ಇವರೇ ನೋಡಿ ಐಪಿಎಲ್​ನ ಅತ್ಯಂತ ದುಬಾರಿ ಆಟಗಾರರು! ಟಾಪ್​ 10ರಲ್ಲಿ ಯುವಿಯ ಸ್ಥಾನವೆಷ್ಟು? Most expensive players in IPL

IPL
Published on

Most expensive players in IPL: ಇನ್ನು ಕೆಲವೇ ವಾರಗಳಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ ( IPL ) ನ ಮೆಗಾ ಹರಾಜು ನಡೆಯಲಿದೆ. ಇದೇ ಅಕ್ಟೋಬರ್ 31ರಂದು ಸಂಜೆ 5 ಗಂಟೆಯೊಳಗೆ ಎಲ್ಲ ಐಪಿಎಲ್​ ಫ್ರಾಂಚೈಸಿಗಳು ತಮ್ಮ ರಿಟೇನ್ ಪಟ್ಟಿಯನ್ನು ಐಪಿಎಲ್​ ಆಡಳಿತ ಮಂಡಳಿಯ ಮುಂದೆ ಸಲ್ಲಿಸಬೇಕಿದೆ. ಐಪಿಎಲ್​ ಹರಾಜಿನ ಮೇಲೆ ಎಲ್ಲರ ಕಣ್ಣುಬಿದ್ದಿದ್ದು, ಈ ಬಾರಿ ದುಬಾರಿ ಆಟಗಾರನ ಪಟ್ಟ ಯಾರು ಪಡೆಯುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

ಸದ್ಯ ನಾವೀಗ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರರು ಯಾರು ಯಾರು ಎಂಬುದನ್ನು ನೋಡೋಣ. ಪ್ರಸ್ತುತ ಆಸ್ಟ್ರೇಲಿಯಾದ ಸ್ಟಾರ್​ ವೇಗಿ ಮಿಚೆಲ್ ಸ್ಟಾರ್ಕ್ ಕ್ಯಾಶ್​ ರಿಚ್​ ಲೀಗ್‌ನಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ದಾಖಲೆಯನ್ನು ಹೊಂದಿದ್ದಾರೆ. 2024ರ ಐಪಿಎಲ್​ ಹರಾಜಿನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ( KKR ) ತಂಡ ಸ್ಟಾರ್ಕ್ ಅವರನ್ನು ಬರೋಬ್ಬರಿ 24.75 ಕೋಟಿ ರೂ. ಕೊಟ್ಟು ಖರೀದಿ ಮಾಡಿತು. ಇದು ಐಪಿಎಲ್‌ನಲ್ಲಿ ಆಟಗಾರನಿಗೆ ಸಂದಾಯವಾದ ಅತ್ಯಧಿಕ ಬೆಲೆಯಾಗಿದೆ.

ಅದೇ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ( SRH ) ತಂಡ ಪ್ಯಾಟ್ ಕಮಿನ್ಸ್ ಅವರನ್ನು 20.50 ಕೋಟಿ ರೂ.ಗೆ ಖರೀದಿಸಿದೆ. ಇದು ಐಪಿಎಲ್ ಇತಿಹಾಸದಲ್ಲಿ ಎರಡನೇ ಗರಿಷ್ಠ ಬೆಲೆಯಾಗಿದೆ. ಸ್ಟಾರ್ಕ್ ಮತ್ತು ಕಮ್ಮಿನ್ಸ್ ನಂತರ, ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕುರ್ರಾನ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬೆಲೆ ಪಡೆದಿದ್ದಾರೆ. 2023 ರ ಐಪಿಎಲ್​ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ ಕರ್ರನ್ ಅವರನ್ನು 18.5 ಕೋಟಿ ರೂ.ಗೆ ಖರೀದಿ ಮಾಡಿತು.

* ಸ್ಯಾಮ್ ಕರ್ರಾನ್ ನಂತರದಲ್ಲಿ ಕ್ಯಾಮರೂನ್ ಗ್ರೀನ್- 17.50 ಕೋಟಿ ರೂ. ( RCB, 2023 )

* ಬೆನ್ ಸ್ಟೋಕ್ಸ್ 16.25 ಕೋಟಿ ರೂ. ( CSK 2023 )

* ಕ್ರಿಸ್ ಮೋರಿಸ್ - 16.25 ಕೋಟಿ ರೂ. ( ರಾಜಸ್ಥಾನ್ ರಾಯಲ್ಸ್, 2021 )

* ಯುವರಾಜ್ ಸಿಂಗ್ - 16 ಕೋಟಿ ರೂ. ( ದೆಹಲಿ ಕ್ಯಾಪಿಟಲ್ಸ್, 2015 )

* ನಿಕೋಲಸ್ ಪೂರನ್ - 16 ಕೋಟಿ ರೂ. ( ಲಖನೌ, 2023 )

* ಪ್ಯಾಟ್ ಕಮ್ಮಿನ್ಸ್ - 15.50 ಕೋಟಿ ರೂ. ( ಕೆಕೆಆರ್, 2020 )

* ಇಶಾನ್ ಕಿಶನ್ - 15.25 ಕೋಟಿ ರೂ. ( ಮುಂಬೈ ಇಂಡಿಯನ್ಸ್, 2022)

ಈ ಮೇಲಿನ ಆಟಗಾರರು ಅತ್ಯಂತ ದುಬಾರಿ ಟಾಪ್-10 ಆಟಗಾರರಾಗಿದ್ದಾರೆ.

