ಇವರಿಬ್ಬರ​ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ; ಟೀಮ್​ ಇಂಡಿಯಾ ಮಾಜಿ ನಾಯಕನ ಹೇಳಿಕೆ ವೈರಲ್​

Kapil Dev
Published on

ನವದೆಹಲಿ: ಜೂನ್​ 29ರಂದು ಮುಕ್ತಾಯಗೊಂಡ ಟಿ20 ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್​ ಪಟ್ಟ ಅಲಂಕರಿಸಿದ್ದು, ತಂಡ ಟ್ರೋಫಿ ಗೆಲ್ಲುತ್ತಿದ್ದಂತೆ ನಾಯಕ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಮಾದರಿ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಇವರ ನಡೆಗೆ ಕ್ರೀಡಾ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಈ ಕುರಿತು ಮಾತನಾಡಿರುವ 1983ರ ಏಕದಿನ ವಿಶ್ವಕಪ್​ ವಿಜೇತ ತಂಡದ ನಾಯಕ ಕಪಿಲ್​ ದೇವ್​ ವಿರಾಟ್​ ಹಾಗೂ ರೋಹಿತ್​ರನ್ನು ಹಾಡಿ ಹೊಗಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಕಪಿಲ್​ ದೇವ್​, ಯಾವುದೇ ಸ್ವರೂಪವಾಗಲಿ ವಿರಾಟ್​ ಹಾಗೂ ರೋಹಿತ್​ ಸ್ಥಾನವನ್ನು ತುಂಬಬಲ್ಲ ಆಟಗಾರರು ಭಾರತ ತಂಡದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಇವರಿಬ್ಬರು ಭಾರತೀಯ ಕ್ರಿಕೆಟ್​ಗೆ ದೊಡ್ಡ ಆಸ್ತಿಯಾಗಿದ್ದು, ಇವರಿಗೆ ಈ ರೀತಿ ವಿದಾಯ ಸಿಕ್ಕಿರುವುದನ್ನು ನೋಡಲು ಖುಷಿಯಾಗುತ್ತದೆ.

ವಿರಾಟ್​ ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ತಮ್ಮ ಮಹತ್ವ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಟಿ20 ವಿಚಾರಕ್ಕೆ ಬರುವುದಾದರೆ ಇನ್ನು ಮುಂದೆ ಖಂಡಿತವಾಗಿಯೂ ಅವರನ್ನು ಮಿಸ್​ ಮಾಡಿಕೊಳ್ಳುತ್ತೇವೆ. ಇವರಿಬ್ಬರು ಸಚಿನ್​ ಹಾಗೂ ಧೋನಿ ಇದ್ದ ಹಾಗೆ ಇಬ್ಬರ ಸ್ಥಾನವನ್ನು ತುಂಬಲು ಯಾರಿಂದಲೂ ಸಅಧ್ಯವಿಲ್ಲ ಎಂದು 1983ರ ಏಕದಿನ ವಿಶ್ವಕಪ್​ ವಿಜೇತ ತಂಡದ ನಾಯಕ ಕಪಿಲ್​ ದೇವ್​ ವಿರಾಟ್​ ಹಾಗೂ ರೋಹಿತ್​ರನ್ನು ವಿದಾಯದ ಕುರಿತು ಹೇಳಿದ್ದಾರೆ.

Virat Rohit
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net