

ನವದೆಹಲಿ: ವರ್ಷಗಳು ಕಳೆದಂತೆ ಜನರು ಎಲ್ಲಾ ವಿಚಾರಗಳಿಗೂ ತೆರೆದುಕೊಳ್ಳುವಂತಹರಾಗಿದ್ದಾರೆ. ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದುತ್ತಿದ್ದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದು, ಇಂದು ಭಾರತವು ಸೇರಿದಂತೆ ಅನೇಕ ದೇಶಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಮೈಲಿಗಲ್ಲನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ತಂತ್ರಜ್ಞಾನ ಮನುಷ್ಯನ ಜೀವನಕ್ಕೆ ಎಷ್ಟು ಪೂರಕ ಎಂಬುದಕ್ಕೆ ಚೀನಾದಲ್ಲಿ ನಡೆದಿರುವ ಈ ಘಟನೆಯೇ ಕೈಗನ್ನಡಿಯಾಗಿದೆ.
ತನ್ನ ಹೆಂಡತಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿರುವುದನ್ನು ಆಕೆಯ ಗಂಡ ಡ್ರೋನ್ ಮೂಲಕ ಪತ್ತೆಹಚ್ಚಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಲ್ಲದೇ ಈ ವಿಡಿಯೋವನ್ನು ಇಟ್ಟುಕೊಂಡು ಆತ ನ್ಯಾಯಾಲಯದ ಮೆಟ್ಟಿಲೇರಿದ್ದು, ತನಗೆ ವಿಚ್ಛೇದನ ಕೊಡಿಸುದಂತೆ ಮನವಿ ಮಾಡಿದ್ದಾನೆ.
ಚೀನಾದ ಹುಬೈ ಪ್ರಾಂತ್ಯದ ಶಿಯಾನ್‌ನ ನಿವಾಸಿ ಜಿಂಗ್ ಎನ್ನುವ ವ್ಯಕ್ತಿ ಟೆಕ್ನಾಲಾಜಿ ಮೂಲಕ ತನ್ನ ಹೆಂಡತಿಯ ಅನೈತಿಕ ಸಂಬಂಧವನ್ನು ಪತ್ತೆ ಹಚ್ಚಿದ್ದಾನೆ. ಇವರಿಬ್ಬರು ಮದುವೆಯಾದ ಮೇಲೆ ಮೊದಲು ಅನ್ಯೋನ್ಯವಾಗಿದ್ದರು. ಇಬ್ಬರಲ್ಲೂ ಯಾವುದೇ ಗೊಂದಲ ಅಥವಾ ಜಗಳವಾಗಿರಲಿಲ್ಲ. ಆದರೆ ಕಳೆದ ವರ್ಷದಿಂದ ಹೆಂಡತಿ, ಗಂಡನನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲು ಪ್ರಾರಂಭಿಸಳು ಶುರು ಮಾಡಿದ್ದಾಳೆ. ತನ್ನ ಪೋಷಕರನ್ನು, ಸಂಬಂಧಿಕರನ್ನು ಭೇಟಿ ಮಾಡಬೇಕೆಂದು ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಳು. ಇದರಿಂದ ಗಂಡ ಬೇಸರಕ್ಕೆ ಒಳಗಾಗುವುದರ ಜೊತೆಗೆ ಆಕೆಯ ಮೇಲೆ ಅನುಮಾನ ಮೂಡಲು ಶುರುವಾಗಿದೆ.
ಆಕೆ ಮನೆಯಿಂದ ಹೊರಟ ಬಳಿಕ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ತೆರಳುವುದನ್ನು ಗಂಡ ಗಮನಿಸಿದ್ದಾನೆ. ತನ್ನ ಹೆಂಡತಿ ಏನು ಮಾಡುತ್ತಿದ್ದಾಳೆ ಎಂದು ತಿಳಿಯಲು ಆತ ಟೆಕ್ನಾಲಜಿ ಮೊರೆ ಹೋಗಿದ್ದು, ಡ್ರೋನ್ ಒಂದನ್ನು ಖರೀದಿ ಮಾಡಿದ್ದಾನೆ. ಬಳಿಕ ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಭೇಟಿ ಮಾಡುತ್ತಿದ್ದಳು. ಆ ಬಳಿಕ ಅಲ್ಲೇ ಇದ್ದ ಪಾಳು ಬಿದ್ದ ಮನೆಯಲ್ಲಿ ಇವರಿಬ್ಬರು ಹೋಗುವುದನ್ನು ನೋಡಿದ್ದಾನೆ. ಆ ಬಳಿಕ ಆಕೆ ಕಾರಿನಲ್ಲಿ ಆಫೀಸ್ಗೆ ಹೋಗುವುದನ್ನು ಡ್ರೋನ್ ಮೂಲಕ ಕಂಡುಕೊಂಡಿದ್ದಾನೆ.
ಆ ಬಳಿಕ ಆಳಕ್ಕೆ ಇಳಿದು ಆತ ವಿಚಾರಿಸಿದಾಗ ತನ್ನ ಪತ್ನಿ ಕಂಪನಿಯ ಬಾಸ್ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ತಿಳಿದು ಬಂದಿದೆ. ಬಾಸ್ ಹೆಂಡತಿ ಕೂಡ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಜಿಂಗ್ ಪತ್ನಿಯನ್ನು ಆತ ನಿರ್ಜನ ಪ್ರದೇಶದಲ್ಲಿರುವ ಪಾಳು ಬಿದ್ದ ಮನೆಗೆ ಕರೆದುಕೊಂಡು ಬರುತ್ತಿದ್ದದ್ದು ಬೆಳಕಿಗೆ ಬಂದಿದೆ. ಹೆಂಡತಿಯ ಕಳ್ಳಾಟದ ವಿಡಿಯೋವನ್ನು ಇಟ್ಟುಕೊಂಡು ಪತಿ ಡಿವೋರ್ಸ್ಗೆ ಮುಂದಾಗಿದ್ದು, ನ್ಯಾಯಾಲಯಕ್ಕೆ ವಿಡಿಯೋವನ್ನು ಸಲ್ಲಿಸಿದ್ದಾನೆ. ತನಗೆ ಡಿವೋರ್ಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ.