ಪುಟ್ಟ ಬಾಲಕಿಯ ಟೆನಿಸ್ ಆಟಕ್ಕೆ ಮನಸೋತ ಸಾನಿಯಾ ಮಿರ್ಜಾ!

sania1
Published on

ಬೆಂಗಳೂರು: ಆರನೇ ವಯಸ್ಸಿನಲ್ಲೇ ರ‌್ಯಾಕೆಟ್ ಹಿಡಿದಿದ್ದ ಸಾನಿಯಾ ಮಿರ್ಜಾ ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ ಟೆನಿಸ್ ತಾರೆ. ಇದೀಗ ಅವರು ಪುಟ್ಟ ಬಾಲಕಿಯೊಬ್ಬಳು ರ‌್ಯಾಕೆಟ್ ಹಿಡಿದು ಟೆನಿಸ್ ಆಟಕ್ಕೆ ಸಜ್ಜಾದ ಚಿತ್ರಕ್ಕೆ ಮನಸೋತಿದ್ದಾರೆ.

ಟೆನಿಸ್ ಪ್ರೇಮಿ ಭಾಸ್ಕರ್ ಚಂದ್ರ ಎಂಬವರು ಇತ್ತೀಚೆಗೆ ಸಹೋದರ ಮಗಳ ಚಿತ್ರವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿ, ಸಾನಿಯಾ ಮಿರ್ಜಾರನ್ನು ಟ್ಯಾಗ್ ಮಾಡಿದ್ದರು. ಜತೆಗೆ, ‘ಟೆನಿಸ್ ಆಟವನ್ನು ಆಡಲು ಬಯಸಿರುವ ಈ ಬಾಲಕಿ ಇಶಿತಾಗೆ ಹಾರೈಸಿ’ ಎಂದು ಟ್ವೀಟಿಸಿದ್ದರು. ಇದಕ್ಕೆ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಾನಿಯಾ ಮಿರ್ಜಾ, ನನ್ನ ಹಾರೈಕೆ ಇದೆ ಎಂದಿದ್ದಾರೆ. ಇದಕ್ಕೆ ಎರಡೂವರೆ ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಸಾನಿಯಾರ ಹಲವಾರು ಅಭಿಮಾನಿಗಳೂ ಈ ಚಿತ್ರಕ್ಕೆ ಮೆಚ್ಚುಗೆಯ ಕಮೆಂಟ್‌ಗಳನ್ನು ಹಾಕಿದ್ದಾರೆ.

ಇನ್ನೂ ಕರೊನಾ ಅಪಾಯ ಇದೆ
ಜೋಕೊವಿಕ್ ಆಯೋಜಿಸಿದ್ದ ಟೆನಿಸ್ ಟೂರ್ನಿ ಆಡ್ರಿಯಾ ಟೂರ್‌ನಲ್ಲಿ ಆಟಗಾರರು ಕರೊನಾ ಸೋಂಕಿಗೆ ತುತ್ತಾಗಿರುವುದು, ಅಪಾಯ ಇನ್ನೂ ಇದೆ ಎಂಬುದನ್ನು ತೋರಿಸುತ್ತಿದೆ ಎಂದು ಸಾನಿಯಾ ಮಿರ್ಜಾ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಬಗ್ಗೆ ರಿಸ್ಕ್ ತೆಗೆದುಕೊಳ್ಳಬಾರದು. ಕರೊನಾ ಜೋಕ್ ಅಲ್ಲ. ಎಲ್ಲದಕ್ಕೂ ಕಾದು ನೋಡುವುದು ಉತ್ತಮ ಎಂದು ಸಾನಿಯಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net