More

    ಲಾಕ್​ಡೌನ್​ನಲ್ಲಿ ಕನಸುಗಳ ಪಟ್ಟಿ ಸಿದ್ಧಪಡಿಸಿದ ಟೆನಿಸ್ ತಾರೆ ಬಿಯಾಂಕಾ ಆಂಡ್ರೆಸ್ಕು

    ಟೊರಾಂಟೊ: ಲಾಕ್​ಡೌನ್​ ನಂತರದಲ್ಲಿ ಎಲ್ಲರೂ ಮರಳಿ ಕ್ರೀಡೆಯಲ್ಲಿ ತೊಡಗಿಕೊಳ್ಳುವ ಹಂಬಲದಲ್ಲಿದ್ದರೆ, ಕೆನಡದ ಗ್ಲಾಮರಸ್ ಟೆನಿಸ್ ತಾರೆ ಬಿಯಾಂಕಾ ಆಂಡ್ರೆಸ್ಕು ತಮ್ಮ ವೃತ್ತಿಜೀವನದ ಕನಸುಗಳ ಪಟ್ಟಿಯನ್ನೇ ಲಾಕ್​ಡೌನ್​ ವೇಳೆ ಸಿದ್ಧಪಡಿಸಿಕೊಂಡಿದ್ದಾರೆ. ಅಮೆರಿಕದ ಮಾಜಿ ವಿಶ್ವ ನಂ. 1 ತಾರೆ ಸೆರೇನಾ ವಿಲಿಯಮ್ಸ್ ಅವರ ಗರಿಷ್ಠ ಗ್ರಾಂಡ್ ಸ್ಲಾಂ ಗೆಲುವಿನ ದಾಖಲೆಯನ್ನು ಮುರಿಯುವುದು ಮತ್ತು ವಿಶ್ವದ ಶ್ರೇಷ್ಠ ಆಟಗಾರ್ತಿ ಎನಿಸುವುದು ಈ ಪೈಕಿ ಪ್ರಮುಖವಾದುದು.

    20 ವರ್ಷದ ಆಂಡ್ರೆಸ್ಕು ಈಗಾಗಲೆ ಯುಎಸ್ ಓಪನ್ ಪ್ರಶಸ್ತಿ ಜಯಿಸುವ ಮೂಲಕ ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಖಾತೆ ತೆರೆದಿದ್ದಾರೆ. ಕಳೆದ ವರ್ಷ ನ್ಯೂಯಾರ್ಕ್​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅವರು ಸೆರೇನಾ ವಿಲಿಯಮ್ಸ್ ಅವರನ್ನೇ ಮಣಿಸುವ ಮೂಲಕ ಪ್ರಶಸ್ತಿ ಜಯಿಸಿದ್ದರು. ಇದೀಗ ಸೆರೇನಾ ವಿಲಿಯಮ್ಸ್ ಅವರ ಮುಕ್ತ ಟೆನಿಸ್ ಯುಗದ ಗರಿಷ್ಠ 23 ಗ್ರಾಂಡ್ ಸ್ಲಾಂ ಗೆಲುವಿನ ದಾಖಲೆಯನ್ನೇ ಮುರಿಯುವುದೇ ತಮ್ಮ ಕನಸು ಎಂದಿದ್ದಾರೆ. ದಿಗ್ಗಜ ಆಟಗಾರ್ತಿಯರಾದ ಕ್ರಿಸ್ ಎವರ್ಟ್, ಮಾರ್ಗರೇಟ್ ಕೋರ್ಟ್ ಅವರ ಹೆಸರಿನಲ್ಲಿರುವ ಎಲ್ಲ ದಾಖಲೆಗಳನ್ನೂ ಮುರಿಯುವ ಹಂಬಲ ಹೊಂದಿದ್ದಾರೆ. ಗ್ಲಾಮರ್ ಲುಕ್​ನಿಂದ ಈಗಾಗಲೆ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಆಂಡ್ರೆಸ್ಕು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮಾದಕ ಚಿತ್ರಗಳನ್ನು ಪ್ರಕಟಿಸುವ ಮೂಲಕವೂ ಗಮನಸೆಳೆಯುತ್ತಿರುತ್ತಾರೆ.

    ಇದನ್ನೂ ಓದಿ:  ಸೆರೇನಾ ವಿಲಿಯಮ್ಸ್ ಟೆನಿಸ್ ಅಭ್ಯಾಸಕ್ಕೆ ಪುತ್ರಿಯೇ ಜತೆಗಾರ್ತಿ!
    ಲಾಕ್​ಡೌನ್​ನಲ್ಲಿ ಕನಸುಗಳ ಪಟ್ಟಿ ಸಿದ್ಧಪಡಿಸಿದ ಟೆನಿಸ್ ತಾರೆ ಬಿಯಾಂಕಾ ಆಂಡ್ರೆಸ್ಕು

    ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡಲು ಈ ರೀತಿಯಾಗಿ ಕನಸುಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವುದು ಮುಖ್ಯ ಎಂಬುದು ಆಂಡ್ರೆಸ್ಕು ಅವರ ಸೂತ್ರವಾಗಿದೆ. ಇದು ನಮಗೆ ಹೆಚ್ಚಿನ ಪ್ರೇರಣೆ, ಸ್ಫೂರ್ತಿ ನೀಡುತ್ತದೆ ಎನ್ನುತ್ತಾರೆ. ‘ನಾನು ದೊಡ್ಡ ದೊಡ್ಡ ಕನಸುಗಳನ್ನು ಕಾಣುವುದನ್ನು ಇಷ್ಟಪಡುತ್ತೇನೆ. ಇದು ನನಗೆ ಕೋರ್ಟ್​ನಲ್ಲಿ ಉತ್ತಮ ನಿರ್ವಹಣೆ ತೋರಲು ಪ್ರೇರಣೆ ಒದಗಿಸುತ್ತದೆ. ನಾನು ಯಾವಾಗಲೂ ಶೇ. 150ರಷ್ಟು ಪರಿಶ್ರಮ ಹಾಕಲು ಪ್ರಯತ್ನಿಸುತ್ತೇನೆ’ ಎಂದು ಆಂಡ್ರೆಸ್ಕು ಹೇಳಿದ್ದಾರೆ. ಮುಂಬರುವ ಯುಎಸ್ ಓಪನ್​ನಲ್ಲಿ ಆಡಲು ಸಜ್ಜಾಗುತ್ತಿರುವ ಆಂಡ್ರೆಸ್ಕು, ಟೂರ್ನಿ ಸುರಕ್ಷಿತವಾಗಿ ನಡೆಯುವ ವಿಶ್ವಾಸ ಹೊಂದಿದ್ದಾರೆ.

    ಪುಟ್ಟ ಬಾಲಕಿಯ ಟೆನಿಸ್ ಆಟಕ್ಕೆ ಮನಸೋತ ಸಾನಿಯಾ ಮಿರ್ಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts