ಮೊದಲ ಪಂದ್ಯದಲ್ಲಿ ಅಭಿಯಾನ ಆರಂಭಿಸಲಿವೆ.

ಆಟಗಾರರ ಆಂತರಿಕ ಕಲಹದ ನಡುವೆ ಟೂರ್ನಿಗೆ ಆಗಮಿಸಿರುವ ಶಕೀಬ್ ಅಲ್ ಹಸನ್ ಸಾರಥ್ಯದ ಬಾಂಗ್ಲಾದೇಶ ಹಾಲಿ ವರ್ಷದಲ್ಲಿ ಅಸ್ಥಿರ ಪ್ರದರ್ಶನ ನೀಡಿದೆ. ಅನುಭವಿಗಳ ಕೊರತೆ ತಂಡಕ್ಕೆ ಕಾಡಲಿದೆ. ಶಕೀಬ್ ಹಾಗೂ ವಿಕೆಟ್ ಕೀಪರ್-ಬ್ಯಾಟರ್ ಮಶ್ಫೀಕರ್ ರಹೀಂ ಐದನೇ ವಿಶ್ವಕಪ್‌ನಲ್ಲಿ ಆಡಲಿದ್ದಾರೆ. ತಮೀಮ್ ಇಕ್ಬಾಲ್ ಕೊನೇ ಕ್ಷಣದಲ್ಲಿ ತಂಡದಿಂದ ಹೊರಗುಳಿದ ಬಳಿಕ ಹೊಸ ಆರಂಭಿಕನೊಂದಿಗೆ ಲಿಟನ್ ದಾಸ್ ಇನಿಂಗ್ಸ್ ಆರಂಭಿಸುವ ಸವಾಲು ಎದುರಾಗಿದೆ. ನಜ್ಮೂಲ್ ಶಾಂಟೋ, ತೌಹಿದ್ ಹೃದೋಯ್ ತಂಡಕ್ಕೆ ಸಮತೋಲನ ತರಲಿದ್ದಾರೆ. ಶಕೀಬ್, ಮೆಹಿದಿ ಹಸನ್ ಸ್ಪಿನ್ ಅಸ ಬಾಂಗ್ಲಾಗೆ ಪ್ರಮುಖ ಬಲ. ವಿಶ್ವಕಪ್‌ನಲ್ಲಿ ಉತ್ತಮ ದಾಖಲೆ ಹೊಂದಿರದ ಅ್ಘಾನಿಸ್ತಾನ 15 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಗೆದ್ದಿದೆ. ಆದರೆ 2019ರ ಆವೃತ್ತಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಎದುರು ಹೋರಾಟಯುತ ಸೋಲು ಕಂಡಿದ್ದು, ಐಸಿಸಿ ಟೂರ್ನಿಯಲ್ಲಿ ತನ್ನ ನೈಜ ಸಾಮರ್ಥ್ಯ ಪ್ರದರ್ಶಿಸಬೇಕಿದೆ. ರಶೀದ್ ಖಾನ್, ಮೊಹಮದ್ ನಬಿ, ಮುಜೀಬ್ ಉರ್ ರೆಹಮಾನ್ ಪ್ರದರ್ಶನದ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಏಕದಿನ

ಬಾಂಗ್ಲಾದೇಶ- 9

ಅ್ಘಾನಿಸ್ತಾನ-6

ಆರಂಭ: ಬೆಳಗ್ಗೆ 10.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net