ಆಯಾ ಐಪಿಎಲ್ ಸೀಸನ್​ ಪ್ರಕಾರ ಅತ್ಯಂತ ದುಬಾರಿ ಆಟಗಾರರು

* 2008 : MS ಧೋನಿ (CSK), 9.5 ಕೋಟಿ ರೂ.

* 2009 : ಕೆವಿನ್ ಪೀಟರ್ಸನ್ (RCB), ಆಂಡ್ರ್ಯೂ ಫ್ಲಿಂಟಾಫ್ (CSK), 9.8 ಕೋಟಿ ರೂ.

* 2010 : ಶೇನ್ ಬಾಂಡ್ (ಕೆಕೆಆರ್), ಕೀರನ್ ಪೊಲಾರ್ಡ್ (ಮುಂಬೈ ಇಂಡಿಯನ್ಸ್), 4.8 ಕೋಟಿ ರೂ.

* 2011 : ಗೌತಮ್ ಗಂಭೀರ್ (ಕೆಕೆಆರ್), 14.9 ಕೋಟಿ ರೂ.

* 2012 : ರವೀಂದ್ರ ಜಡೇಜಾ (CSK), 12.8 ಕೋಟಿ ರೂ.

* 2013 : ಗ್ಲೆನ್ ಮ್ಯಾಕ್ಸ್‌ವೆಲ್ (ಮುಂಬೈ ಇಂಡಿಯನ್ಸ್), 6.3 ಕೋಟಿ ರೂ.

* 2014 : ಯುವರಾಜ್ ಸಿಂಗ್ (RCB) 14 ಕೋಟಿ ರೂ.

* 2015 : ಯುವರಾಜ್ ಸಿಂಗ್ (ಡೆಲ್ಲಿ ಡೇರ್ ಡೆವಿಲ್ಸ್), 16 ಕೋಟಿ ರೂ.

* 2016 : ಶೇನ್ ವ್ಯಾಟ್ಸನ್ (RCB), 9.5 ಕೋಟಿ ರೂ.

* 2017 : ಬೆನ್ ಸ್ಟೋಕ್ಸ್ (ರೈಸಿಂಗ್ ಪುಣೆ ಜೈಂಟ್ಸ್), 14.5 ಕೋಟಿ ರೂ.

* 2018 : ಬೆನ್ ಸ್ಟೋಕ್ಸ್ (ರಾಜಸ್ಥಾನ್ ರಾಯಲ್ಸ್), 12.5 ಕೋಟಿ ರೂ.

* 2019 : ಜಯದೇವ್ ಉನದ್ಕತ್ (ರಾಜಸ್ಥಾನ), ವರುಣ್ ಚಕ್ರವರ್ತಿ (ಪಂಜಾಬ್), 8.4 ಕೋಟಿ ರೂ.

* 2020 : ಪ್ಯಾಟ್ ಕಮ್ಮಿನ್ಸ್ (ಕೆಕೆಆರ್), 15.5 ಕೋಟಿ ರೂ.

* 2021 : ಕ್ರಿಸ್ ಮೋರಿಸ್ (ರಾಜಸ್ಥಾನ), 16.25 ಕೋಟಿ ರೂ.

* 2022 : ಇಶಾನ್ ಕಿಶನ್ (ಮುಂಬೈ ಇಂಡಿಯನ್ಸ್), 15.25 ಕೋಟಿ ರೂ.

* 2023 : ಸ್ಯಾಮ್ ಕರ್ರಾನ್ (ಪಂಜಾಬ್ ಕಿಂಗ್ಸ್), 18.5 ಕೋಟಿ ರೂ.

* 2024 : ಮಿಚೆಲ್ ಸ್ಟಾರ್ಕ್ (ಕೆಕೆಆರ್), 24.75 ಕೋಟಿ ರೂ.

ಇದೇ ಸಂದರ್ಭದಲ್ಲಿ ಈ ವರ್ಷ ಎಲ್ಲ ಐಪಿಎಲ್​ ಫ್ರಾಂಚೈಸಿಗಳು ತಮ್ಮ ರಿಟೀನ್​ ಪಟ್ಟಿಯನ್ನು ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಪ್ರಸ್ತುತ ಮಾಹಿತಿಯ ಪ್ರಕಾರ, ಪ್ರತಿ ಫ್ರಾಂಚೈಸ್ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು. ಗರಿಷ್ಠ ಐವರು ಕ್ಯಾಪ್ಡ್ ಆಟಗಾರರು ಮತ್ತು ಇಬ್ಬರು ಅನ್ ಕ್ಯಾಪ್ಡ್ ಆಟಗಾರರು ಇರುತ್ತಾರೆ. ಐಪಿಎಲ್-2025 ಹರಾಜು ನವೆಂಬರ್ 25 ಅಥವಾ 26 ರಂದು ರಿಯಾದ್‌ನಲ್ಲಿ ನಡೆಯುವ ಸಾಧ್ಯತೆಯಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net