ರಸ್ತೆ ಬದಿಯ ಗೂಡಂಗಡಿಯಲ್ಲಿ ಟೀ ಕುಡಿದ ಸಚಿನ್​ ತೆಂಡೂಲ್ಕರ್​; ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್​

sachin
Published on

ಬೆಳಗಾವಿ: ಸಾಮಾನ್ಯವಾಗಿ ಪ್ರಖ್ಯಾತ ಸೆಲೆಬ್ರಿಟಿಗಳು, ಕ್ರಿಕೆಟ್​​ ಆಟಗಾರರು ತಮ್ಮ ಸರಳತೆಯ ಮೂಲಕ ಆಗಾಗ ಸುದ್ದಿಯಲ್ಲಿರುತ್ತಾರೆ. ಇದಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಹೊರತಲ್ಲ. ಇದೀಗ ಬೆಳಗಾವಿಯ ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಟೀ ಕುಡಿದು ಸಚಿನ್​​ ಸರಳತೆ ಮೆರೆದಿದ್ದಾರೆ.

ಮುಂಬೈ ಬೆಳಗಾವಿ ಮಾರ್ಗವಾಗಿ ಕುಟುಂಬ ಸಮೇತ ಗೋವಾಕ್ಕೆ ತೆರಳುತ್ತಿದ್ದ ಸಚಿನ್​​ ಮಾರ್ಗಮಧ್ಯೆ ಟೀ ಕುಡಿಯಲು ತಮ್ಮ ಕಾರನ್ನು ನಿಲ್ಲಿಸಿದ್ದಾರೆ. ನಂತರ ಬೆಳಗಾವಿ ಹೊರ ವಲಯದ ಮಚ್ಚೆ ಬಳಿಯ ರಾಷ್ಟ್ರೀಯ ಹೆದ್ದಾರಿ ನಾಲ್ಕು(ಎ) ಬಳಿಯಿರುವ ವೈಜು ನಿತೂರ್ಕರ್ ಎಂಬುವವರಿಗೆ ಸೇರಿದ ಫೌಜಿ ಟೀ ಸ್ಟಾಲ್​​ನಲ್ಲಿ ಚಹಾ ಸವಿದಿದ್ದಾರೆ. ಈ ವೇಳೆ ಸಚಿನ್​ ಅವರನ್ನು ನೋಡಿ, ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಗಳ ಜತೆಯಲ್ಲಿ ಫೋಟೋ ಕ್ಲಿಕಿಸಿಕೊಂಡಿದ್ದಾರೆ.

ಸದ್ಯ ಸಚಿನ್​​ ಅವರ ಈ ಸರಳತೆಯ ವಿಡಿಯೋವನ್ನು ವೈಜು ನಿತೂರ್ಕರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net