2 ಪಂದ್ಯದಲ್ಲಿ ಒಂದೇ ಎದುರಾಳಿ ಎದುರು ಒಂದೇ ರೀತಿ ರನೌಟ್​: ಟ್ರೆಂಟ್​ ಬೌಲ್ಟ್​ ವಿರುದ್ಧ ಸ್ಪಾಟ್​ ಫಿಕ್ಸಿಂಗ್​ ಆರೋಪ! Trent Boult

Trent Boult
Published on

Trent Boult : ನ್ಯೂಜಿಲೆಂಡ್‌ನ ಸ್ಟಾರ್ ವೇಗಿ ಟ್ರೆಂಟ್ ಬೌಲ್ಟ್ ಪ್ರಸ್ತುತ 2025ರ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ. ಅವರು ಮುಂಬೈ ನ್ಯೂಯಾರ್ಕ್ ತಂಡವನ್ನು ಪ್ರತಿನಿಧಿಸುತ್ತಾರೆ. ಈ ಸೀಸನ್​ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ವಿರುದ್ಧದ ಎರಡು ಪಂದ್ಯಗಳಲ್ಲಿ ವಿಚಿತ್ರ ರೀತಿಯಲ್ಲಿ ರನೌಟ್ ಆಗಿದ್ದಾರೆ. ಈ ಕಾರಣದಿಂದಾಗಿ, ಅವರ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪಗಳನ್ನು ಮಾಡಲಾಗುತ್ತಿದೆ.

ಎರಡು ವಾರಗಳ ಹಿಂದೆ, ಎಂಐ ನ್ಯೂಯಾರ್ಕ್ ತಂಡವು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ, ಕಿವೀಸ್ ವೇಗಿ ಅನಿರೀಕ್ಷಿತವಾಗಿ ರನೌಟ್ ಆದರು. ವೇಗಿ ಆಡಮ್ ಮಿಲ್ನೆ ಎಸೆದ ಚೆಂಡನ್ನು ಎಂಐ ನ್ಯೂಯಾರ್ಕ್​ ಬ್ಯಾಟರ್​​ ತಜಿಂದರ್ ಧಿಲ್ಲನ್ ಶಾಟ್​ ಆಡಿದರು. ಬಳಿಕ, ಬ್ಯಾಟರ್‌ಗಳು ಒಂದು ರನ್​ ಪೂರ್ಣಗೊಳಿಸಿದರು. ಈ ವೇಳೆ ನಾನ್​ಸ್ಟ್ರೈಕ್​ನಿಂದ ಸ್ಟ್ರೈಕ್‌ ಕಡೆ ತಲುಪಿದ ಟ್ರೆಂಟ್​ ಬೌಲ್ಟ್​ ಎರಡನೇ ರನ್​​​ಗೆ ಪ್ರಯತ್ನಿಸಿದರು. ಆದರೆ, ಆತುರದಿಂದ ತಮ್ಮ ಬ್ಯಾಟ್ ಅನ್ನು ಕೈಬಿಟ್ಟರು. ಅವರು ಕ್ರೀಸ್‌ಗೆ ಬಂದು ಕಾಲಿನಿಂದ ಕ್ರಿಸ್​ ಟಚ್​ ಮಾಡಿ ಮತ್ತೆ ಓಡಲು ಪ್ರಯತ್ನಿಸಿ ಮತ್ತೆ ಕ್ರೀಸ್​ಗೆ ಮರಳಿದರು. ಆದರೆ, ಅಷ್ಟರಲ್ಲಾಗಲೇ ಕೀಪರ್​ ಬಾಲ್​ ಹಿಡಿದು ರನೌಟ್​ ಮಾಡಿದರು.

ಇದನ್ನೂ ಓದಿ: ಕುಟುಂಬದ ಸಾವು, ಸ್ನೇಹಿತರಿಲ್ಲ: ಫ್ಲ್ಯಾಟ್​ನಲ್ಲಿ 3 ವರ್ಷ ಏಕಾಂಗಿಯಾಗಿ ಬದುಕಿದ ವ್ಯಕ್ತಿ, ಮಲದಿಂದಲೇ ತುಂಬಿತ್ತು ರೂಮ್​! Man Locks Himself ಜೂನ್ 29ರಂದು, ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು ಎಂಐ ನ್ಯೂಯಾರ್ಕ್ ಮತ್ತೆ ಮುಖಾಮುಖಿಯಾದವು. ಈ ಪಂದ್ಯದಲ್ಲಿ, ಟ್ರೆಂಟ್ ಬೌಲ್ಟ್ ಮತ್ತೊಮ್ಮೆ ಇದೇ ರೀತಿಯ ತಪ್ಪನ್ನು ಮಾಡಿದರು. ಮಾರ್ಕಸ್ ಸ್ಟೊಯಿನಿಸ್ ಉತ್ತಮ ಯಾರ್ಕರ್ ಬೌಲ್ ಮಾಡಿದರು ಮತ್ತು ಬೌಲ್ಟ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡು ಅವರ ಕಾಲಿಗೆ ತಗುಲಿ ಹಿಂದಕ್ಕೆ ಹೋಯಿತು. ಚೆಂಡು ಎಲ್ಲಿಗೆ ಹೋಯಿತು ಎಂಬುದರತ್ತ ಗಮನ ಹರಿಸದ ಬೌಲ್ಟ್, ಓಡಲು ಪ್ರಯತ್ನಿಸಿದರು. ನಾನ್-ಸ್ಟ್ರೈಕರ್​ನಲ್ಲಿ ಬ್ಯಾಟ್ಸ್​ಮನ್​ ಬರಬೇಡಿ ಎಂದು ಹೇಳಿದಾಗ, ಬೌಲ್ಟ್​ ಮತ್ತೆ ಕ್ರೀಸ್‌ಗೆ ಹಿಂತಿರುಗಲು ಪ್ರಯತ್ನಿಸಿದರು. ಆದರೆ, ಕೀಪರ್ ತಕ್ಷಣ ರನೌಟ್​ ಮಾಡಿದರು.

ಎರಡು ಪಂದ್ಯದಲ್ಲಿ ಒಂದೇ ಎದುರಾಳಿಯ ವಿರುದ್ಧ ಟ್ರೆಂಟ್​ ಬೌಲ್ಟ್ ಒಂದೇ ರೀತಿಯಲ್ಲಿ ರನ್ ಔಟ್ ಆಗಿದ್ದನ್ನು ನೋಡಿದ ಕೆಲ ನೆಟ್ಟಿಗರು ಬೌಲ್ಟ್​ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ನೆಟ್ಟಿಗರು ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ, ಮುಂಬೈ ಈ ಋತುವಿನಲ್ಲಿ ಇದುವರೆಗೆ 7 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಆರು ಪಂದ್ಯಗಳನ್ನು ಸೋತಿದೆ. ಇದು ಪ್ಲೇಆಫ್ ತಲುಪುವ ಸಾಧ್ಯತೆಗಳನ್ನು ಸಂಕೀರ್ಣಗೊಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net