More

    ವಿಶ್ವಕಪ್‌ನಲ್ಲಿ ಇಂದು ಲಂಕಾ-ಆಫ್ರಿಕಾ ಮುಖಾಮುಖಿ: ಕಾಡಲಿದೆ ಪ್ರಮುಖ ಬೌಲರ್‌ಗಳ ಅನುಪಸ್ಥಿತಿ

    ನವದೆಹಲಿ: ಪ್ರಮುಖ ಬೌಲರ್‌ಗಳ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿರುವ ಮಾಜಿ ಚಾಂಪಿಯನ್ ಶ್ರೀಲಂಕಾ ಮತ್ತು ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ದಕ್ಷಿಣ ಆಫ್ರಿಕಾ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಶನಿವಾರ ಮುಖಾಮುಖಿ ಆಗುವುದರೊಂದಿಗೆ ಅಭಿಯಾನ ಆರಂಭಿಸಲಿವೆ. ಇದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಈ ಸಲದ ಮೊದಲ ವಿಶ್ವಕಪ್ ಪಂದ್ಯವಾಗಿದೆ.
    ಪ್ರಮುಖ ಆಟಗಾರರ ಗೈರಿನಲ್ಲಿಯೂ ಏಷ್ಯಾಕಪ್‌ನಲ್ಲಿ ಗಮರ್ನಾಹ ನಿರ್ವಹಣೆ ತೋರಿದ ಲಂಕಾ, ಗೆಲುವಿನ ಆರಂಭದ ಕಾಣುವ ತವಕದಲ್ಲಿದೆ. ಐಸಿಸಿ ಟೂರ್ನಿಗಳಲ್ಲಿ ಚೋಕರ್ಸ್‌ ಎಂಬ ಹಣೆಪಟ್ಟಿ ಹೊಂದಿರುವ ದಕ್ಷಿಣ ಆಫ್ರಿಕಾ ಈ ಬಾರಿ ಅದನ್ನು ಅಳಿಸಿ ಹಾಕುವ ಹಂಬಲದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆಲುವಿನೊಂದಿಗೆ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಹರಿಣಗಳಿಗೆ ವೇಗಿಗಳಾದ ಅನ್ರಿಚ್ ನೋಕಿಯಾ, ಸಿಸಂಡ ಮಗಲ ಅಲಭ್ಯತೆ ಕಾಡಲಿದೆ. ಲಂಕನ್ನರಿಗೆ ಪ್ರಮುಖ ಸ್ಪಿನ್ನರ್ ವಾನಿಂದು ಹಸರಂಗ, ದುಷ್ಮಂತ ಚಮೀರ ಹಾಗೂ ಲಹಿರು ಮಧುಶಂಕ ಗೈರು ಕಾಡಲಿದೆ. ಭಾರತದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಆಫ್ರಿಕಾ ತಂಡಕ್ಕೆ ಕೇಶವ್ ಮಹಾರಾಜ್, ತಬರೇಜ್ ಶಮ್ಸಿ ಬಲವಿದೆ. ನಾಯಕ ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್ ಅನುಭವಿ ಬ್ಯಾಟರ್‌ಗಳು ಉತ್ತಮ ಾರ್ಮ್‌ನಲ್ಲಿದ್ದಾರೆ. ಐಪಿಎಲ್ ಅನುಭವ ಹೊಂದಿರುವ ವೇಗಿ ಕಗಿಸೋ ರಬಾಡ ತಂಡ ಪ್ರಮುಖ ಅಸ ಎನಿಸಿದ್ದಾರೆ. ಮೊದಲ ಐಸಿಸಿ ವಿಶ್ವಕಪ್ ಜಯಿಸುವ ಆಫ್ರಿಕನ್ನರ ಕನಸಿಗೆ ಹೆನ್ರಿಕ್ ಕ್ಲಾಸೆನ್ ಟ್ರಂಪ್ ಕಾರ್ಡ್ ಆಗಿದ್ದಾರೆ.
    ಆರಂಭಿಕ ಪಥುಮ್ ನಿಸ್ಸಾಂಕ ಮತ್ತು ನಾಯಕ ದಸುನ್ ಶನಕ ಫಾರ್ಮ್ ಲಂಕೆಗೆ ಚಿಂತಾಜನಕ ಎನಿಸಿದೆ. ಮಹೀಶ್ ತೀಕ್ಷಣ ಹಾಗೂ ಭರವಸೆಯ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಜತೆಗೆ ಮಥೀಶ ಪಥಿರಣ, ದಿಲ್ಶನ್ ಮಧುಶಂಕ ಒಳಗೊಂಡ ಯುವ ಬೌಲಿಂಗ್ ಪಡೆ ಹೊಂದಿದೆ.

    ಆರಂಭ: ಮಧ್ಯಾಹ್ನ 2
    ನೇರಪ್ರಸಾರ:ಸ್ಟಾರ್ ಸ್ಪೋರ್ಟ್ಸ್

    ವಿಶ್ವಕಪ್ ಮುಖಾಮುಖಿ
    ದ.ಆಫ್ರಿಕಾ-4
    ಶ್ರೀಲಂಕಾ-1
    ಟೈ-1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts